ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!

IPL might go through a major change which might change the complete game
BCCI plans game-changer ‘Power Player’ in IPL: Report

ನವದೆಹಲಿ, ನವೆಂಬರ್ 4: ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. ಮುಂದಿನ ಐಪಿಎಲ್ ಆವೃತ್ತಿಯಿಂದ ಪವರ್ ಪ್ಲೇಯರ್ ಎನ್ನುವ ಹೊಸ ಪರಿಕಲ್ಪನೆ ತರಲು ಬಿಸಿಸಿಐ ಯೋಚಿಸಿದೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್

ಪವರ್ ಪ್ಲೇಯರ್ ಅಂದರೆ ಇಲ್ಲಿ ತಂಡವೊಂದು ವಿಕೆಟ್‌ ಕಳೆದುಕೊಂಡಾಗ ಅಥವಾ ಓವರ್‌ ಮುಗಿದಾಗ ಪಂದ್ಯದ ಯಾವುದೇ ಸಮಯದಲ್ಲಾದರೂ ಬದಲಿ ಆಟಗಾರರನ್ನು ಮೈದಾನಕ್ಕಿಳಿಸಲು ಅನುಮತಿ ಮಾಡಿಕೊಡಲಾಗುತ್ತದೆ. ಮೈದಾನಕ್ಕಿಳಿಯುವ ಬದಲಿ ಆಟಗಾರ ತಂಡಕ್ಕೆ ಬಲ ತುಂಬಲು ಅವಕಾಶವಿದೆ.

ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಹಾಗೆ ಸಂದರ್ಭಕ್ಕೆ ತಕ್ಹಾಗೆ ಮೈದಾನಕ್ಕಿಳಿಯುವ ಬದಲಿ ಆಟಗಾರ 'ಪವರ್ ಪ್ಲೇಯರ್' ಅನ್ನಿಸಿಕೊಳ್ಳುತ್ತಾನೆ.

ಅನುಮೋದನೆ ದೊರೆತಿದೆ

ಅನುಮೋದನೆ ದೊರೆತಿದೆ

ಈ ಬಗ್ಗೆ ಐಎಎನ್‌ಎಸ್‌ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಗಳು, ಈ ನೂತನ ಪರಿಕಲ್ಪನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಆದರೆ ಮಂಗಳವಾರ (ನವೆಂಬರ್ 5) ಮುಂಬೈಯಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಐಪಿಎಲ್ ಆಡಳಿತ ಸಮಿತಿ ಜೊತೆ ಸಭೆ ನಡೆಸಿ ಈ ಬಗ್ಗೆ ಇನ್ನೊಂದಿಷ್ಟು ಮಾತುಕತೆ ನಡೆಸಲಿದ್ದೇವೆ ಎಂದಿದ್ದಾರೆ.

ಪ್ಲೇಯಿಂಗ್ XI ಇರಲ್ಲ!

ಪ್ಲೇಯಿಂಗ್ XI ಇರಲ್ಲ!

ಆಟದ ವೇಳೆ ಪ್ಲೇಯಿಂಗ್ XI ಘೋಷಿಸದಿರುವ ಪರಿಕಲ್ಪನೆಯತ್ತ ನಾವು ಯೋಚಿಸುತ್ತಿದ್ದೇವೆ. ಅಂದರೆ ಇಲ್ಲಿ 15 ಜನರ ತಂಡ ಘೋಷಿಸಲಾಗುತ್ತದೆ. ತಂಡವೊಂದರ ವಿಕೆಟ್ ಉರುಳಿದಾಗ ಅಥವಾ ಓವರ್‌ನ ಕೊನೆಯಲ್ಲಿ ಬದಲಿ ಆಟಗಾರನನ್ನು ಮೈದಾನಕ್ಕಿಳಿಸಲು ಇಲ್ಲಿ ಅವಕಾಶವಿದೆ.

ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪರಿಚಯ

ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪರಿಚಯ

ಐಪಿಎಲ್‌ನಲ್ಲಿ ಇದನ್ನು ಪರಿಚಯಿಸುವುದಕ್ಕೂ ಮುನ್ನ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದನ್ನು ಪರಿಚಯಿಸೋದು ಒಳ್ಳೇದು ಅಂತ ನಮ್ಮ ಆಲೋಚನೆ,' ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದರೆ ಮುಂದಿನ ಐಪಿಎಲ್‌ನಲ್ಲಿ ಎಲ್ಲಾ ಪಂದ್ಯಗಳೂ ಬಹುತೇಕ ರೋಚಕವೇ ಎನಿಸಿಕೊಳ್ಳುವುದರಲ್ಲಿದೆ.

ಅಧಿಕಾರಿಗಳು ಕೊಟ್ಟ ವಿವರಣೆ

ಅಧಿಕಾರಿಗಳು ಕೊಟ್ಟ ವಿವರಣೆ

'ಕೊನೆಯ ಓವರ್‌ನಲ್ಲಿ ನಿಮಗೆ 20 ರನ್‌ಗಳು ಬೇಕಿವೆ ಅಂತಿಟ್ಟುಕೊಳ್ಳಿ. ಪ್ಲೇಯಿಂಗ್ XIನಲ್ಲಿ ಹೆಸರಿಸದಿದ್ದರಿಂದ ಡಗ್‌ ಔಟ್‌ನಲ್ಲಿ ಕೂತಿರುವ ಆ್ಯಂಡ್ರೆ ರಸೆಲ್ ನಿಮ್ಮ ಬಳಿ ಇದ್ದಾರೆ. ಆಗ ಅದೇ ರಸೆಲ್ 'ಪವರ್ ಪ್ಲೇಯರ್' ಆಗಿ ಮೈದಾನಕ್ಕಿಳಿಯಬಹುದು. ಸ್ಫೋಟಕ ಬ್ಯಾಟಿಂಗ್‌ ಮೂಲಕ ಪಂದ್ಯವನ್ನು ಗೆಲ್ಲಿಸಬಹುದು,' ಎಂದು ಅಧಿಕಾರಿಗಳು ವಿವರಿಸಿದರು.

Story first published: Monday, November 4, 2019, 19:46 [IST]
Other articles published on Nov 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X