ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಷ್ಟೇ ಕೆಟ್ಟ ಪ್ರದರ್ಶನ ನೀಡಿದ್ರೂ ಕೊಹ್ಲಿಯನ್ನು ಬಿಸಿಸಿಐ ಕೈಬಿಡದಿರಲು ಆ ಹಣವೇ ಕಾರಣ ಎಂದ ಪನೇಸರ್!

BCCI isnt trying to drop Virat Kohli because they will face huge financial loss says Monty Panesar

ವಿರಾಟ್ ಕೊಹ್ಲಿ ಸದ್ಯ ತಮ್ಮ ಕ್ರಿಕೆಟ್‍ ವೃತ್ತಿಜೀವನದಲ್ಲಿ ಹಿಂದೆಂದೂ ಕಂಡಿರದ ರೀತಿ ಕೆಟ್ಟ ಫಾರ್ಮ್ ಕಂಡು ನೆಲಕಚ್ಚಿದ್ದಾರೆ ಎಂದು ಹೇಳಬಹುದು. ಈ ಹಿಂದೆ ಶತಕದ ಮೇಲೆ ಶತಕ ಮತ್ತು ರನ್ ಮೇಲೆ ರನ್ ಗಳಿಸಿ ಕಿಂಗ್ ಆಫ್ ಸೆಂಚುರಿ ಮತ್ತು ರನ್ ಮೆಷಿನ್ ಎಂದು ಕರೆಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಿನ ಪಂದ್ಯಗಳಲ್ಲಿ ಮೂವತ್ತರ ಗಡಿ ದಾಟುವುದಕ್ಕೂ ಕೂಡ ಪರದಾಡುತ್ತಿದ್ದಾರೆ.

ಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆ

ಅದರಲ್ಲಿಯೂ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಂತೂ ವಿರಾಟ್ ಕೊಹ್ಲಿ ಅಕ್ಷರಶಃ ಮಂಕಾಗಿದ್ದಾರೆ. ಸಾಲು ಸಾಲು ಅವಕಾಶ ಸಿಕ್ಕರೂ ಸಹ ವಿರಾಟ್ ಕೊಹ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿ ಕಮ್ ಬ್ಯಾಕ್ ಮಾಡುವುದರಲ್ಲಿ ಸಫಲರಾಗುತ್ತಿಲ್ಲ. ಹೀಗೆ ಕೆಟ್ಟ ಫಾರ್ಮ್ ತಲುಪಿರುವ ವಿರಾಟ್ ಕೊಹ್ಲಿ ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳಲಿ ಹಾಗೂ ತಂಡದಿಂದ ಹೊರಗುಳಿದು ಯುವ ಆಟಗಾರರಿಗೆ ಆಡುವ ಅವಕಾಶವನ್ನು ನೀಡಲಿ ಎಂಬ ಅಭಿಪ್ರಾಯಗಳನ್ನು ಹಲವಾರು ಹಿರಿಯ ಕ್ರಿಕೆಟಿಗರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

IND vs ENG: ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಇಂಗ್ಲೆಂಡ್ ನಾಯಕ ಬಟ್ಲರ್ ಹೇಳಿದ್ದೇನು?IND vs ENG: ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಇಂಗ್ಲೆಂಡ್ ನಾಯಕ ಬಟ್ಲರ್ ಹೇಳಿದ್ದೇನು?

ಇನ್ನೂ ಕೆಲವರು ವಿರಾಟ್ ಕೊಹ್ಲಿಗೆ ಇನ್ನೆಷ್ಟು ಅವಕಾಶ ನೀಡಬೇಕು ಎಂದು ಕೊಹ್ಲಿಯ ಕೆಟ್ಟ ಫಾರ್ಮ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ತಮ್ಮ ನೆಚ್ಚಿನ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಕಲೆಹಾಕಿ ಬೇಡದ ಎಸೆತಕ್ಕೆ ಬ್ಯಾಟ್ ಬೀಸಿ ಔಟ್ ಆಗಿ ಮತ್ತೊಮ್ಮೆ ನೆಲಕಚ್ಚಿದರು. ಹೀಗೆ ವಿರಾಟ್ ಕೊಹ್ಲಿ ಎಷ್ಟು ಬಾರಿ ವಿಫಲರಾದರೂ ಸಹ ಬಿಸಿಸಿಐ ಮಾತ್ರ ಅವರನ್ನು ತಂಡದಿಂದ ಕೈ ಬಿಡುವುದಿಲ್ಲ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್ ಹೇಳಿಕೆ ನೀಡಿದ್ದಾರೆ ಹಾಗೂ ಅದಕ್ಕೆ ಕಾರಣವೇನೆಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಬಿಸಿಸಿಐ ಕೊಹ್ಲಿಯನ್ನು ಕೈಬಿಡದಿರಲು ಆ ಹಣ ಕಾರಣ!

ಬಿಸಿಸಿಐ ಕೊಹ್ಲಿಯನ್ನು ಕೈಬಿಡದಿರಲು ಆ ಹಣ ಕಾರಣ!

ಫುಟ್ ಬಾಲ್ ಕ್ರೀಡೆಯಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಹೇಗೋ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಕೂಡ ಹಾಗೆ, ಹೀಗಾಗಿ ವಿರಾಟ್ ಕೊಹ್ಲಿ ತಂಡದಲ್ಲಿದ್ದರೆ ಹೆಚ್ಚು ಪ್ರಾಯೋಜಕತ್ವ ಬರಲಿದೆ ಹಾಗೂ ಅದರಿಂದ ಬಿಸಿಸಿಐಗೆ ದೊಡ್ಡ ಮೊತ್ತದ ಹಣ ಹರಿದುಬರಲಿದೆ ಹೀಗಾಗಿಯೇ ಕೊಹ್ಲಿಯನ್ನು ಬಿಸಿಸಿಐ ಕೈ ಬಿಡುತ್ತಿಲ್ಲ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.

ಕೊಹ್ಲಿಗಿದೆ ಅಪಾರವಾದ ಅಭಿಮಾನಿ ಬಳಗ, ಕೈಬಿಟ್ಟರೆ ನಷ್ಟ ಗ್ಯಾರಂಟಿ

ಕೊಹ್ಲಿಗಿದೆ ಅಪಾರವಾದ ಅಭಿಮಾನಿ ಬಳಗ, ಕೈಬಿಟ್ಟರೆ ನಷ್ಟ ಗ್ಯಾರಂಟಿ

ವಿರಾಟ್ ಕೊಹ್ಲಿಗೆ ಅಪಾರವಾದ ಅಭಿಮಾನಿ ಬಳಗವಿದೆ ಹಾಗೂ ವಿರಾಟ್ ಕೊಹ್ಲಿ ಖ್ಯಾತಿಯಿಂದಾಗಿ ಸಾಕಷ್ಟು ದೊಡ್ಡ ಪ್ರಾಯೋಜಕರು ಹಣ ಹೂಡುತ್ತಿದ್ದಾರೆ, ಹೀಗಾಗಿ ಫಲಿತಾಂಶ ಏನೇ ಬಂದರೂ ವಿರಾಟ್ ಕೊಹ್ಲಿ ತಂಡದಲ್ಲಿ ಉಳಿದುಕೊಂಡಿದ್ದಾರೆ, ವಿರಾಟ್ ಕೊಹ್ಲಿಗೆ ಇಂಗ್ಲೆಂಡ್‌ನಲ್ಲಿಯೂ ಅಪಾರವಾದ ಅಭಿಮಾನಿ ಬಳಗವಿದ್ದು ಬಿಸಿಸಿಐ ಅವರನ್ನು ತಂಡದಿಂದ ಕೈಬಿಡುವ ಸಾಹಸಕ್ಕೆ ಕೈ ಹಾಕುತ್ತಿಲ್ಲ ಮತ್ತು ತಂಡದಿಂದ ಕೈಬಿಡುವ ಪ್ರಯತ್ನ ಮಾಡಿದರೆ ನಷ್ಟ ಉಂಟಾಗಬಹುದು ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಶತಕ ಬಾರಿಸಿ ಕಳೆದಿವೆ 964 ದಿನಗಳು

ಕೊಹ್ಲಿ ಶತಕ ಬಾರಿಸಿ ಕಳೆದಿವೆ 964 ದಿನಗಳು

ಇನ್ನು ವಿರಾಟ್ ಕೊಹ್ಲಿ ಶತಕ ಬಾರಿಸಿ ಸಾವಿರ ದಿನಗಳು ಸಮೀಪಿಸುತ್ತಿವೆ. ಹೌದು, ವಿರಾಟ್ ಕೊಹ್ಲಿ ಅಂತಿಮವಾಗಿ ಶತಕ ಬಾರಿಸಿದ್ದು 2020ರ ನವೆಂಬರ್ ತಿಂಗಳಿನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ. ಇದಾದ ನಂತರ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಯಾವುದೇ ಪಂದ್ಯದಲ್ಲಿಯೂ ಶತಕ ಬಾರಿಸದೇ ಇದ್ದು, ನಿನ್ನೆಗೆ ( ಜುಲೈ 14 ) 964 ದಿನಗಳು ಕಳೆದಿವೆ ಹಾಗೂ ಆಗಸ್ಟ್ 19ಕ್ಕೆ ಸಾವಿರ ದಿನಗಳು ತುಂಬಲಿವೆ.

Story first published: Friday, July 15, 2022, 15:13 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X