ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಏಕದಿನ ಸರಣಿ?!

BCCI seeks government nod to host Pakistan womens team

ನವದೆಹಲಿ, ಜೂನ್ 7: ಮಹಿಳೆಯರ ವಿಶ್ವಕಪ್ 2021ಕ್ಕೆ ಪ್ರವೇಶ ನಿರ್ಧರಿಸುವಲ್ಲಿ ಮಹತ್ವದ್ದಾಗಿರುವ ಮಹಿಳಾ ಚಾಂಪಿಯನ್‌ಷಿಪ್‌ ಟೂರ್ನಿಯನ್ನು ಐಸಿಸಿ ನಡೆಸಲಿದೆ. ಈ ಪಂದ್ಯಾಟದ ಸಲುವಾಗಿ ಪಾಕಿಸ್ತಾನ ಮಹಿಳಾ ತಂಡಕ್ಕೆ ಏಕದಿನ ಸರಣಿಯಲ್ಲಿ ಆತಿಥ್ಯ ವಹಿಸಲು ಬಿಸಿಸಿಐ, ಭಾರತ ಸರ್ಕಾರದ ಅನುಮತಿ ಕೋರಿದೆ.

ನಾವು ಜೊತೆಗಿದ್ದೇವೆ, ಗ್ಲೌಸ್ ತೆಗೆಯಬೇಡಿ: ಧೋನಿ ಬೆಂಬಲಕ್ಕೆ ಸಾವಿರ ಟ್ವೀಟ್!ನಾವು ಜೊತೆಗಿದ್ದೇವೆ, ಗ್ಲೌಸ್ ತೆಗೆಯಬೇಡಿ: ಧೋನಿ ಬೆಂಬಲಕ್ಕೆ ಸಾವಿರ ಟ್ವೀಟ್!

ಭಾರತ ಮತ್ತು ಪಾಕಿಸ್ತಾನ ನಡುವೆ ರಾಜಕೀಯ ಬಿಗು ನಿಲುವು ಇರುವುದರಿಂದ ಬಿಸಿಸಿಐ ಇಕ್ಕಟ್ಟಿನಲ್ಲಿ ಸಿಲುಕಿದೆ. ನೆರೆಯ ದೇಶಗಳಾದ ಭಾರತ-ಪಾಕ್ ನಡುವೆ ಉತ್ತಮ ಸಂಬಂಧ ಇಲ್ಲದ ಕಾರಣಕ್ಕಾಗಿ ಪುರುಷರ ವಿಭಾಗದ ಕ್ರಿಕೆಟ್‌ನ ದ್ವಿಪಕ್ಷೀಯ ಸರಣಿಯನ್ನು ಸುಮಾರು 6 ವರ್ಷಗಳಿಂದಲೂ ಭಾರತ ನಡೆಸುತ್ತಿಲ್ಲ.

ಮಹಿಳಾ ಚಾಂಪಿಯನ್‌ಶಿಪ್ ಟೂರ್ನಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಪರಸ್ಪರ ಏಕದಿನ ಸರಣಿಗೆ ಆತಿಥ್ಯ ವಹಿಸಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಕ್ರಿಕೆಟ್ ಕಾರ್ಯಾಚರಣೆಯ ಜನರಲ್ ಮ್ಯಾನೇಜರ್ ಸಬಾ ಕರೀಮ್ ಅವರು ಮೇ 29ರಂದು ಭಾರತದ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

'ಮಹಿಳಾ ಚಾಂಪಿಯನ್‌ಷಿಪ್ ವೇಳಾಪಟ್ಟಿ ಪ್ರಕಾರ ಪಾಕಿಸ್ತಾನ ಮಹಿಳಾ ತಂಡಕ್ಕೆ ಬಿಸಿಸಿಐಯು ಜುಲೈನಿಂದ ನವೆಂಬರ್ ಒಳಗೆ ಕನಿಷ್ಠ 3 ಪಂದ್ಯಗಳ ಏಕದಿನ ಸರಣಿಗೆ ಅತಿಥ್ಯ ವಹಿಸಬೇಕು. ಟೂರ್ನಿ ನಡೆಸುವ ಕುರಿತು ಐಸಿಸಿಗೆ ಒಪ್ಪಿಗೆ ನೀಡುವ ಮುನ್ನ ಬಿಸಿಸಿಐಯು ಭಾರತ ಸರ್ಕಾರದ ಅನುಮತಿ ಪಡೆಯಬೇಕಿದೆ' ಎಂದು ಬಿಸಿಸಿಐ ಮೂಲ ತಿಳಿಸಿದೆ.

Story first published: Friday, June 7, 2019, 15:41 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X