ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರಂಭವಾಗುತ್ತಾ ಭಾರತ vs ಪಾಕಿಸ್ತಾನ ದ್ವಿಪಕ್ಷೀಯ ಸರಣಿ?: ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತಿಕ್ರಿಯೆ

BCCI President Sourav Ganguly Reaction About India-Pakistan Bilateral Cricket

ಭಾರತ ಹಾಗೂ ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗದೆ ಹಲವು ವರ್ಷಗಳೇ ಕಳೆದಿದೆ. ಎರಡು ದೇಶಗಳ ನಡುವಿನ ಸಂಬಂಧ ಹದೆಗೆಟ್ಟ ಕಾರಣ ಕ್ರಿಕೆಟ್ ಸರಣಿಯೂ ಮೇಲೂ ಇದೆ ಪರಿಣಾಮ ಬೀರಿದ್ದು ಎರಡು ದೇಶಗಳು ಐಸಿಸಿ ಟೂರ್ನಿ ಹಾಗೂ ಏಷ್ಯಾಕಪ್‌ನಂತಾ ಸರಣಿಯಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿದೆ. 2012-13ರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಸಂಪೂರ್ಣವಾಗಿ ಸ್ಥಗಿತವಾಗಿದೆ. ಅಂದು ಭಾರತ ಹಾಗೂ ಪಾಕಿಸ್ತಾನ ಕೊನೆಯ ಬಾರಿಗೆ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಭಾಗಿಯಾಗಿದ್ದವು. ಭಾರತದಲ್ಲಿ ಈ ಅಂತಿಮ ಸರಣಿ ಆಯೋಜನೆಯಾಗಿತ್ತು.

ಈ ಸರಣಿಯ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿತು. ಹೀಗಾಗಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಸಂಪೂರ್ಣ ಸ್ಥಗಿತವಾಯಿತು. ಇದೀಗ ಕೆಲ ಮಾಜಿ ಆಟಗಾರರು ಭಾರತ ಹಾಘೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಆರಂಭವಾಗಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಎರಡು ದೇಶಗಳ ಕ್ರಿಕೆಟ್ ಮಂಡಳಿಗಳು ಮಾತ್ರವೇ ನಿರ್ಧರಿಸುವ ವಿಚಾರ ಇದಲ್ಲ ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಗಂಗೂಲಿ.

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

ಮಂಡಳಿಗಳ ಕೈಯ್ಯಲ್ಲಿ ಇಲ್ಲ

ಮಂಡಳಿಗಳ ಕೈಯ್ಯಲ್ಲಿ ಇಲ್ಲ

40ನೇ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಯ ನಿರ್ಧಾರ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ಕೈಯಲ್ಲಿ ಇಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಧೋನಿ ಫೋಟೋ ಹಾಕಿದ ಜಾನ್ ಸೀನಾ; ನ.14ರ ಕ್ರಿಕೆಟ್ ಸುದ್ದಿಗಳು

ಸರ್ಕಾರಗಳು ಈ ಬಗ್ಗೆ ನಿರ್ಧಾರ ಮಾಡಬೇಕು

ಸರ್ಕಾರಗಳು ಈ ಬಗ್ಗೆ ನಿರ್ಧಾರ ಮಾಡಬೇಕು

"ವಿಶ್ವಮಟ್ಟದ ಟೂರ್ನಮೆಂಟ್‌ಗಳಲ್ಲಿ ಎರಡು ದೇಶಗಳ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತವೆ. ದ್ವಿಪಕ್ಷೀಯ ಕ್ರಿಕೆಟ್ ಅನ್ನು ವರ್ಷಗಳಿಂದೀಚೆಗೆ ಸ್ಥಗಿತಗೊಳಿಸಲಾಗಿದೆ. ಇದು ಮುಂದಿವರಿಸಲು ಆಯಾ ದೇಶಗಳು ನಿರ್ಧಾರ ಮಾಡಬೇಕಾಗಿದೆ. ಈ ವಿಚಾರ ರಮೀಜ್ ರಾಜಾ ಅವರ ಕೈಯ್ಯಲ್ಲಿ ಅಥವಾ ನನ್ನ ಕೈಯ್ಯಲ್ಲಿ ಇಲ್ಲ" ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.

ದ್ವಿಪಕ್ಷೀಯ ಸರಣಿ ಬಯಸಿದ ರಮೀಜ್ ರಾಜಾ

ದ್ವಿಪಕ್ಷೀಯ ಸರಣಿ ಬಯಸಿದ ರಮೀಜ್ ರಾಜಾ

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಬಳಿ ಈ ಪ್ರಶ್ನೆ ಎದುರಾಗಿದ್ದಾಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಳಿ ಈ ವಿಚಾರವಾಗಿ ನಾನು ಮಾತನಾಡುತ್ತೇನೆ ಎಂದಿದ್ದರು. ಈ ಸಂದರ್ಭದಲ್ಲಿ ರಮೀಜ್ ರಾಜಾ 'ಕ್ರೀಡೆ ರಾಜಕೀಯದಿಂದ ದೂರವುಳಿಯಬೇಕು' ಎಂಬ ಮಾತನ್ನು ಹೇಳಿದ್ದರು.

ಕ್ರಿಕೆಟ್ ಬಾಂಧವ್ಯದ ಬಗ್ಗೆ ರಾಜಾ ಮಾತು!

ಕ್ರಿಕೆಟ್ ಬಾಂಧವ್ಯದ ಬಗ್ಗೆ ರಾಜಾ ಮಾತು!

ಎಸಿಸಿ(ಏಶ್ಯನ್ ಕ್ರಿಕೆಟ್ ಕೌನ್ಸಿಲ್) ಸಭೆಗಳ ಹಿನ್ನೆಲೆಯಲ್ಲಿ ನಾನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ನಾವು ಕ್ರಿಕೆಟ್ ಬಾಂಧವ್ಯವನ್ನು ರಚಿಸಬೇಕಾಗಿದೆ. ರಾಜಕೀಯ ಕ್ರೀಡೆಯಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ನಾನು ನಂಬಿದ್ದೇನೆ. ಇದು ನಮ್ಮ ನಿಲುವು" ಎಂದು ಮಾತನಾಡಿದ್ದರು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ.

ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada

Story first published: Monday, November 15, 2021, 18:16 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X