ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಿಂದ 2 ಸಾವಿರ ಕೋಟಿ ರು ಆದಾಯ ನಿರೀಕ್ಷೆ!

By Mahesh

ಬೆಂಗಳೂರು, ಫೆಬ್ರವರಿ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಮೋಜಿನ ಕ್ರಿಕೆಟ್ ಲೀಗ್ ನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿ ಸರಿ ಸುಮಾರು 2,000 ಕೋಟಿ ರು ಆದಾಯ ನಿರೀಕ್ಷೆಯಲ್ಲಿದೆ. ಅಂದರೆ, ಬಿಸಿಸಿಐನ ಮಿಗತೆ ಬಜೆಟ್ ನ ಶೇ 95ರಷ್ಟು ಗಳಿಸಲಿದೆ.

2008ರಲ್ಲಿ ಆರಂಭವಾದ ಐಪಿಎಲ್ ಈಗ ವಿಶ್ವದ ದೊಡ್ಡ ಕ್ರಿಕೆಟ್ ಲೀಗ್ ಆಗಿ ಬೆಳೆದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಜೋಳಿಗೆ ತುಂಬಿಸುತ್ತಿದೆ.

2018-19ರ ಆರ್ಥಿಕ ವರ್ಷದಲ್ಲಿ ಐಪಿಎಲ್​ನಿಂದಲೇ 2,017 ಕೋಟಿ ರೂ. ಲಾಭ ನಿರೀಕ್ಷಿಸುತ್ತಿದೆ. ಇದಕ್ಕೆ ಹೋಲಿಸಿದರೆ, ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​ ಪಂದ್ಯಗಳಿಂದ ಕೇವಲ 125 ಕೋಟಿ ರೂ. ನಿವ್ವಳ ಲಾಭ ಗಳಿಸುವ ಅಂದಾಜಿದೆ.

 BCCI set to earn over Rs 2000 crore from IPL

ಕೇವಲ 45 ದಿನಗಳ ಐಪಿಎಲ್ ಟೂರ್ನಿಯಿಂದ ಬಿಸಿಸಿಐ ಉಳಿದ 320 ದಿನಗಳ ಕ್ರಿಕೆಟ್​ಗಿಂತ 16 ಪಟ್ಟು ಅಧಿಕ ಲಾಭ ಪಡೆಯಲಿದೆ. ಬಿಸಿಸಿಐನ ಖರ್ಚುವೆಚ್ಚಗಳನ್ನು ಕಳೆದು ಸಿಗುವ ಲಾಭದ ಲೆಕ್ಕಾಚಾರದಂತೆ

ಮುಂದಿನ 5 ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಬರೋಬ್ಬರಿ 16,347 ಕೋಟಿ ರೂ.ಗಳಿಗೆ ಬಿಸಿಸಿಐ ಮಾರಾಟ ಮಾಡಿತ್ತು. ಐಪಿಎಲ್​ನಿಂದ 3,413 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಇದರಲ್ಲಿ 1,272 ಕೋಟಿ ರೂ. ಪಂದ್ಯ ಆಯೋಜನೆಗೆ ಖರ್ಚಾಗಲಿದೆ.

Story first published: Wednesday, February 14, 2018, 11:54 [IST]
Other articles published on Feb 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X