ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!

BCCI Planning To hosting IPL 13 outside India, hints Arun Dhumal

ಬೆಂಗಳೂರು: ಭಾರತದಲ್ಲಿ ಕೊರೊನಾವೈರಸ್‌ನಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಸಡಿಲಗೊಳಿಸಲಾಗುತ್ತಿದೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆತಂಕಕಾರಿಯಾಗಿ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ದೇಸಿಗರಿಗೆ ಇನ್ನಷ್ಟು ಭೀತಿ ಹುಟ್ಟಿಸುತ್ತಿರುವುದಷ್ಟೇ ಅಲ್ಲ, ಭಾರತದಲ್ಲಿ ನಡೆಯಲಿರುವ ಕ್ರೀಡಾಚಟುವಟಿಕೆಗಳಿಗೂ ತೊಡಕಾಗಿದೆ. ಮುಖ್ಯವಾಗಿ ಇಂಡಿಯನ್ ಪ್ರೀಮಿಯರ್ (ಐಪಿಎಲ್) ಭಾರತದಲ್ಲಿ ನಡೆಸಲು ಸಂಕಷ್ಟ ಎದುರಾಗಿದೆ.

ಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಹಳಷ್ಟು ಆಯ್ಕೆಗಳನ್ನು ಮುಂದಿಟ್ಟುಕೊಂಡು 13ನೇ ಆವೃತ್ತಿಯ ಐಪಿಎಲ್ ಅನ್ನು 2020ರ ವರ್ಷವೇ ನಡೆಸುವ ಬಗ್ಗೆ ಪರಿಣಿತರ ಜೊತೆ ಚರ್ಚಿಸುತ್ತಿದೆ.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಐಪಿಎಲ್ 2020 ನಡೆಸಲು ಬಿಸಿಸಿಐ ಜೊತೆಗಿರುವ ಆಯ್ಕೆಗಳಲ್ಲಿ ಒಂದೆಂದರೆ ವಿದೇಶದಲ್ಲಿ ಭಾರತದ ಅದ್ದೂರಿ ಟೂರ್ನಿಯಾದ ಐಪಿಎಲ್ ಅನ್ನು ನಡೆಸೋದು.

ಏರುತ್ತಿರೋ ಕೊರೊನಾ ಸೋಂಕಿತರು

ಏರುತ್ತಿರೋ ಕೊರೊನಾ ಸೋಂಕಿತರು

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ 2 ಲಕ್ಷ ಗಡಿ ದಾಟಿದೆ. ಅಲ್ಲದೆ ಪ್ರತೀ ದಿನವೂ ಸುಮಾರು 8000-10000 ಹೊರ ಪ್ರಕರಣಗಳು ಭಾರತದಾದ್ಯಂತ ದಾಖಲಾಗುತ್ತಿದೆ. ಕೊರೊನಾ ಪ್ರಕರಣಗಳು ಹೀಗೆ ಆತಂಕಕಾರಿಯಾಗಿ ಏರುತ್ತಿದ್ದರೆ ಸಹಜವಾಗೇ ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳನ್ನು ನಡೆಸಲು ಕಷ್ಟವಾಗುತ್ತದೆ.

ವಿದೇಶದಲ್ಲಿ ಐಪಿಎಲ್ ನಡೆಸುವ ಯೋಚನೆ

ವಿದೇಶದಲ್ಲಿ ಐಪಿಎಲ್ ನಡೆಸುವ ಯೋಚನೆ

'ಭಾರತದ ಸದ್ಯದ ಪರಿಸ್ಥಿತಿಯನ್ನು ಗಮನಿಸಿ ನಾವು ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸುವ ಬಗ್ಗೆ ಎಲ್ಲಾ ಆಯ್ಕೆಗಳನ್ನು ಮುಂದಿಟ್ಟುಕೊಂಡು ಆಲೋಚಿಸುತ್ತಿದ್ದೇವೆ. ಒಂದು ವೇಳೆ ಐಪಿಎಲ್ ಎನ್ನು ವಿದೇಶದಲ್ಲಿ ನಡೆಸಬೇಕಾಗಿ ಬಂದರೆ ನಡೆಸುತ್ತೇವೆ. ಆದರೆ ಆ ಆಯ್ಕೆಯನ್ನು ಸದ್ಯ ನಾವು ಕೊನೆಯಾಗಿ ಇಟ್ಟುಕೊಂಡಿದ್ದೇವೆ,' ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ಈ ಮೊದಲೂ ವಿದೇಶಲ್ಲಿ ಐಪಿಎಲ್ ನಡೆದಿದೆ

ಈ ಮೊದಲೂ ವಿದೇಶಲ್ಲಿ ಐಪಿಎಲ್ ನಡೆದಿದೆ

'ವಿದೇಶದಲ್ಲಿ ಐಪಿಎಲ್ ನಡೆಸೋದೇ ಕೊನೆಯ ಆಯ್ಕೆಯಾದರೆ ನಾವದನ್ನು ಪರಿಗಣಿಸುತ್ತೇವೆ. ನಾವು ಈ ಮೊದಲೂ ವಿದೇಶಲ್ಲಿ (ದಕ್ಷಿಣ ಆಫ್ರಿಕಾದಲ್ಲಿ) ಐಪಿಎಲ್ ನಡೆಸಿದ್ದೇವೆ. ಆದರೆ ಸದ್ಯಕ್ಕಂತೂ ನಮ್ಮ ಮೊದಲ ಆಯ್ಕೆ ಐಪಿಎಲ್ ಅನ್ನು ಭಾರತದಲ್ಲೇ ಆಯೋಜಿಸೋದಾಗಿದೆ,' ಎಂದು ಧುಮಾಲ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಐಪಿಎಲ್ ನಡೆಸಲು ಮನವಿ

ಶ್ರೀಲಂಕಾದಲ್ಲಿ ಐಪಿಎಲ್ ನಡೆಸಲು ಮನವಿ

ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್, ಕೊರೊನಾವೈರಸ್‌ನಿಂದಾಗಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿತ್ತು. ಏಪ್ರಿಲ್ 15ಕ್ಕೂ ಕೊರೊನಾ ಹತೋಟಿಕೆ ಬಾರದಿದ್ದಾಗ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈಗ ಸೋಂಕಿತರ ಸಂಖ್ಯೆ ಮತ್ತೂ ಏರುತ್ತಿರುವುದರಿಂದ ಐಪಿಎಲ್ ಭಾರತದಲ್ಲಿ ನಡೆಸೋದೇ ಕಷ್ಟವೆನಿಸಿದೆ. ಯಾಕೆಂದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗದಿದ್ದರೆ ವಿದೇಶಿ ಆಟಗಾರರು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಾರೆ, ವಿದೇಶಿಗರಿಲ್ಲದಿದ್ದರೆ ಐಪಿಎಲ್ ಕಳೆಗುಂದುತ್ತದೆ. ಅಂದ್ಹಾಗೆ ಈ ಮೊದಲು ಶ್ರೀಲಂಕಾ, ನಾವು ಐಪಿಎಲ್ ನಡೆಸಲು ಆಸಕ್ತಿ ಹೊಂದಿದ್ದೇವೆ ಎಂದು ಬಿಸಿಸಿಐ ಜೊತೆ ಹೇಳಿಕೊಂಡಿತ್ತು.

Story first published: Thursday, June 4, 2020, 20:25 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X