ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ನಾಯಕನಾಗಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಥ್ಯಾಂಕ್ಯೂ ವಿರಾಟ್: ಸೌರವ್ ಗಂಗೂಲಿ

BCCI president Ganguly on Kohli: Thank Virat for tremendous performance as captain

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಗುರುವಾರ ಸಂಜೆ ಪ್ರಕಟಿಸಿದ್ದಾರೆ. ಟಿ20 ವಿಶ್ವಕಪ್‌ನ ಬಳಿಕ ತಾನು ಅಂತಾರಾಷ್ಟ್ರೀಯ ಟಿ20 ನಾಯಕತ್ವದ ಹುದ್ದೆಯಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಸಾಮಾಜಿಕ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ಜೋರಾಗಿ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಅಂತ್ಯ ಹಾಡಿದಂತಾಗಿದೆ. ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು ನಾಯಕನಾಗಿ ವಿರಾಟ್ ಕೊಹ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.

ಟಿ20 ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿದ ಕೊಡುಗೆಗಾಗಿ ಧನ್ಯವಾದಗಳು ವಿರಾಟ್ ಎಂದು ಸೌರವ್ ಗಂಗೂಲಿ ಕೊಹ್ಲಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. "ಭಾರತೀಯ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಿಜವಾಗಿಯೂ ಆಸ್ತಿಯಾಗಿದ್ದಾರೆ ಮತ್ತು ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ ಅತ್ಯಂತ ಯಶಸ್ವೀ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ಭವಿಷ್ಯದ ಹಾದಿಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಟಿ20 ನಾಯಕತ್ವಕ್ಕೆ ವಿದಾಯ ಹೇಳುವ ನಿರ್ಧಾರ ಪ್ರಕಟಿಸಿದ ಬಳಿಕ ತಿಳಿಸಿದ್ದಾರೆ.

ಟಿ20 ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧಾರ!ಟಿ20 ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ನಿರ್ಧಾರ!

"ಟಿ20 ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿ ನೀಡಿದ ಅಮೋಘ ಕೊಡುಗೆಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಮುಂಬರುವ ಟಿ20 ವಿಶ್ವಕಪ್‌ಗೆ ನಾವು ವಿರಾಟ್‌ಗೆ ಶುಭಹಾರೈಸುತ್ತೇವೆ. ಆತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನಿಡುವ ಮೂಲಕ ರನ್‌ಗಳನ್ನು ಗಳಿಸುವುದನ್ನು ಮುಂದುವರಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ" ಎಂದು ಸೌರವ್ ಗಂಗೂಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳುಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳು

ಇನ್ನು ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಳೆದ ಆರು ತಿಂಗಳಿನಿಂದ ಈ ವಿಚಾರವಾಗಿ ವಿರಾಟ್ ಕೊಹ್ಲಿ ಹಾಗೂ ಲೀಡರ್‌ಶಿಪ್ ತಂಡದ ಜೊತೆಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾಯಕತ್ವ ತೊರೆಯುವ ವಿಚಾರವಾಗಿ ಹಬ್ಬಿದ್ದ ವರದಿಗೆ ಸಂಬಂಧಿಸಿದಂತೆ ಜಯ್ ಶಾ ಪ್ರತಿಕ್ರಿಯಿಸುತ್ತಾ ಭಾರತ ತಂಡ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುವವರೆಗೆ ನಾಯಕತ್ವದಲ್ಲಿ ಬದಲಾವನೆಯಿಲ್ಲ ಎಂದಿದ್ದರು.

ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

"ನಾವು ಭಾರತೀಯ ಕ್ರಿಕೆಟ್ ತಂಡದ ವಿಚಾರವಾಗಿ ಸ್ಪಷ್ಟವಾದ ಮಾರ್ಗಸೂಚಿಯನ್ನು ಹೊಂದಿದ್ದೇವೆ. ಕೆಲಸದ ಹೊರೆಗಳನ್ನು ಪರಿಗಣಿಸಿ ಮತ್ತು ನಾಯಕತ್ವದ ಬದಲಾವಣೆಗೆ ಸುಗಮವಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಂಡ ಬಳಿಕವೇ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಮುಂಬರುವ ಟಿ20 ವಿಶ್ವಕೊ್‌ನ ಬಳಿಕ ಅವರು ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ನಾನು ಮತ್ತು ವಿರಾಟ್ ಕೊಹ್ಲಿ ಈ ಬಗ್ಗೆ ಟೀಡರ್‌ಶಿಪ್ ತಂಡದ ಜೊತೆಗೆ ಚರ್ಚಿಸುತ್ತಿದ್ದು ಕಳೆದ ಆರು ತಿಂಗಳಿನಿಂದ ಈ ನಿರ್ಧಾರದ ಆಲೋಚನೆಯನ್ನು ವಿರಾಟ್ ಕೊಹ್ಲಿ ಮಾಡಿಕೊಂಡಿದ್ದರು ಎಂದು ಜಯ್ ಶಾ ಹೇಳಿದ್ದಾರೆ.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ಚುಟುಕು ಕ್ರಿಕೆಟ್ ನಲ್ಲಿ ವಿರಾಟ್ ಮಾಡಿದ ದಾಖಲೆ ಸರಿಗಟ್ಟೋರು ಯಾರು? | Oneindia Kannada

2017ರಲ್ಲಿ ಮಹೇಂದ್ರ ಸಿಂಗ್ ಧೋನಿ ಸೀಮಿತ ಓವರ್‌ಗಳ ತಮಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಭಾರತೀಯ ಟಿ20 ತಂಡದ ನಾಯಕನ ಹೊಣೆ ಹೊತ್ತುಕೊಂಡಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯ್ಲಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಒಟ್ಟು 45 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಭಾರತ ತಂಡ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 14 ಪಂದ್ಯಗಳಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಟೈ ಫಲಿತಾಂಶ ಪಡೆದುಕೊಂಡಿದ್ದರೆ ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

Story first published: Friday, September 17, 2021, 10:14 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X