ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್‌ನಲ್ಲಿ ಫೈನಲ್: ವರದಿ

BCCI planning to host tournament across six cities, Ahmedabad to host IPL play-off and final: Report

ಐಪಿಎಲ್ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಇದೀಗ ಐಪಿಎಲ್ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ಎಲ್ಲಿ ನಡೆಸಬಹುದು ಎಂಬುದು ಕೂಡ ಕುತೂಹಲವಾಗಿಯೇ ಉಳಿದುಕೊಂಡಿದೆ. ಆರಂಭದಲ್ಲಿ ಇಡೀ ಟೂರ್ನಿಯನ್ನು ಎರಡು ಸ್ಥಳಗಳಲ್ಲಿ ಆಯೋಜಿಸುವ ಬಗ್ಗೆ ಬಿಸಿಸಿಐ ನಿರ್ಧಾರವನ್ನು ಕೈಗೊಂಡಿತ್ತು. ಮುಂಬೈ ಮತ್ತು ಪುಣೆಯಲ್ಲಿ ಇಡೀ ಟೂರ್ನಿ ನಡೆಯಲಿದೆ ಎನ್ನಲಾಗಿತ್ತು.

ಆದರೆ ಏಪ್ರಿಲ್‌ನಿಂದ ಜೂನ್ ಮಧ್ಯೆ ನಡೆಯುವ ಈ ಕ್ರಿಕೆಟ್ ಟೂರ್ನಿಯನ್ನು ಈಗ ಆರು ನಗರಗಳಲ್ಲಿ ನಡೆಸುವ ಬಗ್ಗೆ ಚಿಂತನೆಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ. ನೂತನವಾಗಿ ನಿರ್ಮಾಣವಾದ ಮೊಟೇರಾ ಸ್ಟೇಡಿಯಂ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಆತಿಥ್ಯವಹಿಸುವ ಸಾಧ್ಯತೆಯಿದೆ.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ಆದರೆ ಬಿಸಿಸಿಐನ ಈ ಹೊಸ ನಿರ್ಧಾರ ಈಗ ಫ್ರಾಂಚೈಸಿಗಳ ತಲೆನೋವಿಗೆ ಕಾರಣವಾಗಿದೆ. ಆಡುವ ಎಲ್ಲಾ ವಿಭಿನ್ನ ಸ್ಥಳಗಳಲ್ಲಿ ಆಟಗಾರರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಎಂಬ ಅಭಿಪ್ರಾಯಗಳನ್ನು ಫ್ರಾಂಚೈಸಿಗಳು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಾ ಬಂದ ಕಾರಣ ಯುಎಇನಲ್ಲಿ ಮೂರು ಅಂಗಳಗಳಲ್ಲಿ ಐಪಿಎಲ್ ಆಯೋಜನೆ ಮಾಡಲಾಗಿತ್ತು.

ಟೈಮ್ಸ್ ಆಫ್ ಇಂಡಿಯಾ ಫ್ರಾಂಚೈಸಿಯೊಂದರ ಪ್ರತಿನಿಧಿಯ ಹೇಳಿಕೆಯನ್ನು ಉಲ್ಲೇಖಿಸಿದ್ದು ಬಿಸಿಸಿಐನ ಆರು ಅಂಗಳಗಳಲ್ಲಿ ಐಪಿಎಲ್ ಆಯೋಜಿಸುವ ನಿರ್ಧಾರಕ್ಕೆ ಆತಂಕ ವ್ಯಕ್ತಪಡಿಸಿರುವುದನ್ನು ವರದಿ ಮಾಡಿದೆ. "ಖಂಡಿತವಾಗಿ ಇದು ಆತಂಕವನ್ನು ಮೂಡಿಸುತ್ತಿದೆ. ಈ ಹಿಂದಿನ ಯೋಜನೆ ಒಂದು ಅಥವಾ ಎರಡು ಅಂಗಳಗಳಲ್ಲಿ ಆಯೋಜನೆ ಮಾಡುವುದು ತುಂಬಾ ಉತ್ತಮ ನಿರ್ಧಾರವಾಗಿತ್ತು. ಕಳೆದ ಬಾರಿ ಮೂರು ಅಂಗಳಗಳಲ್ಲಿ ಈ ಪಂದ್ಯ ನಡೆದು ಉತ್ತಮವಾಗಿ ಯಶಸ್ಸು ಕಂಡಿತ್ತು" ಎಂದು ಪ್ರತಿಕ್ರಿಯಿಸಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

ಇನ್ನು ಐಪಿಎಲ್ ಆಯೋಜನೆಯ ಸ್ಥಳಗಳ ವಿಚಾರವಾಗಿ ಬಿಸಿಸಿಐನಿಂದ ಅಧಿಕೃತವಾಗಿ ಯಾವುದೇ ಮಾಹಿತಿಗಳು ಬಂದಿಲ್ಲ. ಜೊತೆಗೆ ಈ ಬಾರಿಯ ಐಪಿಎಲ್ ವೀಕ್ಷಕರ ಸಮ್ಮುಖದಲ್ಲಿ ನಡೆಯುತ್ತದೆಯೇ ಎಂಬುದಕ್ಕು ಕೂಡ ಇನ್ನಷ್ಟೇ ಸ್ಪಷ್ಟನೆಗಳು ದೊರೆಯಲಿದೆ. ಮಹಾರಾಷ್ಟ್ದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿದ್ದು ಅಲ್ಲಿ ನಡೆಯುವ ಪಂದ್ಯಗಳು ಮುಚ್ಚಿದ ಬಾಗಿಲುಗಳಲ್ಲೇ ಆಯೋಜನೆಯಾಗುವ ಸಾಧ್ಯತೆಯಿದೆ.

Story first published: Monday, March 1, 2021, 7:33 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X