ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಿಂದ ಪಾಕಿಸ್ತಾನ ನಿಷೇಧಿಸುವಂತೆ ಐಸಿಸಿಯ ಕೋರಲಿದೆ ಬಿಸಿಸಿಐ!

BCCI likely to approach ICC for complete ban on Pakistan in World Cup

ನವದೆಹಲಿ, ಫೆಬ್ರವರಿ 21: ಪುಲ್ವಾಮಾ ದಾಳಿ ಪಾಕಿಸ್ತಾನ ಕ್ರಿಕೆಟ್‌ಗೆ ಕಂಟಕವಾಗುವುದರಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಅಧಿಕ ಭಾರತೀಯ ಯೋಧರು ಮೃತರಾದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನವನ್ನು ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಿಂದ ನಿಷೇಧಿಸುವಂತೆ ಬಿಸಿಸಿಐಯು ಐಸಿಸಿ ಮೊರೆ ಹೋಗುವುದರಲ್ಲಿದೆ.

ಏಟಿಗೆ ತಿರುಗೇಟು ಕೊಡಲೇಬೇಕು: ಪುಲ್ವಾಮಾ ದಾಳಿಗೆ ಕಿಡಿಯಾದ ಚಾಹಲ್!ಏಟಿಗೆ ತಿರುಗೇಟು ಕೊಡಲೇಬೇಕು: ಪುಲ್ವಾಮಾ ದಾಳಿಗೆ ಕಿಡಿಯಾದ ಚಾಹಲ್!

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯ ಆಟವಾಗಿ ಗುರುತಿಸಿಕೊಂಡಿದೆ. ಎರಡೂ ದೇಶಗಳೂ ವಿಶ್ವಮಟ್ಟದ ಕ್ರಿಕೆಟ್‌ಗಾಗಿ ತನ್ನದೇ ಛಾಪು ಮೂಡಿಸಿದೆ. ಭಯೋತ್ಮಾದನೆ ನಿಟ್ಟಿನಲ್ಲಿ ವಿಶ್ವಕ್ಕೆ ತಲೆನೋವಾಗಿರುವ ಪಾಕ್‌ ಕಿವಿ ಹಿಂಡುವ ಬಗೆಯನ್ನು ಬಿಸಿಸಿಐ ಮನಗಂಡಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಪಾಕ್ ನಿಷೇಧಿಸುವಂತೆ ಬಿಸಿಸಿಯು ಐಸಿಸಿಯನ್ನು ವಿನಂತಿಸಿಕೊಳ್ಳುವುದರಲ್ಲಿದೆ.

ಐಸಿಸಿಗೆ ಪತ್ರ ಬರೆದಿರುವ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಅವರು ಪಾಕಿಸ್ತಾನವನ್ನು ಈ ಬಾರಿಯ ವಿಶ್ವಕಪ್‌ನಿಂದ ನಿಷೇಧಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ರಾಯ್ ಅವರು ಅಂತಿಮ ನಿರ್ಧಾರ ತಿಳಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದಲೂ 'ಪಾಕಿಸ್ತಾನ ಕ್ರಿಕೆಟರ್ಸ್' ಹೊರಕ್ಕೆಚಿನ್ನಸ್ವಾಮಿ ಕ್ರೀಡಾಂಗಣದಿಂದಲೂ 'ಪಾಕಿಸ್ತಾನ ಕ್ರಿಕೆಟರ್ಸ್' ಹೊರಕ್ಕೆ

ಮೇ 30ರಿಂದ ವಿಶ್ವಕಪ್ ಪಂದ್ಯಗಳು ಆರಂಭಗೊಳ್ಳಲಿವೆ. ವೇಳಾಪಟ್ಟಿಯ ಪ್ರಕಾರ ಜೂನ್ 16ರಂದು ಭಾರತ-ಪಾಕ್ ತಂಡಗಳು ಮೊದಲ ಮುಖಾಮುಖಿಯಾಗುವುದರಲ್ಲಿತ್ತು. ಆದರೆ ಪಾಕ್ ಜೊತೆ ಪಂದ್ಯ ಆಡುವುದೋ ಬೇಡವೋ ಎಂಬ ಗೊಂದರಲ್ಲಿ ಭಾರತವಿತ್ತು. ಇದಕ್ಕೊಂದು ಉಪಾಯ ಮಾಡಿರುವ ಬಿಸಿಸಿಐ ಪಾಕ್ ವಿರುದ್ಧ ತನ್ನ ತಂಡವನ್ನು ಹಿಂದಕ್ಕೆ ಪಡೆಯುವ ಬದಲು ಪಾಕನ್ನೇ ನಿಷೇಧಿಸಲು ಯೋಚಿಸಿದೆ.

Story first published: Thursday, February 21, 2019, 11:29 [IST]
Other articles published on Feb 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X