ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್‌-19 ವಿಶ್ವಕಪ್‌ಗೆ ಕೊರೊನಾ ಕಾಟ: ಐವರು ಮೀಸಲು ಆಟಗಾರರನ್ನ ಕಳುಹಿಸಲಿದೆ BCCI

India under-19

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಕೋವಿಡ್-19 ಸಾಂಕ್ರಾಮಿಕದ ಕಾಟ ಹೆಚ್ಚಾಗಿದ್ದು, ಮುಂಜ್ರಾಗ್ರತೆ ದೃಷ್ಟಿಯಿಂದ ಐವರು ಮೀಸಲು ಆಟಗಾರರನ್ನ ಕೆರಬಿಯನ್ ನಾಡಿಗೆ ಕಳುಹಿಸಲು ಬಿಸಿಸಿಐ ಮುಂದಾಗಿದೆ.

ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಸ್ವಲ್ಪ ಸಮಯದ ಮುಂಚೆ ಭಾರತೀಯ ಅಂಡರ್-19 ಕ್ಯಾಂಪ್‌ನಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಾಣಿಸಿಕೊಂಡ ಕಾರಣದಿಂದಾಗಿ ಹೆಚ್ಚುವರಿ ಆಟಗಾರರನ್ನ ಕಳುಹಿಸಲು ಬಿಸಿಸಿಐ ತೀರ್ಮಾನಿಸಿದೆ.

ಭಾರತ vs ದ.ಆಫ್ರಿಕಾ 2ನೇ ಏಕದಿನ ಪಂದ್ಯ: ಪಂತ್ ಅಬ್ಬರಕ್ಕೆ ದ್ರಾವಿಡ್, ಧೋನಿ ಇಬ್ಬರ ದಾಖಲೆಯೂ ಧ್ವಂಸ!ಭಾರತ vs ದ.ಆಫ್ರಿಕಾ 2ನೇ ಏಕದಿನ ಪಂದ್ಯ: ಪಂತ್ ಅಬ್ಬರಕ್ಕೆ ದ್ರಾವಿಡ್, ಧೋನಿ ಇಬ್ಬರ ದಾಖಲೆಯೂ ಧ್ವಂಸ!

ಉದಯ್ ಸಹರನ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ರಿಷಿತ್ ರೆಡ್ಡಿ, ಅಂಶ್ ಗೋಸಾಯ್ ಮತ್ತು ಪಿಎಂ ಸಿಂಗ್ ರಾಥೋಡ್ ಭಾರತದ ಅಂಡರ್-19 ತಂಡವನ್ನು ಸೇರುವ ಐವರು ಆಟಗಾರರಾಗಿದ್ದಾರೆ. ಈ ಎಲ್ಲಾ ಆಟಗಾರರು ವಿಂಡೀಸ್ ತಲುಪಿದ ಬಳಿಕ ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

"ಹೌದು, ಬಿಸಿಸಿಐ ಮಂಡಳಿಯು ಐದು ಮೀಸಲು ಆಟಗಾರರನ್ನು ಕೆರಿಬಿಯನ್‌ಗೆ ಕಳುಹಿಸಲು ನಿರ್ಧರಿಸಿದೆ. ತಲುಪಿದ ನಂತರ ಅವರು ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗುತ್ತಾರೆ. ಜನವರಿ 29 ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದೊಳಗೆ ಎಲ್ಲರೂ ಫಿಟ್ ಆಗಲು ಮತ್ತು ಲಭ್ಯವಾಗುವಂತೆ ನೋಡಿಕೊಳ್ಳುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ'' ಎಂದು ಮೂಲವೊಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದೆ.

ಐರ್ಲೆಂಡ್ ವಿರುದ್ಧ 164 ರನ್‌ಗಳ ಬೃಹತ್ ಜಯ ಸಾಧಿಸಿರುವ ಭಾರತ

ಭಾರತ ಅಂಡರ್-19 ತಂಡವು ತನ್ನ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ಮತ್ತು ಐರ್ಲೆಂಡ್ ಅಂಡರ್-19 ವಿರುದ್ಧ ಗೆಲುವನ್ನ ಸಾಧಿಸಿದೆ. ಅದ್ರಲ್ಲೂ ಐರ್ಲೆಂಡ್ ವಿರುದ್ಧ ಭಾರತವು 164ರನ್‌ಗಳ ಬೃಹತ್ ಜಯ ಸಾಧಿಸಿತು.

ಭಾರತ ಅಂಡರ್-19 ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 307 ರನ್ ಗಳಿಸಿತು, ಆದ್ರೆ ನಂತರ ಎದುರಾಳಿ ತಂಡವನ್ನ 39 ಓವರ್‌ಗಳಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಸೋಲಿಸಿತು.

ಕೊಹ್ಲಿ ರಾಹುಲ್ ಮಧ್ಯೆ ವೈಮನಸ್ಸಿದೆ ಅನ್ನೋದಕ್ಕೆ ಸಾಕ್ಷಿಯಾಯ್ತು ಈ ಘಟನೆ | Oneindia Kannada

ಭಾರತ ಜನವರಿ 22ರಂದು ಮುಂದಿನ ಪಂದ್ಯದಲ್ಲಿ ಉಗಾಂಡ ಅಂಡರ್-19 ವಿರುದ್ಧ ಆಡಲಿದ್ದು, ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

Story first published: Saturday, January 22, 2022, 10:59 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X