ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಡೆಸುವ ಬಗ್ಗೆ ಈಗ ಯೋಚನೆ ಮಾಡುತ್ತಿಲ್ಲ: ಬಿಸಿಸಿಐ ಖಜಾಂಚಿ

Bcci Is Not Thinking Of Staging Ipl Now, Says Treasurer Arun Dhumal

ಕೊರೊನಾ ವೈರಸ್ ಕಾರಣದಿಂದಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಬ್ದವಾಗಿದೆ. ಸದ್ಯಕ್ಕೆ ಕ್ರಿಕೆಟ್ ಸೇರಿದಂತೆ ಯಾವ ಕ್ರೀಡಾಕೂಟಗಳೂ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಬಗ್ಗೆ ಬಿಸಿಸಿಐ ಖಜಾಂಚಿಯಾಗಿರುವ ಅರುಣ್ ಧುಮಲ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಆರಂಭದ ಕುರಿತಾದ ಚರ್ಚೆಗಳಿಗೂ ಅವರು ಉತ್ತರವನ್ನು ನೀಡಿದ್ದಾರೆ.

ಇದೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ನಡೆಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು ಇದಕ್ಕೆ ಬಿಸಿಸಿಐ ಖಜಾಂಚಿಯಾಗಿರುವ ಅರುಣ್ ಧುಮಲ್ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಕೊರೊನಾ ವೈರಸ್ ಮುಕ್ತಾಯವಾಗುವವರೆಗೆ ಈ ಯಾವ ನಿರ್ಧಾರವನ್ನು ಕೂಡ ಬಿಸಿಸಿಐ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್

ಐಪಿಎಲ್ ನಡೆಸುವ ಬಗ್ಗೆಯೇಯೂ ಯಾವ ಚಿಂತನೆಗಳನ್ನೂ ಬಿಸಿಸಿಐ ನಡೆಸುತ್ತಿಲ್ಲ. ಕೊರೊನಾ ವೈರಸ್ ಅಂತ್ಯದ ಬಳಿಕವೇ ಈ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತದೆ. ಸ್ತಬ್ಧವಾಗಿರುವ ಕ್ರಿಕೆಟ್ ಮರು ಆರಂಭಗೊಳ್ಳುವ ಬಗ್ಗೆ ನಿರ್ಧಾರವನ್ನು ಆ ಬಳಿಕವೇ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಕ್ರಿಕೆಟ್ ಇನ್ನು ಆರಂಭಗೊಳ್ಳಬಹುದು ಎಂಬುದು ಖಚಿತವಾದ ಬಳಿಕವೇ ಕ್ರೀಡಾಕೂಟಗಳನ್ನು ನಡೆಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆ ಬಗ್ಗೆ ಲಾಕ್‌ಡೌನ್‌ಗೆ ಮುನ್ನ ಚರ್ಚೆ ನಡೆಸಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಎಲ್ಲವೂ ಸರಿಯಾದ ಬಳಿಕ ಈ ಬಗ್ಗೆ ಚಿಂತಿಸಲಾಗುತ್ತದೆ ಎಂದು ಅರುಣ್ ಧುಮಲ್ ಹೇಳಿದ್ದಾರೆ.

ಆರಂಭಿಕನಾಗಿ ಸಚಿನ್‌ಗಿಂತ ರೋಹಿತ್ ಬೆಸ್ಟ್ ಎಂದ ನ್ಯೂಜಿಲೆಂಡ್ ಮಾಜಿ ವೇಗಿಆರಂಭಿಕನಾಗಿ ಸಚಿನ್‌ಗಿಂತ ರೋಹಿತ್ ಬೆಸ್ಟ್ ಎಂದ ನ್ಯೂಜಿಲೆಂಡ್ ಮಾಜಿ ವೇಗಿ

ವಿಶ್ವವೇ ಈಗ ಕೊರೊನಾ ವೈರಸ್‌ನಿಂದಾಗಿ ನರಳುತ್ತಿದೆ. ಇಂತಾ ಸಂದರ್ಭದಲ್ಲಿ ಐಪಿಎಲ್ ನಡೆಸುವ ಬಗ್ಗೆ ಆಲೋಚನೆಯನ್ನು ನಡೆಸುವ ಸ್ಥಿತಿಯಲ್ಲಿ ಬಸಿಸಿಐ ಇಲ್ಲ. ಈವರೆಗೂ ಯಾವುದೇ ಯೋಜನೆಗಳನ್ನೂ ಹಾಕಿಕೊಂಡಿಲ್ಲ ಎಂದು ಅರುಣ್ ದುಮಲ್ ಹೇಳಿಕೆಯನ್ನು ನೀಡಿದ್ದಾರೆ.

Story first published: Friday, May 8, 2020, 14:13 [IST]
Other articles published on May 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X