ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿಯಲ್ಲಿ ಆಸ್ಟ್ರೇಲಿಯನ್ ಆಟಗಾರರ ಕ್ವಾರಂಟೈನ್‌ಗೆ ಬಿಸಿಸಿಐ ಹಣ!

BCCI paying for quarantine of Australian IPL players in Sydney, says Cricket Australia
BCCI ಆಸ್ಟ್ರೇಲಿಯಾ ಆಟಗಾರರಿಗೆ ಹಣ ಖರ್ಚು ಮಾಡುತ್ತಿದೆ | Oneindia Kannada

ಸಿಡ್ನಿ: ಮಾಲ್ಡೀವ್ಸ್‌ನಿಂದ ಬಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಪಾಲಿಸುತ್ತಿರುವ ಆಸ್ಟ್ರೇಲಿಯನ್ ಆಟಗಾರರ ಬಿಲ್ ಅನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪಾವತಿಸುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಹೇಳಿದ್ದಾರೆ.

 ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್! ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!

ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಇಂಥ ಖ್ಯಾತ ಆಟಗಾರರು, ಅಧಿಕಾರಿಗಳು, ಕಾಮೆಂಟೇಟರ್ಸ್ ಸೇರಿದಂತೆ ಒಟ್ಟು 38 ಮಂದಿಯ ತಂಡ ಸೋಮವಾರ (ಮೇ 17) ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮಾಲ್ಡೀವ್ಸ್‌ನಲ್ಲಿ ಅನಿವಾರ್ಯವಾಗಿ ಸ್ವಲ್ಪ ದಿನಗಳ ಕಾಲ ತಂಗಿದ್ದ ಆಸೀಸ್ ತಂಡ ಆ ಬಳಿಕ ತವರಿಗೆ ವಾಪಸ್ಸಾಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್‌ 14ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಈ ಆಟಗಾರರು, ಅಧಿಕಾರಿಗಳು, ಕಾಮೆಂಟೇಟರ್ಸ್ ಭಾರತಕ್ಕೆ ಬಂದಿದ್ದರು. ಆದರೆ ಕೋವಿಡ್-19 ಕಾರಣ ಐಪಿಎಲ್ ಮುಂದೂಡಲ್ಪಟ್ಟಿರುವುದರಿಂದ ಮಾಲ್ಡೀವ್ಸ್‌ಗೆ ತೆರಳಿ 10 ದಿನಗಳ ಕ್ವಾರಂಟೈನ್ ಪಾಲಿಸಿದ್ದರು. ಯಾಕೆಂದರೆ ಆ ವೇಳೆ ಭಾರತದಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ನಿರ್ಬಂಧ ಹೇರಲಾಗಿತ್ತು.

ಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್‌ಸಿಬಿಯದ್ದೇ ; ಇಲ್ಲಿವೆ 5 ಪ್ರಮುಖ ಕಾರಣಗಳುಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್‌ಸಿಬಿಯದ್ದೇ ; ಇಲ್ಲಿವೆ 5 ಪ್ರಮುಖ ಕಾರಣಗಳು

'ಹೌದು, ಆಸೀಸ್‌ನ ಐಪಿಎಲ್ ಆಟಗಾರರು ಸುರಕ್ಷಿತವಾಗಿ ಇಲ್ಲಿಗೆ ತಲುಪಲು ಎಲ್ಲಾ ಪ್ರಕ್ರಿಯೆಗಳಿಗೆ ಬಿಸಿಸಿಐ ಹಣ ನೀಡಿತ್ತು. ನಾವು ಬಿಸಿಸಿಐ ಜೊತೆಗಿದ್ದ ಕೆಲಸ ಮಾಡುತ್ತಿದ್ದೇವೆ. ಅದು ಅದ್ಭುತವಾಗಿ ನೆರವು ನೀಡುತ್ತಿದೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜೊತೆ ಮಾತನಾಡಿದ ಹಾಕ್ಲೆ ಹೇಳಿದ್ದಾರೆ.

Story first published: Wednesday, May 19, 2021, 12:55 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X