ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮುಖ್ಯಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್ ಅರ್ಜಿ?

BCCI may approach Anil Kumble, VVS Laxman for head coachs post

ನವದೆಹಲಿ: ಟಿ20 ವಿಶ್ವಕಪ್‌ ಬಳಿಕ ಈಗ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಅವಧಿ ಪೂರ್ಣಗೊಳ್ಳಲಿದೆ. ಮುಖ್ಯ ಕೋಚ್ ಸ್ಥಾನಕ್ಕೆ ಬೇರೆ ಆಯ್ಕೆ ನಡೆಯಲಿದೆ. ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ಮಾಜಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಮತ್ತು ವೆರಿವೆರಿ ಸ್ಪೆಷಲ್ ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.

ಪಾಕಿಸ್ತಾನ ಕ್ರಿಕೆಟನ್ನು ನ್ಯೂಜಿಲೆಂಡ್‌ ಕೊಂದಿತು: ಶೋಯೆಬ್ ಅಖ್ತರ್ಪಾಕಿಸ್ತಾನ ಕ್ರಿಕೆಟನ್ನು ನ್ಯೂಜಿಲೆಂಡ್‌ ಕೊಂದಿತು: ಶೋಯೆಬ್ ಅಖ್ತರ್

ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮನವಿ ಮಾಡುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ.

ಅನಿಲ್ ಕುಂಬ್ಳೆ ಈ ಮೊದಲು ಕೂಡ ಭಾರತೀಯ ಕ್ರಿಕೆಟ್‌ ತಂಡಕ್ಕೆ ಕೋಚ್ ಆಗಿದ್ದರು. 2016-17ರಲ್ಲಿ ಕುಂಬ್ಳೆ ಭಾರತೀಯ ತಂಡ ಮುನ್ನಡೆಸಿದ್ದರು. ಆಗ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಇದ್ದರು. ಈ ಕ್ರಿಕೆಟ್ ಸಲಹಾ ಸಮಿತಿ ಶಾಸ್ತ್ರಿ ಬದಲಿಗೆ ಕುಂಬ್ಳೆ ಅವರನ್ನು ಕೋಚ್ ಆಗಿ ಆರಿಸಿತ್ತು.

ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿರುವ ತಂಡವನ್ನು ಹೆಸರಿಸಿದ ಕೆವಿನ್ ಪೀಟರ್ಸನ್ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿರುವ ತಂಡವನ್ನು ಹೆಸರಿಸಿದ ಕೆವಿನ್ ಪೀಟರ್ಸನ್

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತಿದ್ದರಿಂದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಮನಸ್ತಾಪವಾಗಿ ಕುಂಬ್ಳೆ ತನ್ನ ಸ್ಥಾನದಿಂದ ಕೆಳಗಿಳಿಸಿದ್ದರು. ಕುಂಬ್ಳೆ ಜೊತೆಗೆ ಸನ್ ರೈಸರ್ಸ್ ಹೈದರಾಬಾದ್ ಮೆಂಟರ್ ಆಗಿರುವ ಲಕ್ಷ್ಮಣ್ ಅವರನ್ನೂ ಈ ಬಾರಿ ಬಿಸಿಸಿಐ ಸಂಪರ್ಕಿಸುವ ಸಾಧ್ಯತೆಯಿದೆ.

"ಕುಂಬ್ಳೆ ಮೊದಲು ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯಲು ಬೇರೆಯೇ ಕಾರಣವಿದೆ. ವಿರಾಟ್ ಕೊಹ್ಲಿಯ ಒತ್ತಡಕ್ಕೆ ಮಣಿದು ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಈಗ ಮತ್ತೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ಆದರೆ ಕುಂಬ್ಳೆ ಮತ್ತು ಲಕ್ಷ್ಮಣ್ ಅರ್ಜಿ ಸಲ್ಲಿಸೋದು ಬಿಡೋದು ಅವರನ್ನು ಅವಲಂಬಿಸಿದೆ," ಎಂದು ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

Story first published: Saturday, September 18, 2021, 14:59 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X