ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡಿಸ್ ಕ್ರಿಕೆಟ್‌ಗೆ ಬಿಸಿಸಿಐ ನೀಡಿದ ಅರ್ಧ ಮಿಲಿಯನ್ ದೇಣಿಗೆ ದುರುಪಯೋಗ: ಮಾಜಿ ಕ್ರಿಕೆಟಿಗ ಆರೋಪ

Bccis Half A Million Dollar Donation To Cricket West Indies Misused-Michael Holding

ವೆಸ್ಟ್ ಇಂಡೀಸ್‌ನ ವೇಗದ ಬೌಲಿಂಗ್‌ನ ದಿಗ್ಗಜ ಮೈಕಲ್ ಹೋಲ್ಡಿಂಗ್ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಈ ಹಿಂದೆ ಬೃಹತ್ ಮೊತ್ತದ ದೇಣಿಗೆಯನ್ನು ನೀಡಿತ್ತು ಇದನ್ನು ಉದ್ದೇಶಿತ ಕಾರ್ಯಕ್ಕೆ ಉಪಯೋಗಿಸದೆ ದುರುಪಯೋಗಪಡಿಸಿಕೊಳ್ಳಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಯೂಟ್ಯೂಬ್ ಶೋ ಒಂದರಲ್ಲಿ ಹೋಲ್ಡಿಂಗ್ ಲೆಕ್ಕಪರಿಶಧನೆಯ ದಾಖಲೆಗಳ ಸಹಿತ ಈ ಆರೋಪವನ್ನು ಮಾಡಿದ್ದಾರೆ. ಈ ಮೂಲಕ ಕೆರೆಬಿಯನ್ ಕ್ರಿಕೆಟ್‌ನ ಆಡಳಿತ ಮಂಡಳಿಯ ವಿರುದ್ಧ ಸಮರ ಸಾರಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಆಟಗಾರರ ಅನುಕೂಲಕ್ಕಾಗಿ ಬಿಸಿಸಿಐ ನೀಡಿದ್ದ ಹಣಕಾಸಿನ ನೆರವಿನ ದುರುಪಯೋಗ ಮಾಡಿದ ಆರೋಪವನ್ನು ಕ್ರಿಕೆಟ್ ವೆಸ್‌ ಇಂಡೀಸ್ ವಿರುದ್ಧ ಮಾಡಿದರು.

ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್

'2013-14ರಲ್ಲಿ ಬಿಸಿಸಿಐ ಅರ್ಧ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ವಿಶೇಷವಾಗಿ ಮಾಜಿ ಆಟಗಾರರ ನೆರವಿಗಾಗಿ ನೀಡಿತ್ತು. ನಾನೂ ಕೂಡ ಮಾಜಿ ಆಟಗಾರ ನಾನು ಅದನ್ನು ಬಯಸುತ್ತಿದ್ದೇನೆ ಎಂದಲ್ಲ. ಆದರೆ ನನಗೆ ಅನೇಕ ಮಾಜಿ ಆಟಗಾರರು ಗೊತ್ತಿದ್ದಾರೆ. ಆದರೆ ನನಗೆ ತಿಳಿದಂತೆ ಯಾವ ಆಟಗಾರನಿಗೂ ಇದರ ಸ್ವಲ್ಪವೂ ತಲುಪಿದೆ ಎಂದು ನಾನು ಕೇಳಿಸಿಕೊಂಡಿಲ್ಲ" ಎಂದು ಹೋಲ್ಡಿಂಗ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಜಿ ಆಟಗಾರರಿಗೆ ಆ ಹಣದಿಂದ ಉಪಯೋಗವಾಗುವಂತೆ ಮಾಡಿದ್ದರೆ ನನಗೆ ಅದು ತಿಳಿದಿರುತ್ತಿತ್ತು. ಆದರೆ ಹಾಗೆ ಆಗಿಲ್ಲ ಎಂದು ಹೋಲ್ಡಿಂಗ್ ಗಂಭೀರ ಆರೋಪವನ್ನು ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಮೇಲೆ ಹಣ ದುರುಪಯೋಗದ ಆರೋಪವನ್ನು ಮಾಡಿದ ಜೊತೆಗೆ ಈ ಭ್ರಷ್ಟಾಚಾರವನ್ನು ಬಯಲುಗೊಳಿಸುವ ಬಗ್ಗೆಯೂ ಹೋಲ್ಡಿಂಗ್ ಮಾತನ್ನಾಡಿದ್ದಾರೆ. ಬಿಸಿಸಿಐ ನೀಡಿದ ಅರ್ಧ ಮಿಲಿಯನ್ ಹಣ ಎಲ್ಲಿಗೆ ಹೋಯಿತು? ಈ ಬಗ್ಗೆ ವೀಕ್ಷಕರಿಗೆ ಆದಷ್ಟು ಬೇಗನೆ ತಿಳಿಸುತ್ತೇನೆ ಎಂದು ಯುಟ್ಯೂಬ್ ಸಂವಾದದ ಸಂದರ್ಭದಲ್ಲಿ ಮೈಕಲ್ ಹೋಲ್ಡಿಂಗ್ ಹೇಳಿದ್ದಾರೆ.

Story first published: Wednesday, May 20, 2020, 19:31 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X