ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಟೆಸ್ಟ್ ತಂಡದ ನೂತನ ನಾಯಕ ಇವರೇ; ಘೋಷಣೆ ಯಾವಾಗ ಎಂಬುದೂ ಕೂಡ ಫಿಕ್ಸ್: ಬಿಸಿಸಿಐ

BCCI to announce Rohit Sharma as new test captain before India vs West Indies series

ಕಳೆದ ನಾಲ್ಕೈದು ತಿಂಗಳುಗಳಲ್ಲಿ ಟೀಮ್ ಇಂಡಿಯಾದಲ್ಲಿ ಆಗಿರುವ ಬದಲಾವಣೆಗಳು ಒಂದೆರಡಲ್ಲ. ನಾಲ್ಕೈದು ತಿಂಗಳ ಹಿಂದೆ ಇದ್ದ ಟೀಮ್ ಇಂಡಿಯಾವೇ ಬೇರೆ, ಪ್ರಸ್ತುತ ಇರುವ ಟೀಮ್ ಇಂಡಿಯಾ ಬೇರೆ ಎಂದರೆ ಬಹುಶಃ ತಪ್ಪಾಗಲಾರದು. ಹೌದು, ಕಳೆದ ವರ್ಷ ನಡೆದ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ತಂಡಗಳಿಗೆ ವಿರಾಟ್ ಕೊಹ್ಲಿ ನಾಯಕನಾಗಿದ್ದರು. ಆದರೆ ಪ್ರಸ್ತುತ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಓರ್ವ ಆಟಗಾರನಾಗಿ ಮಾತ್ರ ಉಳಿದುಕೊಂಡಿದ್ದು, ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!

ಹೀಗೆ ನಾಲ್ಕೈದು ತಿಂಗಳುಗಳ ಅಂತರದಲ್ಲಿ ಭಾರತ ತಂಡದ ನಾಯಕತ್ವದಲ್ಲಿ ಬದಲಾವಣೆ ಆಗಿರುವುದು ಮಾತ್ರವಲ್ಲದೇ ಟೀಮ್ ಇಂಡಿಯಾದ ಒಳಗಿನ ವಾತಾವರಣದಲ್ಲಿಯೂ ಕೂಡಾ ಸಾಕಷ್ಟು ಬದಲಾವಣೆಗಳಾಗಿವೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಇದ್ದ ಹುಮ್ಮಸ್ಸು ಹಾಗೂ ಪುಟಿದೇಳುವ ಲಕ್ಷಣಗಳು ಈಗಿನ ಟೀಮ್ ಇಂಡಿಯಾದಲ್ಲಿ ಕಾಣೆಯಾಗಿವೆ. ಸದ್ಯ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮುನ್ನಡೆಸಿದ್ದು, ಟೀಮ್ ಇಂಡಿಯಾ ಸರಣಿಯಲ್ಲಿ ಸೋಲನ್ನು ಅನುಭವಿಸಿದೆ. ಅತ್ತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿಯೂ ಕೂಡ ಟೀಮ್ ಇಂಡಿಯಾ ಸೋಲನ್ನು ಅನುಭವಿಸಿತ್ತು.

ಭಾರತ vs ದ.ಆಫ್ರಿಕಾ 3ನೇ ಏಕದಿನ: ಈ ಮೂವರು ಹಿರಿಯರನ್ನು ತಂಡದಿಂದ ಹೊರಗಿಡಿ ಎಂದ ಗಂಭೀರ್!ಭಾರತ vs ದ.ಆಫ್ರಿಕಾ 3ನೇ ಏಕದಿನ: ಈ ಮೂವರು ಹಿರಿಯರನ್ನು ತಂಡದಿಂದ ಹೊರಗಿಡಿ ಎಂದ ಗಂಭೀರ್!

ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಂಡ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ವಿರಾಟ್ ಕೊಹ್ಲಿ ರಾಜೀನಾಮೆಯನ್ನು ಸಲ್ಲಿಸಿದರು. ಇನ್ನು ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಟೆಸ್ಟ್ ತಂಡದ ಮುಂದಿನ ನಾವಿಕ ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಕೊಹ್ಲಿ ಬಳಿಕ ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರಾ ನಾಯಕರಾಗಲಿರುವ ಆಟಗಾರರು ಎಂಬ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅದರಲ್ಲಿಯೂ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲೊಬ್ಬರು ನಾಯಕನಾಗುವುದು ಖಚಿತ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿತ್ತು. ಈ ಗೊಂದಲದ ಕುರಿತಾಗಿ ಇದೀಗ ಬಿಸಿಸಿಐನ ಅಧಿಕಾರಿಯೋರ್ವರು ಮಾತನಾಡಿದ್ದು, ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಮತ್ತು ಬಿಸಿಸಿಐ ಯಾವಾಗ ಟೆಸ್ಟ್ ತಂಡದ ನೂತನ ನಾಯಕನ ಹೆಸರನ್ನು ಘೋಷಿಸಲಿದೆ ಎಂಬುದರ ಕುರಿತು ಈ ಕೆಳಕಂಡಂತೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇವರೇ ಮುಂದಿನ ನಾಯಕ

ಇವರೇ ಮುಂದಿನ ನಾಯಕ

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಯಾರಾಗಲಿದ್ದಾರೆ ಎಂಬುದರ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿಯೋರ್ವರು "ಯಾವುದೇ ಅನುಮಾನ ಬೇಡ ರೋಹಿತ್ ಶರ್ಮಾ ಅವರೇ ಭಾರತ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದ ರೋಹಿತ್ ಶರ್ಮಾ ಈಗ ನಾಯಕನ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.

ಭಾರತ ಟೆಸ್ಟ್ ತಂಡದ ನೂತನ ನಾಯಕನ ಘೋಷಣೆ ಯಾವಾಗ?

ಭಾರತ ಟೆಸ್ಟ್ ತಂಡದ ನೂತನ ನಾಯಕನ ಘೋಷಣೆ ಯಾವಾಗ?

ಇನ್ನೂ ಮುಂದುವರಿದು ಮಾತನಾಡಿರುವ ಬಿಸಿಸಿಐನ ಅಧಿಕಾರಿ ಭಾರತ ಟೆಸ್ಟ್ ತಂಡದ ನೂತನ ನಾಯಕನಾಗಿ ರೋಹಿತ್ ಶರ್ಮಾ ಅವರ ಹೆಸರನ್ನು ಬಿಸಿಸಿಐ ಅಧಿಕೃತವಾಗಿ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳಿಗೂ ಮುನ್ನ ಘೋಷಿಸಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಫೆಬ್ರವರಿ 6ರಿಂದ ಭಾರತ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಭಾರತ vs ವೆಸ್ಟ್ ಇಂಡೀಸ್ ವೇಳಾಪಟ್ಟಿ

ಭಾರತ vs ವೆಸ್ಟ್ ಇಂಡೀಸ್ ವೇಳಾಪಟ್ಟಿ

ಮೊದಲನೇ ಏಕದಿನ ಪಂದ್ಯ: ಫೆಬ್ರವರಿ 6ಕ್ಕೆ ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ

ದ್ವಿತೀಯ ಏಕದಿನ ಪಂದ್ಯ: ಫೆಬ್ರವರಿ 9ಕ್ಕೆ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣ

ತೃತೀಯ ಏಕದಿನ ಪಂದ್ಯ: ಫೆಬ್ರವರಿ 12ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ


ಪ್ರಥಮ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 15ಕ್ಕೆ, ಬರಬತಿ ಕ್ರೀಡಾಂಗಣ, ಕಟಕ್

ದ್ವಿತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 18ಕ್ಕೆ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣ

ತೃತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 20, ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

Team India ಹೀನಾಯ ಸೋಲಿಗೆ ಕಾರಣರಾದ್ರಾ ಕನ್ನಡಿಗರು!! | Oneindia Kannada
ಭಾರತ vs ವೆಸ್ಟ್ ಇಂಡೀಸ್ ವೇಳಾಪಟ್ಟಿ

Story first published: Monday, January 24, 2022, 10:27 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X