ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಹು ನಗರಗಳಲ್ಲಿ ಐಪಿಎಲ್ 2021 ಆಯೋಜಿಸಲು ಯೋಚಿಸುತ್ತಿದೆ ಬಿಸಿಸಿಐ

BCCI looking at multiple cities to host IPL 2021

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿಯನ್ನು ಭಾರತದ ಬೇರೆ ಬೇರೆ ನಗರಗಳಲ್ಲಿ ಆಯೋಜಿಸಲು ಬೋರ್ಡ್ ಆಫ್ ಕಂಟ್ರೋಲ್ ಪಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸುತ್ತಿದೆ ಎಂದು ವರದಿಯೊಂದು ಹೇಳಿದೆ.

'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!'ನರೇಂದ್ರ ಮೋದಿ ಸ್ಟೇಡಿಯಂ'ಗೆ ಅಪಸ್ವರ: ಜೋ ರೂಟ್ ಹೇಳಿದ್ದೇನು ಗೊತ್ತಾ?!

ಆರಂಭದಲ್ಲಿ 14ನೇ ಆವೃತ್ತಿಯ ಐಪಿಎಲ್ ಭಾರತದಲ್ಲಿ ನಡೆಯುತ್ತೋ ಇಲ್ಲ ವಿದೇಶದಲ್ಲಿ ನಡೆಯುತ್ತೋ ಎಂಬ ಅನುಮಾನ ಕಾಡಿತ್ತು. ಆ ಬಳಿಕ ಈ ಬಾರಿಯ ಐಪಿಎಲ್‌ ಭಾರತದಲ್ಲೇ ನಡೆಯಲಿದೆ. ಮುಂಬೈನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ ಎನ್ನಲಾಗುತ್ತಿತ್ತು.

'ಆರಂಭದಲ್ಲಿ ನಾವು ಯೋಚಿಸಿದ್ದಕ್ಕೆ ಬದಲಾಗಿ ಸಾಧ್ಯವಿರುವ ಬೇರೆ ಬೇರೆ ತಾಣಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲಾಗುತ್ತದೆಯೇ ಎಂದು ನಾವು ಎದುರು ನೋಡುತ್ತಿದ್ದೇವೆ. ಕೊರೊನಾ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಹೆಚ್ಚಿನ ಅಭಿಮಾನಿಗಳನ್ನು ತಲುಪಲು ನಾವು ಹೀಗೆ ಯೋಚಿಸುತ್ತಿದ್ದೇವೆ,' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಅತಿಯಾ ಶೆಟ್ಟಿ ಚಿತ್ರಕ್ಕೆ ವಿಭಿನ್ನ ಕಾಮೆಂಟ್ ಹಾಕಿದ ಕೆಎಲ್ ರಾಹುಲ್ಅತಿಯಾ ಶೆಟ್ಟಿ ಚಿತ್ರಕ್ಕೆ ವಿಭಿನ್ನ ಕಾಮೆಂಟ್ ಹಾಕಿದ ಕೆಎಲ್ ರಾಹುಲ್

ತಾಣಗಳ ಬಗ್ಗೆ ಅಂತಿಮ ನಿರ್ಧಾರ ತಾಳಲು ಬಯೋಬಬಲ್ ಮತ್ತು ಓಡಾಟ ಸಂಗತಿಗಳ ಕಾರ್ಯಸಾಧ್ಯತೆಯು ನಿರ್ಣಾಯಕವಾಗಲಿದೆ. ಇದು ಕಠಿಣ ಪರಿಸ್ಥಿತಿ. ಹೀಗಾಗಿ ಭಾಗವಹಿಸುವವರ ಆರೋಗ್ಯ ನಮ್ಮ ಮೊದಲ ಕಾಳಜಿಯಾಗಿದೆ,' ಎಂದು ಮೂಲ ಹೇಳಿದೆ. ಕಳೆದ ಬಾರಿಯ ಟೂರ್ನಿ ಕೊರೊನಾ ಕಾರಣ ಯುನೈಟೆಡ್ ಅರಬ್‌ನಲ್ಲಿ ನಡೆದಿತ್ತು.

Story first published: Saturday, February 27, 2021, 7:40 [IST]
Other articles published on Feb 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X