ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಭಾರತದ ಸರಣಿಯಲ್ಲಿ ಬದಲಾವಣೆ?

Bcci To Reschedule Australia Series And England Series At Home?

ಕೊರೊನಾ ವೈರಸ್‌ನಿಂದಾಗಿ ಈಗಾಗಲೇ ಸಾಕಷ್ಟು ಕ್ರಿಕೆಟ್ ಸರಣಿಗಳು ಮುಂದೂಡಲ್ಪಟ್ಟಿದ್ದು ಕೆಲ ಸರಣಿಗಳನ್ನು ರದ್ದುಗೊಳಿಸಲಾಗಿದೆ. ಈ ಮಧ್ಯೆ ಕೊರೊನಾ ವೈರಸ್ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಈಗ ಈ ಡೆಡ್ಲಿ ವೈರಸ್ ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ಹಾಗೂ ಮುಂದಿನ ವರ್ಷದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ದೊಡ್ಡ ಬದಲಾವಣೆಯನ್ನು ತರುವ ಸಾಧ್ಯತೆಯಿದೆ.

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಾಲ್ಕು ಪಂದ್ಯಗಳ ಟೆಸ್ಟ್ ಹಾಗೂ ಕೆಲ ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲು ನಿರ್ಧಾರವಾಗಿತ್ತು. ಆದರೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ಈ ಸರಣಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಯಾರು ಶ್ರೇಷ್ಠ ನಾಯಕ : ಸಮೀಕ್ಷೆಯಲ್ಲಿ ಧೋನಿ ಮತ್ತು ಗಂಗೂಲಿ ಮಧ್ಯೆ ಮೇಲುಗೈ ಯಾರಿಗೆ?ಯಾರು ಶ್ರೇಷ್ಠ ನಾಯಕ : ಸಮೀಕ್ಷೆಯಲ್ಲಿ ಧೋನಿ ಮತ್ತು ಗಂಗೂಲಿ ಮಧ್ಯೆ ಮೇಲುಗೈ ಯಾರಿಗೆ?

ಏಕದಿನ ಹಾಗೂ ಟಿ20 ಸರಣಿಯನ್ನು ಬಹುತೇಕ ರದ್ದುಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು ಟೆಸ್ಟ್ ಸರಣಿ ಒಂದು ವಾರ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಮಧ್ಯಂತರ ವೇಳಾಪಟ್ಟಿಯ ಪ್ರಕಾರ ಟೆಸ್ಟ್ ಸರಣಿ ಡಿಸೆಂಬರ್ 3 ರಿಂದ ಆರಂಭಗೊಳ್ಳಲಿದೆ. ಬಳಿಕ ಟಿ20 ಸರಣಿ ಹಾಗೂ ಏಕದಿನ ಸರಣಿ ನಡೆಯಬೇಕಾಗಿತ್ತು.

ಸೀಮಿತ ಓವರ್‌ಗಳಲ್ಲಿ ಟಿ20 ಅಥವಾ ಏಕದಿನ ಸರಣಿಯಲ್ಲಿ ಒಂದು ರದ್ದಾಗುವ ಸಾಧ್ಯತೆಯಿದೆ. ಬಹುತೇಕ ಟಿ20 ಸರಣಿ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಕಾರಣ ಟಿ20 ಸರಣಿಯನ್ನು ವಿಶ್ವಕಪ್ ದೃಷ್ಟಿಯಿಂದ ಆಯೋಜನೆ ಮಾಡಲಾಗಿತ್ತು. ಆದರೆ ಈಗ ಅದು ನಡೆಯುವ ಸಂಭವ ಇಲ್ಲ. ಟೆಸ್ಟ್ ಸರಣಿ ಒಂದು ವಾರಗಳ ಕಾಲ ಮುಂದೂಡಿಕೆಯಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

'2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು''2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು'

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಭಾರತದಲ್ಲಿ ಇಂಗ್ಲೆಂಡ್ ಮೂರು ಮಾದರಿಯ ಸರಣಿಯಲ್ಲಿ ಪಾಲ್ಗೊಳ್ಳಬೇಕಾಗಿದ್ದು ಅದರಲ್ಲೂ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಕಳೆದ ಮಾರ್ಚ್‌ನಲ್ಲಿ ರದ್ದಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಏರ್ಪಡಿಸಲು ಸಮಯ ಹೊಂದಿಸುವ ಪ್ರಯತ್ನಗಳು ನಡೆಯುತ್ತಿದೆ.

Story first published: Wednesday, July 15, 2020, 10:02 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X