ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ನಾಯಕತ್ವವನ್ನ ಕೊಹ್ಲಿಯಿಂದ, ರೋಹಿತ್ ಶರ್ಮಾಗೆ ನೀಡಲು BCCI ಚಿಂತನೆ!

Virat kohli

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಜಯದೊಂದಿಗೆ ತವರಿನಲ್ಲಿ ದಾಖಲೆಯ ಜಯ ಸಾಧಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ 372ರನ್‌ಗಳ ಬೃಹತ್ ಜಯ ಸಾಧಿಸಿದೆ. ಈ ಮೂಲಕ ಭಾರತ ಸ್ವದೇಶದಲ್ಲಿ ಸತತ 14ನೇ ಸರಣಿಯನ್ನ ತನ್ನದಾಗಿಸಿಕೊಂಡಿದೆ.

ಈ ಗೆಲುವಿನೊಂದಿಗೆ ಭಾರತ ಮತ್ತೊಮ್ಮೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಇಷ್ಟಾದ್ರೂ ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ ಎಂದ್ರೆ ನಂಬಲು ಕಷ್ಟಸಾಧ್ಯ. ಹೌದು
ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದಾಗಿ ತಿಳಿಸಿದ್ರು. ಆದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲೂ ನಾಯಕತ್ವ ಬಿಟ್ಟುಕೊಡುವುದನ್ನು ಎದುರು ನೋಡುತ್ತಿದೆ ಎಂದು ವರದಿಯಾಗಿದೆ.

ಓಡಿಐ ನಾಯಕತ್ವ ಬಿಟ್ಟುಕೊಡ್ತಾರಾ ವಿರಾಟ್?

ಓಡಿಐ ನಾಯಕತ್ವ ಬಿಟ್ಟುಕೊಡ್ತಾರಾ ವಿರಾಟ್?

ಏಕದಿನ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳ ಒಡೆಯನಾದ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳನ್ನ ಹೊರತುಪಡಿಸಿ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಟಿ20 ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಾರ ಎಂಬುದು ಪ್ರಶ್ನೆಯಾಗಿದೆ.

ಶೂನ್ಯಕ್ಕೆ ಔಟಾದ್ರೂ ದಾಖಲೆ ಬರೆದ ವಿರಾಟ್: ಇದು ಬೇಕಿತ್ತಾ ಕೊಹ್ಲಿ!

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ಓಡಿಐ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಬಯಸುತ್ತಿದೆ ಎಂದು ವರದಿಗಳು ಹರಿದಾಡುತ್ತಿವೆ. ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಆತ ನಾಯಕತ್ವದಿಂದ ಕೆಳಗಿಳಿಯುದು ಒಳ್ಳೆಯದು ಎಂದು ಬಯಸುತ್ತಿದೆ. ಜೊತೆಗೆ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್‌ಗೆ ಒಬ್ಬನೇ ನಾಯಕನನ್ನ ನಿಯೋಜಿಸಲು ಮನಸ್ಸು ಮಾಡಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತದ ಏಕದಿನ ತಂಡವನ್ನು ಪ್ರಕಟಿಸುವುದರಲ್ಲಿ ಕೊಹ್ಲಿಯ ಏಕದಿನ ನಾಯಕತ್ವದ ಭವಿಷ್ಯ ನಿರ್ಧಾರವಾಗಲಿದೆ. ಏಕೆಂದರೆ 2023 ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ಮತ್ತು ಮುನ್ನಡೆಸಲು ರೋಹಿತ್‌ಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ನಂಬಿದ್ದಾರೆ.

"ಈಗಿರುವ ಪರಿಸ್ಥಿತಿಯಲ್ಲಿ, ವಿರಾಟ್ ತಮ್ಮ ಒಡಿಐ ನಾಯಕತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು ಕಷ್ಟಕರವೆಂದು ತೋರುತ್ತದೆ ಆದರೆ ಈ ವರ್ಷ ಓಡಿಐ ಪ್ರಮುಖವಲ್ಲದ ಕಾರಣ ಮತ್ತು ಇಲ್ಲಿ ಕೆಲವೇ ಪಂದ್ಯಗಳು ಇರುವುದರಿಂದ ನಿರ್ಧಾರವನ್ನ ವಿಳಂಬಗೊಳಿಸುವ ಬಗ್ಗೆ ಯೋಚಿಸಬಹುದು" ಎಂದು ಬಿಸಿಸಿಐ ಹಿರಿಯ ಮೂಲವು ಪಿಟಿಐಗೆ ತಿಳಿಸಿದೆ.

ಅಂಪೈರ್ ಕಾಲೆಳೆದ ವಿರಾಟ್: ನಾನು ಅಲ್ಲಿಗೆ ಬರುವೆ, ನೀವು ಇಲ್ಲಿಗೆ ಬನ್ನಿ ಎಂದ ಕೊಹ್ಲಿ

2023ರ ವಿಶ್ವಕಪ್ ಮೇಲೆ ಬಿಸಿಸಿಐ ಟಾರ್ಗೆಟ್

2023ರ ವಿಶ್ವಕಪ್ ಮೇಲೆ ಬಿಸಿಸಿಐ ಟಾರ್ಗೆಟ್

ಹೌದು, ಮುಂಬರುವ ಏಕದಿನ ವಿಶ್ವಕಪ್‌ ಮೇಲೆ ಬಿಸಿಸಿಐ ಕಣ್ಣಟ್ಟಿದೆ. ಈಗಲೇ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನ ನಾಯಕ ಸ್ಥಾನದಲ್ಲಿ ಕೂರಿಸಿದ್ರೆ, ತಂಡವು ಸಿದ್ಧಗೊಳ್ಳಲು ಸಹಾಯವಾಗುತ್ತದೆ. ಜೊತೆಗೆ ರೋಹಿತ್ ಶರ್ಮಾ ಕೂಡ ನಾಯಕತ್ವದ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಸಾಧ್ಯ ಎನ್ನುವುದು ಬಿಸಿಸಿಐ ಮುಂದಾಲೋಚನೆಯಾಗಿದೆ.

ರೋಹಿತ್‌ಗೆ ನಾಯಕತ್ವ ಹಸ್ತಾಂತರವನ್ನ ಬಯಸುತ್ತಿದ್ದಾರೆ ದ್ರಾವಿಡ್?

ರೋಹಿತ್‌ಗೆ ನಾಯಕತ್ವ ಹಸ್ತಾಂತರವನ್ನ ಬಯಸುತ್ತಿದ್ದಾರೆ ದ್ರಾವಿಡ್?

ವಾಸ್ತವವಾಗಿ, ಭಾರತದ ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತರಾಷ್ಟ್ರೀಯ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಸಂಪೂರ್ಣ ವೈಟ್ ಬಾಲ್ ನಾಯಕತ್ವವನ್ನು ಹಸ್ತಾಂತರಿಸಲು ಬಯಸುತ್ತಿದ್ದಾರೆ ಎಂಬ ಊಹಾಪೋಹಗಳಿವೆ.

ಟೆಸ್ಟ್ ಉಪನಾಯಕತ್ವ ಕಳೆದುಕೊಳ್ಳಲಿರುವ ರಹಾನೆ

ಟೆಸ್ಟ್ ಉಪನಾಯಕತ್ವ ಕಳೆದುಕೊಳ್ಳಲಿರುವ ರಹಾನೆ

ಅತ್ಯಂತ ಕಳಪೆ ಫಾರ್ಮ್‌ನಿಂದ ಟೀಕೆಗೊಳಗಾಗಿರುವ ಟೀಂ ಇಂಡಿಯಾ ಟೆಸ್ಟ ತಂಡದ ಉಪನಾಯಕ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಹ್ಯಾಮ್‌ಸ್ಟ್ರಿಂಗ್‌ನಿಂದ ಆತ ಹೊರಗಿದ್ದಾನೆ ಎಂದು ಭಾರತೀಯ ಮಂಡಳಿ ತಿಳಿಸಿದೆ. ಆದರೆ ಬ್ಯಾಟ್‌ನ ಕಳಪೆ ಫಾರ್ಮ್‌ನಿಂದಾಗಿ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಪನಾಯಕತ್ವದ ಪಾತ್ರವನ್ನು ಉಳಿಸಿಕೊಳ್ಳದಿರಬಹುದು ಎಂದು ಬಿಸಿಸಿಐ ಅಧಿಕಾರಿ ಭಾವಿಸಿದ್ದಾರೆ.

''ನಿಸ್ಸಂಶಯವಾಗಿ, ಅವರು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಿದ್ದಾರೆ ಆದರೆ ಅವರು ಗಾಯಗೊಂಡಿಲ್ಲದಿದ್ದರೆ, ಅವರನ್ನು ಹನ್ನೊಂದರಿಂದ ಕೈಬಿಡುವ ಹೆಚ್ಚಿನ ಅವಕಾಶವಿದೆ. ಹಾಗಾಗಿ ಅವರು ಖಚಿತವಾಗಿ ಅವರು ಹನ್ನೊಂದರ ಬಳಗದಲ್ಲಿ ಆಡದಿದ್ದರೆ ಅವರು ಹೇಗೆ ಉಪನಾಯಕರಾಗಿ ಉಳಿಯಬಹುದು. ರಹಾನೆ ಅವರನ್ನು ಉಪ ನಾಯಕತ್ವದಿಂದ ತೆಗೆದುಹಾಕಿದರೆ, ರೋಹಿತ್ ಸ್ಪಷ್ಟ ಆಯ್ಕೆಯಾಗಿದ್ದಾರೆ. ಅವರು ವಾಸ್ತವವಾಗಿ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಉಪನಾಯಕರಾಗಿದ್ದರು," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದರು.

ಭಾರತವು ಮೂರು ಟೆಸ್ಟ್ ಪಂದ್ಯಗಳನ್ನು ಹಾಗೂ ಓಡಿಐ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಪ್ರಾರಂಭವಾಗುತ್ತದೆ. ಈ ಮೊದಲು ವೇಳಾಪಟ್ಟಿಯ ಪ್ರಕಾರ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ 9 ದಿನಗಳ ಮೊದಲು (ಡಿಸೆಂಬರ್ 17) ಪ್ರಾರಂಭವಾಗಬೇಕಿತ್ತು.

Story first published: Monday, December 6, 2021, 17:29 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X