ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸ್ಟಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ ರವಾನಿಸಿದ ಬಿಸಿಸಿಐ

ಕೊರೊನಾ ವೈರಸ್‌ನ ಕಾರಣದಿಂದಾಗಿ ದೇಶದಲ್ಲಿ ಸಂಪೂರ್ಣ ಸ್ಥಬ್ಧವಾಗಿರುವ ಕ್ರಿಕೆಟ್ ಚಟುವಟಿಕೆಯನ್ನು ಮರು ಆರಂಭಿಸಲು ಬಿಸಿಸಿಐ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ. ಐಪಿಎಲ್‌ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈಗ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದೇಶೀಯ ಕ್ರಿಕೆಟ್ ಚಟುವಟಿಗೆ ಆರಂಭಿಸಲು ಸ್ಟಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ರವಾನಿಸಿದೆ.

ಆದರೆ ಕ್ರಿಕೆಟ್ ಪುನರಾರಂಭಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಆಡಳಿತದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು ಅದರ ನಿರ್ದೇಶನದಂತೆ ಮುಂದುವರಿಯಲು ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸೂಚನೆಯನ್ನು ನೀಡಿದೆ. ಹೀಗಾಗಿ ತರಬೇತಿ ಆರಂಭಿಸಲು ಆಯಾ ರಾಜ್ಯಗಳ ಅನುಮತಿ ಪಡೆದು ಮುಂದುವರಿಯಬಹುದಾಗಿದೆ.

ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

100 ಪುಟಗಳಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಇದಾಗಿದೆ. ಇದರಲ್ಲಿರುವ ನಿಯಮದ ಪ್ರಕಾರ ಆಟಗಾರರು ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ತರಬೇತಿ ಪುನರಾರಂಭದ ಅಪಾಯಗಳನ್ನು ಅಂಗೀಕರಿಸುವ ಫಾರ್ಮ್‌ಗೆ ಸಹಿ ಹಾಕಬೇಕಾಗುತ್ತದೆ.

2019-20ರ ದೇಶೀಯ ಕ್ರಿಕೆಟ್ ಋತು ಅಂತ್ಯವಾಗುತ್ತಿದ್ದಂತೆಯೇ ಕೊರೊನಾ ವೈರಸ್ ಕಾರಣದಿಂದಾಗಿ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸ್ಥಬ್ಧವಾಯಿತು. ಮುಂದಿನ ಕ್ರಿಕೆಟ್ ಋತು ಆಗಸ್ಟ್‌ನಲ್ಲಿ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಗ್ಗೆ ಇನ್ನೂ ಅಸ್ಥಿರತೆ ಮುಂದುವರಿದಿದೆ.

ಕ್ರಿಕೆಟ್ ಲೋಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿರುವ ವಿಶೇಷ ದಾಖಲೆಗಳಿವು!

ರಾಜ್ಯಗಳ ಮಧ್ಯೆ ಸಾಕಷ್ಟು ಸಂಚರಿಸಬೇಕಾದ ಅನಿವಾರ್ಯತೆಯ ಕಾರಣದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ದೇಶಿಯ ಕ್ರಿಕೆಟ್‌ಗೆ ಚಾಲನೆ ದೊರೆತಿಲ್ಲ. ಆದರೆ ಈಗ ಅಭ್ಯಾಸ ಸೇರಿದಂತೆ ಇತರ ಚಟುವಟಿಕೆಯನ್ನು ಆರಂಭಿಸಲು ಬಿಸಿಸಿಐ ಸ್ಟಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ರವಾನಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 3, 2020, 10:00 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X