ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019ಗಾಗಿ ಏಪ್ರಿಲ್ 15ರಂದು ಟೀಂ ಇಂಡಿಯಾ ಪ್ರಕಟ

ಭಾರತ ಕ್ರಿಕೆಂಟ್ ತಂಡಕ್ಕೆ ಏಪ್ರಿಲ್ 18 ಕೊನೆಯ ದಿನ..! | Oneindia Kannada
BCCI to announce India squad for ICC Cricket World Cup 2019 on April 15

ಮುಂಬೈ, ಏಪ್ರಿಲ್ 08: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗಾಗಿ ತಂಡಗಳನ್ನು ಪ್ರಕಟಿಸಲು ಏಪ್ರಿಲ್ 18 ಕೊನೆ ದಿನವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಆಡಳಿತ ಸಮಿತಿ(ಸಿಒಎ), ಭಾರತ ತಂಡವನ್ನು ಏಪ್ರಿಲ್ 15ರಂದು ಪ್ರಕಟಿಸುವುದಾಗಿ ಘೋಷಿಸಿದೆ. ಐದು ಸದಸ್ಯರ ಆಯ್ಕೆ ಸಮಿತಿ ತಂಡದ ಘೋಷಣೆ ಮಾಡಲಿದೆ.

ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಮೇ.30 ರಿಂದ ಪಂದ್ಯಗಳು ಪ್ರಾರಂಭವಾಗಲಿದೆ. ಐಪಿಎಲ್ ಎರಡನೇ ವಾರದಲ್ಲಿ ಭಾರತೀಯ ಆಟಗಾರರು ವಿಶ್ರಾಂತಿ ಪಡೆದು ವಿಶ್ವಕಪ್ ಗೆ ಸಿದ್ಧವಾಗುವ ಸಾಧ್ಯತೆಯಿದೆ.

ಪಾಕಿಸ್ತಾನದ ಸಂಭಾವ್ಯ ತಂಡದಿಂದ ಉಮರ್, ವಹಾಬ್ ಔಟ್ಪಾಕಿಸ್ತಾನದ ಸಂಭಾವ್ಯ ತಂಡದಿಂದ ಉಮರ್, ವಹಾಬ್ ಔಟ್

ಐಸಿಸಿ ಅದೇಶದ ಪ್ರಕಾರ ಏಪ್ರಿಲ್ 23ರೊಳಗೆ ಅಂತಿಮ ಪಟ್ಟಿಯನ್ನು ಎಲ್ಲಾ 10 ಅರ್ಹ ದೇಶಗಳು ಸಲ್ಲಿಸಬೇಕು. 15 ಆಟಗಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಟೂರ್ನಿ ಆರಂಭದ 7 ದಿನಗಳೊಳಗೆ ಸರಿಪಡಿಸಿಕೊಳ್ಳಬೇಕಾಗುತ್ತದೆ.

2019 ಐಸಿಸಿ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ2019 ಐಸಿಸಿ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ

ಈ ಬಾರಿ ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ತಂಡಗಳು ಮುಖಾಮುಖಿಯಾಗಲಿದೆ. ಜೂನ್​ 5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ.

ವಿಶ್ವಕಪ್ : ನ್ಯೂಜಿಲೆಂಡ್ ತಂಡ ಪ್ರಕಟ, ಟಾಮ್ ಹೊಸ ಮುಖವಿಶ್ವಕಪ್ : ನ್ಯೂಜಿಲೆಂಡ್ ತಂಡ ಪ್ರಕಟ, ಟಾಮ್ ಹೊಸ ಮುಖ

ಟೀಂ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಹಾಗೂ ಮತ್ತೊಬ್ಬ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 4ನೇ ಕ್ರಮಾಂಕಕ್ಕೆ ಅಂಬಟಿ ರಾಯುಡು, ವಿಜಯಶಂಕರ್ ಹೆಸರು ಮುಂಚೂಣಿಯಲ್ಲಿದ್ದರೆ, ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಹೆಸರು ಓಡಾಡುತ್ತಿವೆ.

Story first published: Monday, April 8, 2019, 17:15 [IST]
Other articles published on Apr 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X