ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವಿ ನಿವೃತ್ತಿ ವಾಪಾಸ್‌ಗೆ ಬಿಸಿಸಿಐ ನಿಯಮಗಳು ಅಡ್ಡಿಯಾಗಬಹುದು: ಬಿಸಿಸಿಐ ಅಧಿಕಾರಿ

Bccis Policy May Hamper Yuvrajs Return: Official

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್‌ಗೆ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು ಖುಷಿ ಪಡುವ ಸುದ್ದಿಯೊಂದು ಬಂದಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಯುವರಾಜ್ ನಿವೃತ್ತಿಯನ್ನು ವಾಪಾಸ್ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾಗೆ ಪತ್ರವನ್ನೂ ಬರೆದಿದ್ದಾರೆ ಯುವರಾಜ್ ಸಿಂಗ್.

ನಿವೃತ್ತಿಯನ್ನು ವಾಪಾಸ್ ಪಡೆದು ದೇಶಿಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಆಡುವ ಹಾಗೂ ಅಲ್ಲಿನ ಯುವ ಪ್ರತಿಭೆಗಳಿಗೆ ಆ ಮೂಲಕ ಮಾರ್ಗದರ್ಶನ ನೀಡುವ ಇಂಗಿತವನ್ನು ಯುವಿ ಹೊಂದಿದ್ದಾರೆ. ಆದರೆ ಯುವಿ ನಿವೃತ್ತಿ ವಾಪಾಸ್ ಪಡೆಯುವ ಬಗ್ಗೆ ಇಷ್ಟು ಮುಖ್ಯ ನಡೆಯನ್ನು ತೆಗೆದುಕೊಂಡಿದ್ದರೂ ಅದು ಈಡೇರುತ್ತಾ ಎಂಬ ಸಂಶಯ ಮೂಡುವಂತಾಗಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿ ಹೇಳಿರುವ ಮಾತು.

ಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿ

ಯುವರಾಜ್ ಸಿಂಗ್ ನಿವೃತ್ತಿ ವಾಪಾಸ್ ಪಡೆಯುವ ಅಂತಿಮ ನಿರ್ಧಾರ ಬಿಸಿಸಿಐ ಬಳಿಯಿದ್ದರೂ ಬಿಸಿಸಿಐನ ನಿಯಮಗಳು ಯುವರಾಜ್ ಸಿಂಗ್ ವಾಪಾಸಾತಿಗೆ ಅಡ್ಡಿಯಾಗಬಹುದು ಎಂದಿದ್ದಾರೆ. ನಿವೃತ್ತಿಯನ್ನು ಪಡೆದ ನಂತರ ಯುವರಾಜ್ ಸಿಂಗ್ ವನ್ ಟೈಮ್ ಬೆನಿಫಿಟ್ಸ್‌ಗಳನ್ನು ಮಾತ್ರವೇ ಪಡೆದುಕೊಂಡಿಲ್ಲ. 2019ರಲ್ಲಿ ನಿವೃತ್ತಿಯಾದ ನಂತರ ಯುವಿ ಮಾಸಿಕ ಪಿಂಚಣಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಇದು ಅಡ್ಡಿಯಾಗಬಹುದು ಎಂದು ಎಎನ್‌ಐಗೆ ಪ್ರತಿಕ್ರಿಯಿಸಿದ ಬಿಸಿಸಿಐನ ಅಧಿಕಾರಿ ಹೇಳಿದ್ದಾರೆ.

ನಿವೃತ್ತಿಯನ್ನು ವಾಪಾಸ್ ಪಡೆಯಲು ಅನುಮತಿಯನ್ನು ಕೋರಿ ಯುವರಾಜ್ ಸಿಂಗ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಪಂಜಾಬ್ ಪರವಾಗಿ ಆಡುವುದು ಸಾಧ್ಯವಾದರೆ ಬಿಸಿಸಿಐ ನಿಯಮದ ಪ್ರಕಾರ ತಾನು ಯಾವುದೇ ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಖಚಿತವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏನೇ ಆದರೂ ಬಿಸಿಸಿಐ ಯುವರಾಜ್ ಸಿಂಗ್ ನಿವೃತ್ತಿ ವಾಪಾಸ್ ಪಡೆಯುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಯುವಿ ಕಮ್‌ಬ್ಯಾಕ್‌ಗೆ ಇರುವ ಅಡ್ಡಿಯನ್ನು ನಿವಾರಿಸಿ ಮತ್ತೆ ದೇಶಿಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡುವುದು ಬಿಸಿಸಿಐ ಪಾಲಿಗೆ ಅಸಾಧ್ಯವಾದ ಸಂಗತಿಯೇನು ಅಲ್ಲ. ಹೀಗಾಗಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಐಪಿಎಲ್: ಚಲಿಸುತ್ತಿದ್ದ ಬಸ್‌ಗೆ ಬಡಿಯಿತು ರೋಹಿತ್ ಶರ್ಮಾ ಬಾರಿಸಿದ ಭರ್ಜರಿ ಸಿಕ್ಸರ್ಐಪಿಎಲ್: ಚಲಿಸುತ್ತಿದ್ದ ಬಸ್‌ಗೆ ಬಡಿಯಿತು ರೋಹಿತ್ ಶರ್ಮಾ ಬಾರಿಸಿದ ಭರ್ಜರಿ ಸಿಕ್ಸರ್

ಯುವರಾಜ್ ಸಿಂಗ್ 2019 ರ ಜೂನ್ 10 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದರು. 304 ಏಕದಿನ, 58 ಟಿ20, ಹಾಗೂ 40 ಟೆಸ್ಟ್ ಪದ್ಯಗಳಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ್ದಾರೆ. ಭಾರತ ಗೆದ್ದ ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಯುವಿ ಪಾತ್ರ ಅತ್ಯಂತ ಪ್ರಮುಖವಾಗಿತ್ತು.

Story first published: Thursday, September 10, 2020, 10:01 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X