ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಟ್ರೋಫಿಯ ಜೊತೆಗೆ ಪೋಸ್ ನೀಡಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ

BCCI president Sourav Ganguly poses with T20 World Cup trophy

ಮುಂದಿನ ವರ್ಷ ಭಾರತ ಟಿ20 ವಿಶ್ವಕಪ್‌ಗೆ ಆತಿಥ್ಯವನ್ನು ವಹಿಸಿಕೊಳ್ಳಲಿದೆ. ಈ ಮಹತ್ವದ ಟೂರ್ನಿ ಮುಂದಿನ ವರ್ಷದ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿದೆ. ಈ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಕೊರೊನಾ ವೈರಸ್‌ನ ಕಾರಣದಿಂದಾಗಿ 2022ಕ್ಕೆ ಮುಂದೂಡಿಕೆಯಾಗಿದ್ದು ಮುಂದಿನ ವರ್ಷದ ವಿಶ್ವಕಪ್ ನಿಗದಿಯಂತೆಯೇ ನಡೆಯಲಿದೆ.

ಗುರುವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ಶಾ ಟಿ20 ವಿಶ್ವಕಪ್‌ನ ಟ್ರೋಫಿಯ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿರುವ ಗಂಗೂಲಿ '2021ರಲ್ಲಿ ಇದು ಭಾರತದ ಸಮಯ. ಐಸಿಸಿ ಟಿ20 ವಿಶ್ವಕಪ್' ಎಂದು ಸಂತಸದಿಂದ ಬರೆದುಕೊಂಡಿದ್ದಾರೆ.

ಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆ

ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಬಯೋಬಬಲ್‌ನಲ್ಲಿ ಭಾರೀ ಯಶಸ್ವಿಯಾಗಿ ಏರ್ಪಡಿಸಿತು. ಈಗ ಭಾರತ ವಿಶ್ವಕಪ್‌ಅನ್ನು ಯಾವ ರೀತಿಯಾಗಿ ಆಯೋಜನೆ ಮಾಡಲಿದೆ ಎಂದು ಕುತೂಹಲವನ್ನು ಮೂಡಿಸಿದೆ. ಕೊರೊನಾ ವೈರಸ್‌ನ ಮಧ್ಯೆ ಯಾವ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಬಿಸಿಸಿಐ ವಿಶ್ವಕಪ್ ಆಯೋಜನೆ ಮಾಡಲಿದೆ ಎಂದು ಕಾದು ನೋಡಬೇಕಿದೆ.

ಟಿ20 ವಿಶ್ವಕಪ್ ಕೊನೆಯಬಾರಿಗೆ 2016ರರಲ್ಲಿ ಆಯೋಜನೆಯಾಗಿತ್ತು. ಆಗಲೂ ಭಾರತವೇ ಈ ಟೂರ್ನಿಯನ್ನು ಆಯೋಜನೆ ಮಾಡಿತ್ತು. ಅಂದು ವೆಸ್ಟ್ ಇಂಡೀಸ್ ಟಿ20 ಕ್ರಿಕೆಟ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೀಮ್ ಇಂಡಿಯಾ ಸೆಮಿಪೈನಲ್‌ನಲ್ಲಿ ಹೋರಾಟವನ್ನು ಅಂತ್ಯಗೊಳಿಸಿತ್ತು.

ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

"ಐಸಿಸಿ ಟಿ20 ವಿಶ್ವಕಪ್‌ಅನ್ನು ಆಯೋಜನೆ ಮಾಡುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. 1987ರ ವಿಶ್ವಕಪ್‌ ಬಳಿಕ ಭಾರತ ಅನೇಕ ಕ್ರಿಕೆಟ್ ವಿಶ್ವಮಟ್ಟದ ಕ್ರಿಕೆಟ್ ಕೂಟಗಳನ್ನು ಆಯೋಜನೆ ಮಾಡಿದೆ. ಭಾರತದಂತಾ ಕ್ರಿಕೆಟ್ ಪ್ರೇಮಿಗಳ ದೇಶದಲ್ಲಿ ವಿಶ್ವದ ಬೇರೆ ಬೇರೆಭಾಗದಿಂದ ಬರುವ ಕ್ರಿಕೆಟ್ ಆಟಗಾರರು ತಮ್ಮ ಪ್ರದರ್ಶನವನ್ನು ನೀಡಲು ಉತ್ಸುಕರಾಗಿದ್ದಾರೆ ಎಂದು ನಾನು ಖಚಿತವಾಗಿ ಬಲ್ಲೆ" ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.

Story first published: Friday, November 13, 2020, 17:14 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X