ಐಪಿಎಲ್ 2022: ಫ್ರಾಂಚೈಸಿ ಮಾಲೀಕರ ಸಭೆ ಕರೆದ ಬಿಸಿಸಿಐ

ಈ ಬಾರಿ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ದಿನದಿಂದ ದಿನಕ್ಕೆ ನಿರೀಕ್ಷೆ ಹಾಗೂ ಕುತೂಹಲದ ಮಟ್ಟವನ್ನು ಹೆಚ್ಚಿಸುತ್ತಿದೆ. ಈ ಬಾರಿ ಹತ್ತು ತಂಡಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದ್ದು, ಕಳೆದ ವರ್ಷ ನಡೆದ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಹೊರಹೊಮ್ಮಿವೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಪಠಾಣ್ ಅಬ್ಬರ, ಏಷ್ಯಾ ಲಯನ್ಸ್ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಸ್ಲೆಜೆಂಡ್ಸ್ ಲೀಗ್ ಕ್ರಿಕೆಟ್: ಪಠಾಣ್ ಅಬ್ಬರ, ಏಷ್ಯಾ ಲಯನ್ಸ್ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಸ್

ಹೀಗೆ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಆಯ್ಕೆಯಾದ ನಂತರ ಈಗಾಗಲೇ ಟೂರ್ನಿಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ನಡೆಯಿತು. ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಮುಗಿದಿದ್ದು ನಂತರ ಫೆಬ್ರವರಿ ತಿಂಗಳಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಹೀಗೆ ಟೂರ್ನಿ ಆರಂಭಕ್ಕೆ ಇನ್ನೂ ತಿಂಗಳುಗಳು ಬಾಕಿ ಇರುವಾಗಲೇ ಟೂರ್ನಿಗೆ ಸಂಬಂಧಪಟ್ಟ ಚಟುವಟಿಕೆಗಳು ನಡೆಯುತ್ತಿದ್ದು ಇದೀಗ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಬಿಸಿಸಿಐ ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರನ್ನು ಆಹ್ವಾನಿಸಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಪಠಾಣ್ ಅಬ್ಬರ, ಏಷ್ಯಾ ಲಯನ್ಸ್ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಸ್ಲೆಜೆಂಡ್ಸ್ ಲೀಗ್ ಕ್ರಿಕೆಟ್: ಪಠಾಣ್ ಅಬ್ಬರ, ಏಷ್ಯಾ ಲಯನ್ಸ್ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಸ್

ಹೌದು, ಜನವರಿ 22ರಂದು ಎಲ್ಲಾ ಪ್ರಾಂಚೈಸಿಗಳ ಮಾಲೀಕರ ಜತೆ ಆನ್‌ಲೈನ್‌ ಮೀಟಿಂಗ್ ನಡೆಸಲಿರುವ ಬಿಸಿಸಿಐ ಫೆಬ್ರವರಿ 12 ಹಾಗೂ 13ನೇ ತಾರೀಖಿನಂದು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ಯಾವ ನಗರದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ತಿಳಿಸಲಿದೆ. ಈ ಸಭೆಯಲ್ಲಿ ಸದ್ಯ ಭಾರತದಲ್ಲಿ ಕೊರೋನಾವೈರಸ್ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯಾವ ದೇಶದಲ್ಲಿ ನಡೆಸಿದರೆ ಉತ್ತಮ ಎಂಬುದರ ಕುರಿತು ಕೂಡ ಬಿಸಿಸಿಐ ಪ್ರಾಂಚೈಸಿಗಳ ಮಾಲೀಕರ ಜತೆ ಚರ್ಚಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್:

ತಮ್ಮ ಇಂಗ್ಲೆಂಡ್ ತಂಡ ಸದ್ಯ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಕಳೆದೊಂದು ವರ್ಷದಿಂದ ಹೀನಾಯ ಹಂತವನ್ನು ತಲುಪಿದ್ದು, ಹಲವಾರು ಪಂದ್ಯಗಳಲ್ಲಿ ಸೋಲುಂಡಿದೆ. ಅದರಲ್ಲಿಯೂ ಇತ್ತೀಚಿಗಷ್ಟೆ ಮುಕ್ತಾಯವಾಗಿರುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 0 - 4 ಅಂತರದಲ್ಲಿ ಇಂಗ್ಲೆಂಡ್ ಸೋಲುಂಡಿರುವುದು ದೊಡ್ಡ ಮಟ್ಟದ ಹಿನ್ನಡೆಗೆ ಕಾರಣವಾಗಿದೆ. ಅತ್ತ ತಮ್ಮ ತಂಡದ ಆಟಗಾರರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇತರೆ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ತಮ್ಮ ಆಟಗಾರರು ಭಾಗವಹಿಸಬಾರದೆಂದು ತಾಕೀತು ಮಾಡಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಈ ಕಾರಣದಿಂದಾಗಿಯೇ ಇದೀಗ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ತಮ್ಮ ಅಂತರರಾಷ್ಟ್ರೀಯ ತಂಡದ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿಯುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಮೇಲೆ ಹರಿಯಲಿದೆ ಹಣದ ಹೊಳೆ:

Rohit Sharmaಗೆ ನಾಯಕತ್ವದ ಒತ್ತಡ ತಿಳಿಯೋದು ಆಗ | Oneindia Kannada

ಕೆಎಲ್ ರಾಹುಲ್ ಲಕ್ನೋ ತಂಡದ ಪಾಲಾಗುತ್ತಿರುವ ಹಿನ್ನೆಲೆಯಿಂದಾಗಿ ಇದೀಗ ಅಸ್ತಿತ್ವದಲ್ಲಿರುವ ನಾಯಕರಹಿತ ತಂಡಗಳು ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಡಲಿದ್ದು, ದೊಡ್ಡ ಮಟ್ಟದ ಹಣದ ಹೊಳೆ ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ಹರಿಯಲಿದೆ. ಕೇವಲ ನಾಯಕನಾಗಿ ಮಾತ್ರವಲ್ಲದೇ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಮಿಂಚು ಹರಿಸಬಲ್ಲ ಆಟಗಾರನಾಗಿರುವ ಶ್ರೇಯಸ್ ಅಯ್ಯರ್ ಮೇಲೆ ಇತರೆ ಫ್ರಾಂಚೈಸಿಗಳು ಕೂಡ ಕಣ್ಣಿಟ್ಟಿರುವುದು ಸುಳ್ಳಲ್ಲ. ವಿಶೇಷವಾಗಿ ಶ್ರೇಯಸ್ ಅಯ್ಯರ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಹೆಚ್ಚು ಹರಾಜು ಕೂಗಲಿವೆ ಎಂಬುದನ್ನು ವರದಿಯೊಂದು ಬಿಚ್ಚಿಟ್ಟಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ನಾಯಕನ ಹುಡುಕಾಟದಲ್ಲಿದೆ ಎಂಬುದನ್ನು ವರದಿ ತಿಳಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 22:35 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X