ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ

BCCI nominates Rohit Sharma for Khel Ratna honour

ಮುಂಬೈ, ಮೇ 30: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ 2020ಕ್ಕೆ ನಾಮನಿರ್ದೇಶನ ಮಾಡಿದೆ. ಶಿಖರ್ ಧವನ್, ಇಶಾಂತ್ ಶರ್ಮಾ, ದೀಪ್ತೀ ಶರ್ಮಾ ಹೆಸರುಗಳು ಅರ್ಜುನಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.

ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!

ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ 2020ರ ವರ್ಷಕ್ಕೆ ಬೇರೆ ಬೇರೆ ಪ್ರಶಸ್ತಿಗಳಿಗೆ ಹೆಸರುಗಳನ್ನು ಆಹ್ವಾನಿಸಿತ್ತು. ಜನವರಿ 1ರಿಂದ ಡಿಸೆಂಬರ್ 2019ರ ವರೆಗಿನ ಕಾಲಾವಧಿಯ ಸಾಧನೆ ಪರಿಗಣಿಸುವುದಾಗಿ ತಿಳಿಸಿತ್ತು. ಅದರಂತೆ ಬಿಸಿಸಿಐ ಕ್ರಿಕೆಟಿಗರ ಹೆಸರುಗಳನ್ನು ನಾಮನಿರ್ದೇಶನಗೊಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ನಿಯಮಿತ ಓವರ್‌ನಲ್ಲಿ ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ವರ್ಷದ ಕ್ರಿಕೆಟಿಗನಾಗಿಯೂ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಐದು ಶತಕಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಟೂರ್ನಿಯೊಂದರಲ್ಲಿ ಏಕದಿನ ಐದು ಶತಕ ಬಾರಿಸಿದ ಏಕಮಾತ್ರ ಆಟಗಾರ ರೋಹಿತ್.

ಭಾರತ-ಇಂಗ್ಲೆಂಡ್ ಉಲ್ಲೇಖಿಸಿದ ಪಾಕ್ ಕ್ರಿಕೆಟಿಗನ ವಿರುದ್ಧ ಬೆನ್‌ ಸ್ಟೋಕ್ಸ್ ಕಿಡಿ!ಭಾರತ-ಇಂಗ್ಲೆಂಡ್ ಉಲ್ಲೇಖಿಸಿದ ಪಾಕ್ ಕ್ರಿಕೆಟಿಗನ ವಿರುದ್ಧ ಬೆನ್‌ ಸ್ಟೋಕ್ಸ್ ಕಿಡಿ!

ಪಾದಾರ್ಪಣೆ ಪಂದ್ಯದಲ್ಲೇ ವೇಗದ ಶತಕ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ರನ್‌ಗಾಗಿ ಸತತ ಎರಡು ಬಾರಿ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಪಡೆದ ಹಿರಿಮೆಯೂ ಗಬ್ಬರ್ ಧವನ್‌ರದ್ದು. ಅಲ್ಲದೆ ಏಕದಿನದಲ್ಲಿ ಎರಡನೇ ವೇಗವಾಗಿ 4000 ಮತ್ತು 5000 ರನ್ ಬಾರಿಸಿದ ಭಾರತದ ಆಟಗಾರನೆಂಬ ದಾಖಲೆಯೂ ಧವನ್‌ ನಿರ್ಮಿಸಿದ್ದಾರೆ.

Story first published: Saturday, May 30, 2020, 20:22 [IST]
Other articles published on May 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X