ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ: ಮಹತ್ತರ ಹೆಜ್ಜೆಯಿಟ್ಟ ಬಿಸಿಸಿಐ!

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡೋದಿಲ್ಲ?! | Oneindia Kannada
BCCI reserves right regarding participation in World Cup - Anirudh Chaudhry

ನವದೆಹಲಿ, ಫೆಬ್ರವರಿ 20: ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಕೋರ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಬಲಿ ಪಡೆದ ಘಟನೆಗೆ ಸಂಬಂಧಿಸಿ ಬಿಸಿಸಿಐ ಮಹತ್ತರ ಹೆಜ್ಜೆಯಿಟ್ಟಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬದ್ಧ ಎದುರಾಳಿಯಾದ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಆಡಬೇಕೋ ಬೇಡವೋ ಎಂದು ನಿರ್ಧರಿಸುವ ಹಕ್ಕನ್ನು ಬಿಸಿಸಿಐ ಕಾದಿರಿಸಿಕೊಂಡಿದೆ.

ಗೆದ್ದ ಅಂತಾರಾಷ್ಟ್ರೀಯ ಚಿನ್ನವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ ಅಮಿತ್ಗೆದ್ದ ಅಂತಾರಾಷ್ಟ್ರೀಯ ಚಿನ್ನವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ ಅಮಿತ್

ದಾಳಿಗೆ ಪ್ರತೀಕಾರ ತೀರಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ಕ್ರಿಕೆಟ್ ಅಭಿಮಾನಿಗಳು, ಜೂನ್ 16ರಂದು ನಡೆಯುವ 2019ರ ವಿಶ್ವಕಪ್ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ವಿರಾಟ್ ಕೊಹ್ಲಿ ಬಳಗ ಪಾಕ್ ವಿರುದ್ಧ ಮೈದಾನಕ್ಕಿಳಿಯಬಾರದು ಎಂದು ಈಗಲೂ ಒತ್ತಾಯಿಸುತ್ತಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಐಸಿಸಿ ಇತ್ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸುವ ಸೂಚನೆಗಳಿಲ್ಲ ಎಂದಿದೆ. ಆದರೆ ಅಂತಿಮ ನಿರ್ಧಾರ ಐಸಿಸಿ ಕೈಯಲ್ಲಿಲ್ಲ. ಬದಲಿಗೆ, ತಂಡ ಭಾಗವಹಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು ಬಿಸಿಸಿಐ ತಾನೇ ಹಿಡಿದಿಟ್ಟುಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದಲೂ 'ಪಾಕಿಸ್ತಾನ ಕ್ರಿಕೆಟರ್ಸ್' ಹೊರಕ್ಕೆಚಿನ್ನಸ್ವಾಮಿ ಕ್ರೀಡಾಂಗಣದಿಂದಲೂ 'ಪಾಕಿಸ್ತಾನ ಕ್ರಿಕೆಟರ್ಸ್' ಹೊರಕ್ಕೆ

'ಭಾಗವಹಿಸುವಿಕೆ ಒಪ್ಪಂದ'ಕ್ಕೆ ಸಂಬಂಧಿಸಿದ ಸದಸ್ಯರು ಸಹಿಯ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ ಬಳಿಕ, ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತ ಭಾಗವಹಿಸಬೇಕೋ-ಬೇಡವೋ ಎಂಬ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ' ಎಂದು ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.

Story first published: Wednesday, February 20, 2019, 18:45 [IST]
Other articles published on Feb 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X