ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸಂಬಳ ಪ್ರಮಾಣ ಏರಿಕೆ ಸಾಧ್ಯತೆ?

BCCI set to release salary details of Ravi Shastri soon

ಮುಂಬೈ, ಆಗಸ್ಟ್ 18: ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಸ್ಥಾನದಲ್ಲಿ ರವಿ ಶಾಸ್ತ್ರಿ ಮುಂದುವರಿಯಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2018ರಲ್ಲಿ ರವಿಶಾಸ್ತ್ರಿ ಅವರಿಗೆ ನೀಡಿದ ಸಂಬಳ, ಸಂಭಾವನೆಯ ವಿವರಗಳನ್ನು ಬಹಿರಂಗಪಡಿಸಿದ್ದು ನೆನಪಿರಬಹುದು, ಇಲ್ಲದಿದ್ದರೆ ಸುದ್ದಿ ಇಲ್ಲಿದೆ ಓದಿ ಈಗ ಇದಕ್ಕಿಂತ ಪ್ರಮಾಣದಲ್ಲೇ ಸಂಬಳ ಸಿಗುವ ಸಾಧ್ಯತೆ ಹೆಚ್ಚಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್‌ ದೇವ್‌ ನೇತೃತ್ವದ ಬಿಸಿಸಿಐ ನೇಮಿತ ಕ್ರಿಕೆಟ್‌ ಸಲಹಾ ಸಮಿತಿ (ಸಿಒಎ)ಯು ರವಿಶಾಸ್ತ್ರಿ ಅವರನ್ನು ಇನ್ನೊಂದು ಅವಧಿಗೆ ಆಯ್ಕೆ ಮಾಡಿದೆ. ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಮತ್ತು ತಂಡದ ಆಟಗಾರರ ಸಂಬಳದ ವಿವರಗಳನ್ನು 2018 ರ ಸೆಪ್ಟಂಬರ್ ನಲ್ಲಿ ಈ ಅಂಕಿ-ಅಂಶಗಳ ಮಾಹಿತಿಯನ್ನು ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿತ್ತು. 2018 ರ ಜುಲೈನಿಂದ ಅಕ್ಟೋಬರ್ ತಿಂಗಳ ಅವಧಿಯ ಅಡ್ವಾನ್ಸ್ ರೂಪದಲ್ಲಿ ಬಿಸಿಸಿಐ ರವಿಶಾಸ್ತ್ರಿ ಅವರಿಗೆ 2.05 ಕೋಟಿ ರೂಪಾಯಿಗಳನ್ನು ಪಾವತಿಸಿತ್ತು.

ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌ ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌

ರವಿಶಾಸ್ತ್ರಿ ಅವರು ವಾರ್ಷಿಕ ಬರೋಬ್ಬರಿ 8 ಕೋಟಿ ರು. ಪಡೆಯಲಿದ್ದಾರೆ. ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದ ವೇಳೆ ಅವರಿಗೆ 6.5 ಕೋಟಿ ನೀಡಲಾಗಿತ್ತು. ಇದೀಗ ಬಿಸಿಸಿಐ ಶಾಸ್ತ್ರಿಗೆ ಅದಕ್ಕಿಂತ ಹೆಚ್ಚಿನ ಸಂಬಳ ಮತ್ತು ಸೌಲಭ್ಯಗಳನ್ನು ನೀಡಲಾಗಿತ್ತು.

ಕೋಚ್ ಹುದ್ದೆಗೆ ಹೆಚ್ಚಿನ ವೇತನ ಸಿಗಬೇಕು ಎಂದು ಕುಂಬ್ಳೆ ಹೋರಾಟ ನಡೆಸಿದ್ದರ ಫಲವನ್ನು ಒಂದು ವರ್ಷಗಳ ಕಾಲ ಶಾಸ್ತ್ರಿ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಆಡಿದ್ದಕ್ಕೆ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನಿಂದ 1.25 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ಸದ್ಯ ಆಟಗಾರರು ಹಾಗೂ ಕೋಚ್ ಗಳಿಗೆ ನೀಡುವ ಸಂಬಳ ವಿವರವಿರುವ ಪರಿಷ್ಕೃತ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ

ಅಂಡರ್ 19 ಕೋಚ್ ಹಾಗೂ ಈಗ ಎನ್ ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರಿಗೆ ವಾರ್ಷಿಕ 48600000 ರು ಸಿಗುತ್ತಿತ್ತು. ಈಗ ಇದಕ್ಕಿಂತ ಹೆಚ್ಚಿನ ಮೊತ್ತ ಸಿಗುವ ನಿರೀಕ್ಷೆಯಿದೆ.

Story first published: Sunday, August 18, 2019, 12:49 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X