ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಸಿ ಕ್ರಿಕೆಟರ್‌ಗಳಿಗೆ ಭರ್ಜರಿ ವೇತನ ಹೆಚ್ಚಳ ಘೋಷಿಸಿದ ಬಿಸಿಸಿಐ!

BCCI to announce massive pay hike for Indian domestic cricketers, says report
ಒಂದು ದಿನಕ್ಕೆ ಕ್ರಿಕೆಟಿಗ ಪಡೆಯುವ ಸಂಬಳ ಎಷ್ಟು ಗೊತ್ತಾ?ಕೇಳಿದ್ರೆ ಅಚ್ಚರಿಯಾಗುತ್ತೆ!!! | Oneindia Kannada

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಕರೆಸಿಕೊಂಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಆಟಗಾರರಿಗೆ ದೊಡ್ಡ ಮೊತ್ತದ ವೇತನ ನೀಡುತ್ತಿದೆ. ರಾಷ್ಟ್ರೀಯ ತಂಡದಲ್ಲಿರುವ ಆಟಗಾರರಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡುವ ಆಟಗಾರರೂ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.

WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!

ಆದರೆ ದೇಸಿ ಕ್ರಿಕೆಟರ್‌ಗಳ (ಪ್ರಥಮದರ್ಜೆ ಕ್ರಿಕೆಟರ್‌ಗಳು) ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಕೋವಿಡ್-19 ಕಾರಣ ಭಾರತದಲ್ಲಿ ದೇಸಿ ಕ್ರಿಕೆಟ್ ಟೂರ್ನಿಗಳು ನಿಲುಗಡೆಯಾಗಿವೆ. ಹೀಗಾಗಿ ಆರ್ಥಿಕ ಸಮಸ್ಯೆ ಆಗಿರುವುದಾಗಿ ದೇಸಿ ಆಟಗಾರರು ಬಿಸಿಸಿಐಗೆ ತಿಳಿಸಿದ್ದಾರೆ.

ವೇತನ ಹೆಚ್ಚಳಕ್ಕೆ ಬಿಸಿಸಿಐ ಒಪ್ಪಿಗೆ

ವೇತನ ಹೆಚ್ಚಳಕ್ಕೆ ಬಿಸಿಸಿಐ ಒಪ್ಪಿಗೆ

ದೇಸಿ ಕ್ರಿಕೆಟರ್‌ಗಳ ಆರ್ಥಿಕ ಸಮಸ್ಯೆಯ ಬಗ್ಗೆ ಅರಿವಿರುವ ಬಿಸಿಸಿಐ, ದೇಶಿ ಕ್ರಿಕೆಟರ್‌ಗಳ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಮುಂಬರಲಿರುವ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರು ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಎಲ್ಲಾ ದೇಶಿ ಕ್ರಿಕೆಟರ್‌ಗಳ ವೇತನ ಹೆಚ್ಚಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲ ಮತ್ತು ಖಜಾಂಚಿ ಅರುಣ್ ಧುಮಾಲ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಷ್ಟು ವೇತನ ಹೆಚ್ಚು?

ಎಷ್ಟು ವೇತನ ಹೆಚ್ಚು?

ದೈನಿಕ್ ಜಾಗ್ರಣ್ ವರದಿಯ ಪ್ರಕಾರ, 20ಕ್ಕಿಂತ ಹೆಚ್ಚು ಪ್ರಥಮರ್ಜೆ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರರು ಪ್ರತೀ ದಿನಕ್ಕೆ 60,000 ರೂ. ಪಡೆದುಕೊಳ್ಳಲಿದ್ದಾರೆ. ಕಡಿಮೆ ಅನುಭವಿ ಆಟಗಾರರು ಪ್ರತೀ ದಿನಕ್ಕೆ 45,000 ರೂ. ಪಡೆದುಕೊಳ್ಳಲಿದ್ದಾರೆ. ಈಗಿನ ವೇತನ ರಚನೆಯ ಪ್ರಕಾರ ಆಟಗಾರರು ಪ್ರತೀ ದಿನಕ್ಕೆ 35,000 ಪಡೆಯುತ್ತಿದ್ದಾರೆ. ಹೊಸ ವೇತನವನ್ನು ಪ್ರತೀ ಪಂದ್ಯಕ್ಕೆ ಹೋಲಿಸಿದರೆ 1.4 ಲಕ್ಷ ರೂ. ಆಗುತ್ತದೆ. ಇದರ ಅರ್ಧದಷ್ಟು ಬೆಂಚ್ ಆಟಗಾರರಿಗೆ ನೀಡಲಾಗುತ್ತದೆ. ಜೊತೆಗೆ 1000 ರೂ. ದೈನಂದಿನ ಭತ್ಯೆ ಕೂಡ ನೀಡಲಾಗುತ್ತದೆ.

ಕಳೆದ ಸೀಸನ್‌ನಿಂದ ವೇತನ ಇಲ್ಲ

ಕಳೆದ ಸೀಸನ್‌ನಿಂದ ವೇತನ ಇಲ್ಲ

ಜಾಗತಿಕ ಪಿಡುಗಿನ ಕಾರಣ ಕಳೆದ ಸೀಸನ್‌ ಬಳಿಕ ದೇಸಿ ಕ್ರಿಕೆಟರ್‌ಗಳಿಗೆ ವೇತನ ನೀಡಿಲ್ಲ. ಹೀಗಾಗಿ ಸಹಜವಾಗೇ ಆಟಗಾರರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಈಗ ವೇತನ ಹೆಚ್ಚಳ ಘೋಷಿಸಿರುವುದು ದೇಶಿ ಕ್ರಿಕೆಟರ್‌ಗಳಿಗೆ ದೊಡ್ಡ ನಿರಾಳತೆ ನೀಡಿದೆ. ಆಟಗಾರರು ಪ್ರತೀ ವಿಜಯ್ ಹಜಾರೆ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಿಗೆ 35,000 ರೂ. ಮತ್ತು 17,500 ರೂ. ವೇತನ ಪಡೆದುಕೊಳ್ಳಲಿದ್ದಾರೆ.

Story first published: Saturday, July 3, 2021, 17:36 [IST]
Other articles published on Jul 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X