ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ನಾಯಕತ್ವ ಬಿಟ್ಟುಕೊಡಲು ಒಪ್ಪದ ಕೊಹ್ಲಿಯನ್ನು ಬಲವಂತವಾಗಿ ಕೆಳಕ್ಕಿಳಿಸಿದ ಬಿಸಿಸಿಐ: ವರದಿ

BCCI’s bold decision to remove Virat Kohli from ODI captaincy
ವಿರಾಟ್ ಕೊಹ್ಲಿಗೆ ನಾಯಕತ್ವ ಬಿಟ್ಟುಕೊಡಲು ಸ್ವಲ್ಪವೂ ಇಷ್ಟವಿಲ್ಲ | Oneindia Kannada

ಟಿ20 ವಿಶ್ವಕಪ್‌ನಲ್ಲಿ ಭಾರತ ಸೂಪರ್ 12 ಹಂತದಿಂದಲೇ ಹೊರಬಿದ್ದ ಬಳಿಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನ ನಾಯಕತ್ವ ಕೂಡ ತ್ಯಜಿಸುವ ಸಂದರ್ಭ ಹತ್ತಿರವಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ವೈಟ್‌ಬಾಲ್ ಕ್ರಿಕೆಟ್‌ನ ಎರಡು ಮಾದರಿಗೂ ರೋಹಿತ್ ಶರ್ಮಾ ಅವರನ್ನೇ ನಾಯಕನ್ನಾಗಿ ನೇಮಿಸಲು ಬಿಸಿಸಿಐ ಉತ್ಸುಕವಾಗಿ ಎಂಬ ಬಗ್ಗೆ ಬಲವಾಗಿ ಮಾತುಗಳು ಕೇಳಿ ಬಂದಿತ್ತು. ಇದೀಗ ಆ ಮಾತು ನಿಜವಾಗಿದೆ. ಬುಧವಾರ ದಕ್ಷಿಣ ಆಫ್ರಿಕಾಗೆ ಪ್ರವಾಸಕ್ಕೆ ತೆರಳುವ ಭಾರತೀಯ ಟೆಸ್ಟ್ ತಂಡವನ್ನು ಘೋಷಣೆ ಮಾಡಲಾಗಿದ್ದು ಈ ಸಂದರ್ಭದಲ್ಲಿ ಏಕದಿನ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.

ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಕ್ಕಿಳಿಸುವ ವಿಚಾರವಾಗಿ ನಡೆದ ಬೆಳವಣಿಗೆ ಬಗ್ಗೆ ಆಶ್ಚರ್ಯಕರ ಮಾಹಿತಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿಯ ಪ್ರಕಾರ ಟೀಮ್ ಇಂಡಿಯಾ ಏಕದಿನ ನಾಯಕತ್ವವನ್ನು ಸ್ವಯಂಪ್ರೇರಿತವಾಗಿ ತೊರೆಯಲು ವಿರಾಟ್ ಕೊಹ್ಲಿಗೆ 48 ಗಂಟೆಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಇದನ್ನು ವಿರಾಟ್ ಕೊಹ್ಲಿ ಒಪ್ಪಿಕೊಳ್ಳದಿದ್ದಾಗ ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡುವ ಮೂಲಕ ವಿರಾಟ್ ಕೊಹ್ಲಿಯನ್ನು ಏಕದಿನ ಮಾದರಿಯ ನಾಯಕತ್ವದಿಂದ ಕೆಳಕ್ಕಿಳಿಸಲಾಗಿದೆ.

ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!ದಕ್ಷಿಣ ಆಫ್ರಿಕಾ ಟಿಕೆಟ್ ಮಿಸ್‌ ಮಾಡಿಕೊಂಡ ಜಡೇಜಾ, ಶುಭ್ಮನ್, ಅಕ್ಷರ್ ಪಟೇಲ್!

ಕೊಹ್ಲಿ ನಾಯಕತ್ವ ಕಳೆದುಕೊಂಡಿದ್ದು ಹೀಗೆ!

ಕೊಹ್ಲಿ ನಾಯಕತ್ವ ಕಳೆದುಕೊಂಡಿದ್ದು ಹೀಗೆ!

ಟೀಮ್ ಇಂಡಿಯಾ ನಾಯಕತ್ವವನ್ನು ಸುದೀರ್ಘ ಕಾಲದಿಂದ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ಈ ಸ್ಥಾನವನ್ನು ತೊರೆಯುವ ವಿಚಾರವನ್ನು ಬಿಸಿಸಿಐ ಪ್ರಕಟಣೆ ಮೂಲಕ ಘೋಷಣೆ ಮಾಡಿಲ್ಲ. ಬದಲಿಗೆ ಬಿಸಿಸಿಐ ಆಯ್ಕೆ ಸಮಿತಿ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದು ಟಿ20 ಹಾಗೂ ಏಕದಿನ ನಾಯಕತ್ವವವನ್ನು ರೋಹಿತ್ ಶರ್ಮಾ ಅವರೇ ವಹಿಸಿಕೊಳ್ಳುತ್ತಾರೆ ಎನ್ನುವ ಮೂಲಕ ಘೋಷಣೆ ಮಾಡಿದೆ. ಟೀಮ್ ಇಂಡಿಯಾ ಏಕದಿನ ನಾಯಕತ್ವವನ್ನು ವಿರಾಟ್ ಕೊಹ್ಲಿ ಈ ರೀತಿಯಾಗಿ ಕಳೆದುಕೊಂಡಿದ್ದಾರೆ.

ನಾಯಕನಾಗಿ ಮುಂದುವರಿಯಲು ಬಯಸಿದ್ದ ಕೊಹ್ಲಿ

ನಾಯಕನಾಗಿ ಮುಂದುವರಿಯಲು ಬಯಸಿದ್ದ ಕೊಹ್ಲಿ

ಟಿ20 ವಿಶ್ವಕಪ್‌ಗೆ ಮುನ್ನ ವಿರಾಟ್ ಕೊಹ್ಲಿ ವಿಶ್ವಕಪ್ ಅಂತ್ಯವಾದ ಕೂಡಲೇ ಟಿ20 ನಾಯಕತ್ವದಿಂದ ಕೆಳಕ್ಕಿಳಿಯುವುದಾಗಿ ಘೋಷಿಸಿದ್ದರು. ಈ ಸಂದರ್ಭದಲ್ಲಿ ಅವರು ತಾನು ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುವುದಾಗಿ ಸ್ಪಷ್ಟವಾಗಿ ಹೇಳಿದ್ದರು. 2023ರ ಏಕದಿನ ವಿಶ್ವಕಪ್ ವರೆಗೂ ಏಕದಿನ ನಾಯಕನಾಗಿ ಮುಂದುವರಿದು ನಂತರ ತೊರೆಯುವ ಇಂಗಿತ ವಿರಾಟ್ ಕೊಹ್ಲಿಯದ್ದಾಗಿತ್ತು. ಆದರೆ ಬಿಸಿಸಿಐ ಲೆಕ್ಕಾಚಾರವೇ ಬೇರೆಯದ್ದಾಗಿದೆ.

ನಾಯಕತ್ವದಿಂದ ಗೌರವಯುತವಾಗಿ ಕೆಳಕ್ಕಿಳಿಸಲು ಬಯಸಿತ್ತು ಬಿಸಿಸಿಐ

ನಾಯಕತ್ವದಿಂದ ಗೌರವಯುತವಾಗಿ ಕೆಳಕ್ಕಿಳಿಸಲು ಬಯಸಿತ್ತು ಬಿಸಿಸಿಐ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೂಪರ್ 12 ಹಂತದಿಂದಲೇ ಹೊರಬಿದ್ದ ನಂತರ ನಾಲ್ಕುವರೆ ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿಯನ್ನು ಗೌರವಯುತವಾಗಿ ಕೆಳಕ್ಕಿಳಿಸಲು ಬಯಸಿತ್ತು.ಆದರ ಕೊಹ್ಲಿ ಏಕದಿನ ನಾಯಕತ್ವ ಬಿಟ್ಟುಕೊಡಲು ಒಪ್ಪದಿದ್ದಾಗ ಅನಿವಾರ್ಯವಾಗಿ ಬಿಸಿಸಿಐ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ವರದಿ ಮಾಡಿದೆ. ಸದ್ಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮಾತ್ರವೇ ನಾಯಕನಾಗಿ ಮುಂದುವರಿದಿದ್ದು ವೈಟ್‌ ಬಾಲ್ ಮಾದರಿಗೆ ರೋಹಿತ್ ಶರ್ಮಾ ನಾಯಕನಾಗಿದ್ದಾರೆ.

Story first published: Thursday, December 9, 2021, 12:21 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X