ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

BCCI names Sunil Joshi as new chairman of selectors
BCCI names Sunil Joshi as new chairman of selectors

ಬೆಂಗಳೂರು, ಮಾರ್ಚ್ 4: ಕನ್ನಡಿಗ ಸುನಿಲ್ ಜೋಶಿ ಅವರು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮದನ್ ಲಾಲ್, ರುದ್ರ ಪ್ರತಾಪ್, ಮತ್ತು ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಬಿಸಿಸಿಐಯ ಕ್ರಿಕೆಟ್ ಅಡ್ವೈಸರಿ ಕಮಿಟಿಯು (ಸಿಎಸಿ) ಜೋಶಿ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಬುಧವಾರ (ಮಾರ್ಚ್ 4) ಘೋಷಿಸಿದೆ.

ಬಿಸಿಸಿಐನಲ್ಲಿ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿಗೆ ಜ್ಯಾಕ್ ಪಾಟ್ಬಿಸಿಸಿಐನಲ್ಲಿ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿಗೆ ಜ್ಯಾಕ್ ಪಾಟ್

ಹೊಸದಾಗಿ ಆಯ್ಕೆಯಾಗಿರುವ ಸುನಿಲ್ ಜೋಶಿ, ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಎಂಎಸ್‌ಕೆ ಪ್ರಸಾದ್ ಜಾಗವನ್ನು ಆವರಿಸಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾ ಸೀನಿಯರ್ ತಂಡದ ಆಯ್ಕೆಯ ಹೊಣೆಗಾರಿಕೆ ಇನ್ಮುಂದೆ ಜೋಶಿ ಮೇಲಿರಲಿದೆ.

ಭಾರತ vs ದ.ಆಫ್ರಿಕಾ ODI: ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆಭಾರತ vs ದ.ಆಫ್ರಿಕಾ ODI: ಟೀಮ್ ಇಂಡಿಯಾ ಸಂಭಾವ್ಯ ತಂಡ ಹೀಗಿದೆ

ಆಯ್ಕೆ ಸಮಿತಿಯಲ್ಲಿ ಜೋಶಿ ಜೊತೆ ಮಾಜಿ ಕ್ರಿಕೆಟರ್ ಹರ್ವೀಂದರ್ ಸಿಂಗ್ ಕೂಡ ಇರಲಿದ್ದಾರೆ.

ವರ್ಷದ ಕೊನೆಗೆ ಮತ್ತೆ ಬದಲಾವಣೆ ಸಾಧ್ಯತೆ

ವರ್ಷದ ಕೊನೆಗೆ ಮತ್ತೆ ಬದಲಾವಣೆ ಸಾಧ್ಯತೆ

ಈಗ ಆರಿಸಲ್ಪಟ್ಟಿರುವ ಸುನಿಲ್ ಜೋಶಿ ಮತ್ತು ಹರ್ವೀಂದರ್ ಸಿಂಗ್ ಅವರು ದೇವಾಂಗ್ ಗಾಂಧಿ, ಸರಣ್‌ದೀಪ್ ಸಿಂಗ್ ಮತ್ತು ಜತಿನ್ ಪರಾನಜ್ಪೆ ಅವರ ತಂಡವನ್ನು ಸೇರಿಸಿಕೊಳ್ಳಲಿದ್ದಾರೆ. ದೇವಾಂಗ್, ಸರಣ್‌ದೀಪ್ ಮತ್ತು ಜತಿನ್ ವರ್ಷದ ಕೊನೆಯವರೆಗೆ ತಮ್ಮ ಅವಧಿ ಪೂರ್ಣಗೊಳ್ಳುವ ವರೆಗೆ ಆಯ್ಕೆ ಸಮಿತಿಯಲ್ಲಿರಲಿದ್ದಾರೆ.

ಎಂಎಸ್‌ಕೆ ಬದಲಿಗೆ ಜೋಶಿ

ಎಂಎಸ್‌ಕೆ ಬದಲಿಗೆ ಜೋಶಿ

ಸುನಿಲ್ ಜೋಶಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೆಂಟ್ರಲ್ ಝೋನ್ ಪ್ರತಿನಿಧಿ ಎಂಎಸ್‌ಕೆ ಪ್ರಸಾದ್ ಜಾಗಕ್ಕೆ ಬಂದರೆ, ಹರ್ವೀಂದರ್ ಸಿಂಗ್ ಅವರು ಸಮಿತಿಯಲ್ಲಿದ್ದ ಸೌತ್ ಝೋನ್ ಪ್ರತಿನಿಧಿ ಗಗನ್ ಖೋಡಾ ಅವರ ಸ್ಥಾನ ಆವರಿಸಿಕೊಂಡಿದ್ದಾರೆ.

ಹೊಸ ಆಯ್ಕೆ ಸಮಿತಿಗೆ ಹೊಸ ಜವಾಬ್ದಾರಿ

ಹೊಸ ಆಯ್ಕೆ ಸಮಿತಿಗೆ ಹೊಸ ಜವಾಬ್ದಾರಿ

ಹೊಸ ಆಯ್ಕೆ ಸಮಿತಿಯ ಮೇಲೆ ಈಗಾಗಲೇ ತಂಡ ಆಯ್ಕೆಯ ಜವಾಬ್ದಾರಿಯಿದೆ. ಮುಂಬರಲಿರುವ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಗಾಗಿ ಈ ಆಯ್ಕೆ ಸಮಿತಿ ತಂಡವನ್ನು ಆರಿಸಬೇಕಿದೆ. ಭಾರತ-ದಕ್ಷಿಣ ಆಫ್ರಿಕಾ ಸರಣಿ ಮೂರು ಪಂದ್ಯಗಳನ್ನು ಒಳಗೊಂಡಿರಲಿದೆ. ಸರಣಿ ಮಾರ್ಚ್ 12ರಿಂದ ಆರಂಭಗೊಳ್ಳಲಿದೆ.

ಸಾಧನೆ, ಅಂಕಿ-ಅಂಶಗಳು

ಸಾಧನೆ, ಅಂಕಿ-ಅಂಶಗಳು

ಕರ್ನಾಟಕದ ಗದಗದಲ್ಲಿ ಜನಿಸಿರುವ, ಈಗ 49ರ ಹರೆಯದ ಸುನಿಲ್ ಜೋಶಿ, 15 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್‌ಗಳು, 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್‌, 160 ಪ್ರಥಮದರ್ಜೆ ಪಂದ್ಯಗಳಲ್ಲಿ 615 ವಿಕೆಟ್‌ ದಾಖಲೆ ಹೊಂದಿದ್ದಾರೆ. ಅಲ್ಲದೆ, ಟೆಸ್ಟ್‌ನಲ್ಲಿ 352, ಏಕದಿನದಲ್ಲಿ 584, ಪ್ರಥಮದರ್ಜೆಯಲ್ಲಿ 5129 ರನ್ ಸಾಧನೆ ಹೊಂದಿದ್ದಾರೆ.

Story first published: Wednesday, March 4, 2020, 23:29 [IST]
Other articles published on Mar 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X