ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವಿಪರೀತವಾದ್ರೆ, ಐಪಿಎಲ್‌ 2022ರ ಎಲ್ಲಾ ಪಂದ್ಯಗಳು ಮುಂಬೈನಲ್ಲೇ ನಡೆಸಲು BCCI ಪ್ಲ್ಯಾನ್

BCCI

ದೇಶದಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಬಿಸಿಸಿಐ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎಲ್ಲಿ ಆಡಿಸೋದು ಅನ್ನೋದಕ್ಕೆ ತಲೆಕೆಡಿಸಿಕೊಂಡಿದೆ.

ಕಳೆದ ಐಪಿಎಲ್ ಸೀಸನ್‌ ಅರ್ಧದಷ್ಟು ಪಂದ್ಯಗಳು ಭಾರತದಲ್ಲಿ ನಡೆಯಿತು. ಆದ್ರೆ ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾದ ಪರಿಣಾಮ ಟೂರ್ನಿಯನ್ನ ಮುಂದೂಡಲಾಗಿತ್ತು. ಜೊತೆಗೆ ಇನ್ನರ್ಧ ಸೀಸನ್ ದುಬೈನಲ್ಲಿ ನಡೆಸಿ ಯಶಸ್ವಿಯಾಗಿದೆ.

ಆದ್ರೀಗ 2022ರ ಐಪಿಎಲ್ ಸೀಸನ್‌ ಆಯೋಜನೆ ಕುರಿತಾಗಿ ಬಿಸಿಸಿಐ ಸಾಕಷ್ಟು ಗೊಂದಲಕ್ಕೆ ಒಳಗಾದಂತಿದೆ. ಆಟಗಾರರ ಹರಾಜು ಪ್ರಕ್ರಿಯೆಯನ್ನ ಮುಂದೂಡುತ್ತಲೇ ಇರುವ ಬಿಸಿಸಿಐ ಟೂರ್ನಿ ಆಯೋಜನೆ ಕುರಿತು ಕಾರ್ಯತಂತ್ರ ಹೆಣೆದಿದೆ.

10 ಸ್ಟೇಡಿಯಂಗಳಲ್ಲಿ ಐಪಿಎಲ್ ಪಂದ್ಯಗಳು

10 ಸ್ಟೇಡಿಯಂಗಳಲ್ಲಿ ಐಪಿಎಲ್ ಪಂದ್ಯಗಳು

ಬಿಸಿಸಿಐ ಮುಂದಿರುವ ಮೊದಲ ಆಯ್ಕೆಯೆಂದ್ರೆ ಟೂರ್ನಮೆಂಟ್ ಅನ್ನು ಹೆಚ್ಚು ಆಸಕ್ತಿಕರಗೊಳಿಸಲು ಭಾರತದಲ್ಲೇ ಪಂದ್ಯವನ್ನ ಆಯೋಜಿಸಲು ಚರ್ಚಿಸುತ್ತಿದೆ. ಹೀಗಾಗಿ 10 ಸ್ಥಳಗಳಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸುವ ಜೊತೆಗೆ ಆಯಾ ಸ್ಥಳಗಳ ಕೋವಿಡ್-19 ನಿಯಮಗಳ ಪಾಲನೆ ಜೊತೆಗೆ, ಆಟಗಾರರನ್ನ ಬಯೋ ಬಬಲ್‌ನಲ್ಲಿ ಇರಿಸಲಿದೆ.

ಪ್ಲಾನ್‌ ಬಿ ಹೊಂದಿರುವ ಬಿಸಿಸಿಐ, ಮುಂಬೈನಲ್ಲೇ ಎಲ್ಲಾ ಪಂದ್ಯಗಳು?

ಪ್ಲಾನ್‌ ಬಿ ಹೊಂದಿರುವ ಬಿಸಿಸಿಐ, ಮುಂಬೈನಲ್ಲೇ ಎಲ್ಲಾ ಪಂದ್ಯಗಳು?

ಒಂದು ವೇಳೆ ಕೋವಿಡ್-19 ಪಾಸಿಟಿವ್ ಸಂಖ್ಯೆ ವಿಪರೀತಗೊಂಡಿದ್ದೇ ಆದಲ್ಲಿ ಬಿಸಿಸಿಐ ಎಲ್ಲಾ ಪಂದ್ಯಗಳನ್ನು ಮುಂಬೈನಲ್ಲೇ ಯೋಜಿಸಲು ಸಹ ತನ್ನ ಪಟ್ಟಿಯಲ್ಲಿ ಇರಿಸಿಕೊಂಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, ಸಿಸಿಐ ಮತ್ತು ಡಿ.ವೈ ಪಾಟೀಲ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಿದೆ.

"ಬಿಸಿಸಿಐ ಕೂಡ ಲೀಗ್‌ಗಾಗಿ ಪ್ಲಾನ್ ಬಿ ಅನ್ನು ಸಿದ್ಧಪಡಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳೊಂದಿಗೆ, ಬಿಸಿಸಿಐ ಮುಂಬೈಯನ್ನು ಮಾತ್ರ ಐಪಿಎಲ್ ಕೇಂದ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ಹಂತದಲ್ಲಿ, ಎರಡು ಆಯ್ಕೆಗಳು ಮುಂದಿದ್ದು, 10 ಕೇಂದ್ರಗಳು ಅಥವಾ ಕೇವಲ ಮೂರು ಕೇಂದ್ರಗಳು (ಮುಂಬೈನ ವಾಂಖೆಡೆ, CCI ಮತ್ತು DY ಪಾಟೀಲ್ ಸ್ಟೇಡಿಯಂ) ಆಗಿವೆ'' ಎಂದು ಮೂಲಗಳು ಕ್ರಿಕ್‌ಬಝ್‌ಗೆ ತಿಳಿಸಿವೆ.

ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್

ಮತ್ತೆ ದುಬೈನಲ್ಲಿ ಟೂರ್ನಿ ಆಯೋಜನೆಗೆ ಯೋಚಿಸಿಲ್ಲ!

ಮತ್ತೆ ದುಬೈನಲ್ಲಿ ಟೂರ್ನಿ ಆಯೋಜನೆಗೆ ಯೋಚಿಸಿಲ್ಲ!

2021 ರಲ್ಲಿನ ಕೋವಿಡ್ -19 ಪರಿಸ್ಥಿತಿಯು ಐಪಿಎಲ್ ಅನ್ನು ಮಧ್ಯಂತರದಲ್ಲಿ ನಿಲ್ಲಿಸಿ ದುಬೈನಲ್ಲಿ ನಡೆಸುವ ಪರಿಸ್ಥಿತಿ ಬಿಸಿಸಿಐ ಮುಂದೆ ಸವಾಲಾಗಿತ್ತು. ಆದ್ರೆ ಐಪಿಎಲ್ 2022ರ ಆವೃತ್ತಿಯಲ್ಲಿ ಯುಎಇಯಲ್ಲಿ ಪರ್ಯಾಯವಾಗಿ ನಡೆಸುವುದರ ಕುರಿತಾಗಿ ಯಾವುದೇ ಯೋಜನೆಗಳಿಲ್ಲ ಎನ್ನಲಾಗಿದೆ.

ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಭಾಗಿ

ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಭಾಗಿ

ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.

ಚೇತೇಶ್ವರ ಪೂಜಾರಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬೆಂಬಲ!

ಈ ಹಿಂದಿನ ನಿಯಮದ ಪ್ರಕಾರ ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯುತ್ತಿತ್ತು. ಆದ್ರೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಲೀಗ್ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ.

ಈಗಾಗಲೇ ದೇಶೀಯ ಟೂರ್ನಿಗಳನ್ನ ಮುಂದೂಡಿರುವ ಬಿಸಿಸಿಐ

ಈಗಾಗಲೇ ದೇಶೀಯ ಟೂರ್ನಿಗಳನ್ನ ಮುಂದೂಡಿರುವ ಬಿಸಿಸಿಐ

ಜನವರಿ 13ರಿಂದ ಶುರುವಾಗಬೇಕಿದ್ದ ರಣಜಿ ಟ್ರೋಫಿಯನ್ನು ಬಿಸಿಸಿಐ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾದಿಂದ ಆಗಿರುವ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಈ ಹಿಂದಿನ ವೇಳಾಪಟ್ಟಿಯಂತೆ ಟೂರ್ನಿ ಆರಂಭವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಣಜಿ ಟ್ರೋಫಿ ಅಲ್ಲದೆ ಇತರ ದೇಶೀಯ ಪಂದ್ಯಾವಳಿಗಳಾದ ಕರ್ನಲ್ ಸಿಕೆ ನಾಯ್ಡು ಟೂರ್ನಿ ಮತ್ತು ಹಿರಿಯ ಮಹಿಳಾ ಟಿ20 ಲೀಗ್ ಅನ್ನು ಸಹ ಮುಂದೂಡಲಾಗಿದೆ. ಹಾಗೆಯೇ ಪ್ರಸ್ತುತ ನಡೆಯುತ್ತಿದ್ದ U-19 ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ಬಳಿಕ ಉಳಿದ ಪಂದ್ಯಗಳನ್ನು ಕೂಡ ಮುಂದೂಡಲಾಗುತ್ತಿದೆ.

Pakistan ಕ್ರಿಕೆಟರ್ ಗೆ ಉಡುಗೊರೆ ಕಳಿಸಿದ MS Dhoni | Oneindia Kannada

Story first published: Saturday, January 8, 2022, 10:05 [IST]
Other articles published on Jan 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X