ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!

BCCI President Sourav Ganguly commented on Virat Kohli

ನವದೆಹಲಿ, ಅಕ್ಟೋಬರ್ 23: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಈಗಿನ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

'ನಾನು ವಿರಾಟ್ ಕೊಹ್ಲಿ ಜೊತೆ ನಾಳೆ ಮಾತನಾಡುತ್ತೇನೆ. ಎಲ್ಲೆಲ್ಲ ಅಗತ್ಯ ಬೀಳುತ್ತದೆಯೋ ಅಲ್ಲೆಲ್ಲಾ ನಾನು ಸಾಧ್ಯವಾದ ಮಟ್ಟಿಗೆ ಆತನಿಗೆ ಬೆಂಬಲಿಸುತ್ತೇನೆ,' ಎಂದು ಬುಧವಾರ (ಅಕ್ಟೋಬರ್ 23) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಗಂಗೂಲಿ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಪಟ್ಟ ಅಲಂಕರಿಸಿದ ಮಾಜಿ ನಾಯಕ ಸೌರವ್ ಗಂಗೂಲಿಬಿಸಿಸಿಐ ಅಧ್ಯಕ್ಷ ಪಟ್ಟ ಅಲಂಕರಿಸಿದ ಮಾಜಿ ನಾಯಕ ಸೌರವ್ ಗಂಗೂಲಿ

ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಟೆಸ್ಟ್ ಸರಣಿಯಲ್ಲಿ ಜಯಿಸುವ ಮೂಲಕ ವಿರಾಟ್ ಕೊಹ್ಲಿ ಪಡೆ ತವರಿನಲ್ಲಿ ನಡೆದ ಟೆಸ್ಟ್‌ ಸರಣಿಗಳಲ್ಲಿ ಸತತ 11 ಗೆಲುವು ಸಾಧಿಸಿದ ದಾಖಲೆ ನಿರ್ಮಿಸಿದೆ. ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-0ಯ ಜಯ ಗಳಿಸಿತ್ತು.

'ನಿಸ್ಸಾನ್ ಜೊಂಗಾ' ಮೂಲಕ ಆರ್ಮಿ ಮೇಲಿನ ಪ್ರೀತಿ ತೋರಿಕೊಂಡ ಧೋನಿ'ನಿಸ್ಸಾನ್ ಜೊಂಗಾ' ಮೂಲಕ ಆರ್ಮಿ ಮೇಲಿನ ಪ್ರೀತಿ ತೋರಿಕೊಂಡ ಧೋನಿ

'ಭಾರತ ಕ್ರಿಕೆಟ್‌ ತಂಡವನ್ನು ವಿರಾಟ್ ಕೊಹ್ಲಿ ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನಾವೆಲ್ಲ ಆತನೊಂದಿಗಿರಬೇಕಿದೆ. ನಾವು ಆತನೊಂದಿಗಿದ್ದೇವೆ,' ಎಂದು ಗಂಗೂಲಿ ತಿಳಿಸಿದ್ದಾರೆ. ತಂಡದ ಹೆಡ್‌ ಕೋಚ್ ರವಿ ಶಾಸ್ತ್ರಿ ಆಯ್ಕೆ ವಿಚಾರದಲ್ಲಿ ಗಂಗೂಲಿ ಅಸಮಾಧಾನ ಹೊಂದಿದ್ದರು. ಹೀಗಾಗಿ ಶಾಸ್ತ್ರಿಗೆ ಹತ್ತಿರವಿರುವ ಕೊಹ್ಲಿಗೆ ಗಂಗೂಲಿ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿ ಬಂದಿತ್ತು.

'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!

ಆದರೆ ಬಂಗಾಳ ಹುಲಿ ದಾದ, ಯಾವುದೇ ಭಿನ್ನಾಭಿಪ್ರಾಯಗಳಿಗೆ ಎಡೆಗೊಡದೆ ಭಾರತೀಯ ಕ್ರಿಕೆಟನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಆಶಯ ವ್ಯಕ್ತಪಡಿಸಿದ್ದಾರೆ. 'ವಿಶ್ವಾಸಾರ್ಹತೆ, ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ಯಾವುದೇ ರಾಜಿಯಿಲ್ಲ. ಭಾರತ ತಂಡವನ್ನು ಮುನ್ನಡೆಸಿದ ರೀತಿಯಲ್ಲೇ ಬಿಸಿಸಿಐ ಮುನ್ನಡೆಸುತ್ತೇನೆ,' ಎಂದು ಸೌರವ್ ತಿಳಿಸಿದ್ದಾರೆ.

Story first published: Wednesday, October 23, 2019, 16:15 [IST]
Other articles published on Oct 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X