ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಕ್ಕೆ ಮತ್ತೆ ಕನ್ನಡಿಗ ಅನಿಲ್ ಕುಂಬ್ಳೆ ಹೆಡ್‌ ಕೋಚ್?

BCCI likely to bring back Anil Kumble as team Indias Head coack again

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಟಿ20 ವಿಶ್ವಕಪ್‌ ಬಳಿಕ ಎರಡು ಪ್ರಮುಖ ಬದಲಾವಣೆಗಳಾಗಲಿವೆ. ಒಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಟಿ20 ಕ್ರಿಕೆಟ್ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದರೆ ಇನ್ನೊಂದು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಐಪಿಎಲ್: 16 ವರ್ಷದ ಕೆಳಗಿನ ಅಭಿಮಾನಿಗಳಿಗೆ ಶಾರ್ಜಾ ಸ್ಟೇಡಿಯಂಗೆ ನೋ ಎಂಟ್ರಿಐಪಿಎಲ್: 16 ವರ್ಷದ ಕೆಳಗಿನ ಅಭಿಮಾನಿಗಳಿಗೆ ಶಾರ್ಜಾ ಸ್ಟೇಡಿಯಂಗೆ ನೋ ಎಂಟ್ರಿ

ವಿರಾಟ್ ಕೊಹ್ಲಿ ಈಗಾಗಲೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ತಾನು ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿಕೊಂಡಿದ್ದಾರೆ. ಮುಖ್ಯ ಕೋಚ್ ರವಿ ಶಾಸ್ತ್ರಿಯ ಅವಧಿ ವಿಶ್ವಕಪ್‌ಗೆ ಕೊನೆಯಾಗುವುದರಿಂದ ಕೋಚ್‌ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಲಿದೆ.

ಈಗಿನ ಮಾಹಿತಿಯಂತೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಭಾರತದ ಮಾಜಿ ಸ್ಪಿನ್ ಮಾಂತ್ರಿಕ, ಕನ್ನಡಿಗ ಅನಿಲ್ ಕುಂಬ್ಳೆ ಬರುವ ನಿರೀಕ್ಷೆಯಿದೆ. ಈ ಮೊದಲು 2016-17ರಲ್ಲಿ ಕುಂಬ್ಳೆ ಭಾರತೀಯ ತಂಡ ಮುನ್ನಡೆಸಿದ್ದರು. ಆಗ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಇದ್ದರು. ಈ ಕ್ರಿಕೆಟ್ ಸಲಹಾ ಸಮಿತಿ ಶಾಸ್ತ್ರಿ ಬದಲಿಗೆ ಕುಂಬ್ಳೆ ಅವರನ್ನು ಕೋಚ್ ಆಗಿ ಆರಿಸಿತ್ತು.

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತ ಬಳಿಕ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಮಧ್ಯೆ ಮನಸ್ತಾಪ ಉಂಟಾಗಿ ಅನಿಲ್ ಕುಂಬ್ಳೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಬಿಸಿಸಿಐ ಕುಂಬ್ಳೆ ಅವರಿಗೆ ಕೋಚ್ ಸ್ಥಾನ ನೀಡಲು ಯೋಚಿಸುತ್ತಿದೆ ಎನ್ನಲಾಗಿದೆ.

ಅಂಕಿ ಅಂಶಗಳ ಪ್ರಕಾರ KKR ಮತ್ತು RCB ನಡುವೆ ಮೇಲುಗೈ ಯಾರದ್ದು? | Oneindia Kannada

ಮೂಲವೊಂದರ ಪ್ರಕಾರ, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕವೂ ಕುಂಬ್ಳೆ ಕೋಚ್ ಆಗಿ ಮುಂದುವರೆಯೋದು ಸೌರವ್ ಗಂಗೂಲಿಗೆ ಇಷ್ಟವಿತ್ತು. ಆದರೆ ಕುಂಬ್ಳೆ ಸ್ಥಾನದಿಂದ ಕೆಳಗಿಳಿದಿದ್ದರು. ಈಗ ಮತ್ತೆ ಕುಂಬ್ಳೆಗೆ ಕೋಚ್ ಹುದ್ದೆ ನೀಡಲು ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಯೋಚಿಸಿದ್ದಾರೆ. ಹೀಗಾಗಿ ಕೋಚ್ ಸ್ಥಾನಕ್ಕೆ ಕುಂಬ್ಳೆ ಅರ್ಜಿ ಸಲ್ಲಿಸಲು ಗಂಗೂಲಿ ಮನ ಒಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Story first published: Sunday, September 19, 2021, 16:55 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X