ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆಯಿಲ್ಲ: ಕೊನೆಗೂ ಮೌನ ಮುರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಳೆದ ತಿಂಗಳು ಅಕ್ಟೋಬರ್ 26ರಂದು ಟೀಮ್ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಯಿತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮುನ್ನೆಡೆಯಲಿರುವ ಟಿ20, ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಪ್ರಕಟಿಸಿತು.

ಟೀಮ್ ಇಂಡಿಯಾ ಆಯ್ಕೆ ಬಳಿಕ ಭಾರೀ ಟೀಕೆಗಳು ಕೇಳಿಬಂದವು. ಇದಕ್ಕೆ ಕಾರಣ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ರನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಹೆಚ್ಚಿನ ಕೂಗು ಕೇಳಿಬಂತು. ಅನೇಕ ಮಾಜಿ ಕ್ರಿಕೆಟಿಗರು ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಅಕ್ಷರ್ ಪಟೇಲ್ ಆಯ್ಕೆಯಾಗದೆ ಇರುವುದಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

 ಸೂರ್ಯಕುಮಾರ್ ಆಯ್ಕೆ ಏಕಿಲ್ಲ : ಸೌರವ್ ಗಂಗೂಲಿ ಆಯ್ಕೆ ಸಮಿತಿಯನ್ನು ಪ್ರಶ್ನಿಸಬೇಕು! ಸೂರ್ಯಕುಮಾರ್ ಆಯ್ಕೆ ಏಕಿಲ್ಲ : ಸೌರವ್ ಗಂಗೂಲಿ ಆಯ್ಕೆ ಸಮಿತಿಯನ್ನು ಪ್ರಶ್ನಿಸಬೇಕು!

ಇನ್ನು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್ ವೆಂಗಸರ್ಕಾರ್ ಸೂರ್ಯಕುಮಾರ್‌ನಂತಹ ಪ್ರತಿಭಾವಂತ ಕ್ರಿಕೆಟಿಗನನ್ನು ಆಯ್ಕೆ ಸಮಿತಿ ಏಕೆ ಪರಿಗಣಿಸಿಲ್ಲ ಎಂಬುದನ್ನು ಸೌರವ್‌ ಗಂಗೂಲಿ ಪ್ರಶ್ನಿಸಲಿ ಎಂದಿದ್ದರು. ಆದರೆ ಈಗ ಕೊನೆಗೂ ದಾದಾ ಮೌನ ಮುರಿದಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಪ್ರದರ್ಶನ ಹೇಗಿದೆ?

ಪ್ರಸ್ತುತ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಪ್ರದರ್ಶನ ಹೇಗಿದೆ?

ಐಪಿಎಲ್ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಕೊನೆಯ ಲೀಗ್ ಪಂದ್ಯವನ್ನ ಆಡೋಕು ಮೊದಲು ಸೂರ್ಯಕುಮಾರ್ 13 ಪಂದ್ಯಗಳಲ್ಲಿ 41.56 ಸರಾಸರಿಯಲ್ಲಿ 374 ರನ್ ಮತ್ತು 153.28 ಸ್ಟ್ರೈಕ್ ರೇಟ್ ಹೊಂದಿದ್ದರು. ಸೂರ್ಯ ಐಪಿಎಲ್ 2020 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಕಳೆದ ಎರಡು ಸೀಸನ್‌ನಲ್ಲೂ ಪ್ರಕಾಶಮಾನವಾಗಿ ಮಿಂಚಿದ್ದ ಬ್ಯಾಟ್ಸ್‌ಮನ್

ಕಳೆದ ಎರಡು ಸೀಸನ್‌ನಲ್ಲೂ ಪ್ರಕಾಶಮಾನವಾಗಿ ಮಿಂಚಿದ್ದ ಬ್ಯಾಟ್ಸ್‌ಮನ್

ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ 2018 ಮತ್ತು 2019 ರಲ್ಲಿ ಸೂರ್ಯಕುಮಾರ್ ಯಾದವ್ ಕ್ರಮವಾಗಿ 512 ಮತ್ತು 424 ರನ್ ಗಳಿಸಿದ್ದಾರೆ. ನಾಲ್ಕು ಬಾರಿ ಪ್ರಶಸ್ತಿ ವಿಜೇತರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಯಾದವ್, ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಕೊಹ್ಲಿಯನ್ನು ದೇವರೆಂದು ಕರೆದಿದ್ದ ಸೂರ್ಯಕುಮಾರ್ ಯಾದವ್ ಹಳೆಯ ಟ್ವೀಟ್ ವೈರಲ್

ಸೂರ್ಯನಷ್ಟೇ ಉತ್ತಮ ಪ್ರದರ್ಶನ ನೀಡಿದ್ದಾರೆ ಇತರೆ ಆಟಗಾರರು

ಸೂರ್ಯನಷ್ಟೇ ಉತ್ತಮ ಪ್ರದರ್ಶನ ನೀಡಿದ್ದಾರೆ ಇತರೆ ಆಟಗಾರರು

ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ವರುಣ್ ಚಕ್ರವರ್ತಿ, ಶುಭ್ಮನ್ ಗಿಲ್ ಹೀಗೆ ಯುವ ತಾರೆಗಳು ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಕೆಲವರಿಗೆ ಅವಕಾಶ ಸಿಕ್ಕಿದೆ. ಎಲ್ಲ ಆಟಗಾರರಿಗೂ ಒಂದೇ ಸಮಯದಲ್ಲಿ ಅವಕಾಶ ನೀಡಲು ಸಾಧ್ಯವಾಗದು ಎಂಬುದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಾದ.

ಸೂರ್ಯಕುಮಾರ್ ಆಯ್ಕೆ ಯಾವಾಗ?

ಸೂರ್ಯಕುಮಾರ್ ಆಯ್ಕೆ ಯಾವಾಗ?

ಐಪಿಎಲ್‌ನಲ್ಲಿ ನಿರಂತರ ಸ್ಥಿರ ಪ್ರದರ್ಶನದ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಆಟ ಆಡುತ್ತಿರುವ ಸೂರ್ಯಕುಮಾರ್ ಯಾದವ್‌ಗೆ ಆತನ ಸಮಯ ಬಂದಾಗ ಖಂಡಿತಾ ಅವಕಾಶ ಸಿಗುತ್ತದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಸೂರ್ಯಕುಮಾರ್ ಅತ್ಯುತ್ತಮ ಆಟಗಾರನಾಗಿದ್ದು, ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

Story first published: Wednesday, November 4, 2020, 10:30 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X