ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾದ ಪಂದ್ಯ ಒಂದಕ್ಕೆ ಬಿಸಿಸಿಐ ಸಂಪಾದಿಸುವ ಹಣವೆಷ್ಟು ಗೊತ್ತ?

ಟೀಂ ಇಂಡಿಯಾದ ಪ್ರತೀ ಪಂದ್ಯದಿಂದಲೂ BCCI ಗೆ ಎಷ್ಟು ಕೋಟಿ ಸಿಗುತ್ತೆ..? | BCCI
BCCI ropes in Paytm 2019

ಮುಂಬೈ, ಆಗಸ್ಟ್‌ 21: ಡಿಜಿಟಲ್‌ ಹಣಕಾಸು ಸಂಸ್ಥೆ ಪೇಟಿಯಂ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಪ್ರಾಯೋಜಕರಾಗಿ 2019-2023ರ ವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಘೋಷಿಸಿದೆ.

2019ರಿಂದ 2023ರ ಸಾಲಿನಲ್ಲಿ ಬಿಸಿಸಿಐ ತವರು ನೆಲದಲ್ಲಿ ಆಯೋಜಿಸುವ ಎಲ್ಲಾ ದೇಶಿ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳ ಮುಖ್ಯ ಪ್ರಾಯೋಜಕತ್ವ ಸಲುವಾಗಿ ಪೇಟಿಯಂ ಬರೋಬ್ಬರಿ 326.80 ಕೋಟಿ ರೂ. ಮೊತ್ತ ನೀಡಲಿದೆ. ಇದರರ್ಥ ಪ್ರತಿಯೊಂದು ಪಂದ್ಯ ಆಯೋಜನೆಗೆ ಬಿಸಿಸಿಐ ಪೇಟಿಯಂನಿಂದ 3.80 ಕೋಟಿ ರೂ. ಹಣ ಸಂಗ್ರಹಿಸಲಿದೆ.

ಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XIಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XI

ಪೇಟಿಯಂ 2015ರಲ್ಲಿ ಭಾರತ ತಂಡದ ಮುಖ್ಯ ಪ್ರಾಯೋಜಕತ್ವದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದಕ್ಕೂ ಮುನ್ನ ಮೈಕ್ರೊಮ್ಯಾಕ್ಸ್‌ ಸಂಸ್ಥೆಯು ಪ್ರತಿ ಪಂದ್ಯಕ್ಕೆ 2.2 ಕೋಟಿ ರೂ. ಸಂಭಾವನೆ ನೀಡುತ್ತಿತ್ತು. ಬಳಿಕ 2.4 ಕೋಟಿ ರೂ. (ಪ್ರತಿ ಪಂದ್ಯಕ್ಕೆ) ಮೊತ್ತ ನೀಡಿ ಪೇಟಿಯಂ ಈ ಹಕ್ಕನ್ನು ತನ್ನದಾಗಿಸಿಕೊಂಡಿತ್ತು.

ಇದೀಗ ಬಿಸಿಸಿಐ ಮತ್ತು ಪೇಟಿಯಂ ಜೊತೆಗಿನ ಒಪ್ಪಂದ ಇದೇ ವರ್ಷ ಅಂತ್ಯಗೊಂಡ ಹಿನ್ನೆಲೆಯಲ್ಲಿ ಹೊಸ ಪ್ರಾಯೋಜಕತ್ವ ಸಲುವಾಗಿ ಜುಲೈನಲ್ಲಿ ಬಿಸಿಸಿಐ ಟೆಂಡರ್‌ ಕರೆದಿತ್ತು. ಇದೀಗ ಶೇ.58% ರಷ್ಟು ಅಧಿಕ ಮೊತ್ತ ನೀಡುವ ಮೂಲಕ ಪ್ರಾಯೋಜಕತ್ವ ಹಕ್ಕನ್ನು ಪೇಟಿಯಂ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟೆಸ್ಟ್‌ ಕ್ರಿಕೆಟ್‌: ಪಂಟರ್‌ ದಾಖಲೆ ಮುರಿಯಲು ಸಜ್ಜಾದ ಕಿಂಗ್‌ ಕೊಹ್ಲಿ!

ತವರಿನಲ್ಲಿ ಆಯೋಜಿಸಲಾಗುವ ಪ್ರಸಕ್ತ ಸಾಲಿನ ಕ್ರಿಕೆಟ್‌ ಸರಣಿಗಳು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದ್ದು, ಭಾರತ ತಂಡ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಟೆಸ್ಟ್‌ ಮತ್ತು ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಪೇಟಿಯಂನ ಹೆಸರು ಈ ಎಲ್ಲಾ ಸರಣಿಗಳಲ್ಲಿ ಸೇರ್ಪಡೆಯಾಗಲಿದೆ.

ಟೆಸ್ಟ್‌ ರ‍್ಯಾಂಕಿಂಗ್: ಕೊಹ್ಲಿಗೆ ಸಡ್ಡು ಹೊಡೆಯುವತ್ತ ಸಮೀಪಿಸಿದ ಸ್ಟೀವ್‌ ಸ್ಮಿತ್‌

ಅಂದಹಾಗೆ ಸತತ ಎರಡನೇ ಬಾರಿ ಬಿಸಿಸಿಐನ ಪ್ರಾಯೋಜಕ್ವ ಪಡೆದ ಮೊತ್ತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯೂ ಪೇಟಿಯಂ ಪಾಲಾಗಿದೆ. 2010-2013ರ ಸಾಲಿನಲ್ಲಿ ಭಾರತಿ ಏರ್‌ಟೆಲ್‌ ಸಂಸ್ಥೆಯು ಪ್ರತಿ ಪಂದ್ಯಕ್ಕೆ 3.3 ಕೋಟಿ ರೂ. ಮೊತ್ತ ನೀಡಿ ಪ್ರಾಯೋಜಕತ್ವ ಪಡೆದಿತ್ತು. ಆದರೆ, ಪ್ರಾಯೋಜಕತ್ವ ಮುಂದುವರಿಸಿರಲಿಲ್ಲ. ಬಳಿಕ ಬಿಸಿಸಿಐನ ಪ್ರಾಯೋಜಕತ್ವ ಹಕ್ಕಿನ ಮೌಲ್ಯ ಗಣನೀಯ ಕುಸಿತ ಕಂಡು, ಸ್ಟಾರ್‌ ಇಂಡಿಯಾ ಸಂಸ್ಥೆಯು 2.2 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಮೈಕ್ರೊಮ್ಯಾಕ್ಸ್‌ (2014-2015) ಸಂಸ್ಥೆ ಅಷ್ಟೇ ಮೊತ್ತಕ್ಕೆ ಪ್ರಾಯೋಜಕತ್ವ ಪಡೆದಿತ್ತು.

Story first published: Wednesday, August 21, 2019, 18:52 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X