ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಭವಿಷ್ಯದ ಬಗ್ಗೆ ಬಾಯ್ತೆರೆದ ಕನ್ನಡಿಗ ಜೋಶಿಯಿರುವ ಆಯ್ಕೆಸಮಿತಿ!

BCCI New selection committee reacted on MS Dhoni’s future

ಬೆಂಗಳೂರು, ಮಾರ್ಚ್ 9: ಐಸಿಸಿ ಕ್ರಿಕೆಟ್ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಒಂದೇ ಒಂದು ಪಂದ್ಯವನ್ನಾಡಿಲ್ಲ. ಬಿಸಿಸಿಐ ಆಯ್ಕೆ ಸಮಿತಿಯೂ ಒಂದಿಲ್ಲೊಂದು ಕಾರಣ ನೀಡುತ್ತ ಧೋನಿಯನ್ನು ಟೀಮ್ ಇಂಡಿಯಾದಿಂದ ಕಡೆಗಣಿಸುತ್ತಲೇ ಬಂದಿದೆ. ಹೀಗಾದರೆ ಧೋನಿಯ ವೃತ್ತಿ ಬದುಕಿನ ಭವಿಷ್ಯದ ಕತೆಯೇನು?

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

KULDEEP YADAV REVEALS TEAM INDIA MISSES MS DHONI | Oneindia News

ಇತ್ತೀಚೆಗಷ್ಟೇ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಬಹತ್ವದ ಬದಲಾವಣೆಯಾಗಿದೆ. ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯಲ್ಲಿದ್ದ ಹಳೆ ಬಿಸಿಸಿಐ ಸಮಿತಿ ಬದಲಾಗಿದೆ. ಎಂಎಸ್‌ಕೆ ಜಾಗಕ್ಕೆ ಕನ್ನಡಿಗ ಸುನಿಲ್ ಜೋಶಿ ಬಂದಿದ್ದಾರೆ. ಜೋಶಿ ಜೊತೆ ಹರ್ವೀಂದರ್ ಸಿಂಗ್‌ ಕೂಡ ಆಯ್ಕೆ ಸಮಿತಿಯನ್ನು ಸೇರಿಕೊಂಡಿದ್ದಾರೆ.

'ಒಂದಿನ ನೀವು ಟ್ರೋಫಿ ಗೆದ್ದೇ ಗೆಲ್ಲುತ್ತೀರಿ': ಭಾರತದ ಬೆನ್ನು ತಟ್ಟಿದ ದಿಗ್ಗಜರು!'ಒಂದಿನ ನೀವು ಟ್ರೋಫಿ ಗೆದ್ದೇ ಗೆಲ್ಲುತ್ತೀರಿ': ಭಾರತದ ಬೆನ್ನು ತಟ್ಟಿದ ದಿಗ್ಗಜರು!

ಬಿಸಿಸಿಐ ಆಯ್ಕೆ ಸಮಿತಿ ಬದಲಾಗಿರುವಾಗ ಎಂಎಸ್ ಧೋನಿಯ ಭವಿಷ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆಯೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಸಹಜವಾಗೇ ಇದೆ. ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ನೂತನ ಆಯ್ಕೆ ಸಮಿತಿ ಉತ್ತರಿಸಿದೆ.

ಸಭೆ ಕರೆದಿದ್ದ ಜೋಶಿ ಬಳಗ

ಸಭೆ ಕರೆದಿದ್ದ ಜೋಶಿ ಬಳಗ

ಮಾರ್ಚ್ 12ರಿಂದ ಅಹಮದಾಬಾದ್‌ನ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ತಂಡ ಆರಿಸುವ ನಿಟ್ಟಿನಲ್ಲಿ ಸುನಿಲ್ ಜೋಶಿ ಮುಂದಾಳತ್ವದ ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಸಿತ್ತು. ಈ ಸಭೆಯ ಬಳಿಕ ಆಯ್ಕೆ ಸಮಿತಿ ಸುದ್ದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿತು.

ಧೋನಿ ಪ್ರದರ್ಶನ ನೀಡಬೇಕು

ಧೋನಿ ಪ್ರದರ್ಶನ ನೀಡಬೇಕು

ನೂತನ ಆಯ್ಕೆ ಸಮಿತಿಯೂ ಎಂಎಸ್ ಧೋನಿ ಬಗೆಗಿನ ನಿಲುವು ಬದಲಿಸಿದಂತೆ ಕಾಣುತ್ತಿಲ್ಲ. ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಆಯ್ಕೆ ಸಮಿತಿ, ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಬೇಕಾದರೆ, ಧೋನಿ ಐಪಿಎಲ್‌ನಲ್ಲಿ ಪ್ರದರ್ಶನ ನೀಡಬೇಕು ಎಂದು ಹಳೆ ರಾಗವನ್ನೇ ತೆಗೆದಿದೆ.

ಧೋನಿ ಈ ಬಾರಿಯ ಲೆಕ್ಕಾಚಾರದಲ್ಲಿಲ್ಲ

ಧೋನಿ ಈ ಬಾರಿಯ ಲೆಕ್ಕಾಚಾರದಲ್ಲಿಲ್ಲ

'ಇದು ಬಹಳ ಸರಳವಾದ ಆಯ್ಕೆ ಸಭೆ ಮತ್ತು ಧೋನಿ ಈ ಬಾರಿಯ ನಮ್ಮ ಲೆಕ್ಕಾಚಾರದಲ್ಲಿಲ್ಲದ (ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ) ಕಾರಣ ಆತನ ಭವಿಷ್ಯದ ಬಗ್ಗೆ ಔಪಚಾರಿಕ ಮಾತುಗಳಿಲ್ಲ. ಐಪಿಎಲ್‌ನಲ್ಲಿ ಧೋನಿ ಆಡಿದರೆ ಮಾತ್ರ ತಂಡಕ್ಕೆ ಮರಳಬಹುದು,' ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.

ಧೋನಿಯೇ ಯಾಕೆ ಬೇಕು, ಬೇರೆಯವರಿಲ್ಲವೆ?

ಧೋನಿಯೇ ಯಾಕೆ ಬೇಕು, ಬೇರೆಯವರಿಲ್ಲವೆ?

ಮಾತು ಮುಂದುವರೆಸಿದ ಬಿಸಿಸಿಐ ಅಧಿಕಾರಿಗಳು, 'ಐಪಿಎಲ್‌ನಲ್ಲಿ ಬರೀ ಧೋನಿಯ ಪ್ರದರ್ಶನ ಮಾತ್ರ ಯಾಕೆ ಪರಿಗಣಿಸಬೇಕು? ಅನುಭವಿ, ಯುವ ಆಟಗಾರರು ಬೇರೆಯವರಿಲ್ಲವೆ? ಒಂದು ವೇಳೆ ಧೋನಿಗಿಂತ ಬೇರೆಯವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರನ್ನೇ ಪರಿಗಣಿಸುತ್ತೇವೆ. ಒಟ್ಟಿನಲ್ಲಿ ಟಿ20 ವಿಶ್ವಕಪ್ ತಂಡದಲ್ಲಿ ನಿಮಗೆ ಅಚ್ಚರಿಯ ಸೇರ್ಪಡೆಯೂ ಇರಬಹುದು,' ಎಂದಿದ್ದಾರೆ.

Story first published: Monday, March 9, 2020, 15:33 [IST]
Other articles published on Mar 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X