ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಆಫ್ಘನ್‌ ಪ್ರೀಮಿಯರ್‌ ಲೀಗ್‌ ಆಯೋಜಿಸಲು ಬಿಸಿಸಿಐ ನಕಾರ!

BCCI turns down Afghanistans request to host APL in India

ಹೊಸದಿಲ್ಲಿ, ಜೂನ್‌ 18: ಕ್ರಿಕೆಟ್‌ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಆಫ್ಘನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ಅನುಮತಿ ಕೋರಿದ್ದ ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿಯ ಮನವಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಳ್ಳಿ ಹಾಕಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ತನ್ನ ಟಿ20 ಕ್ರಿಕೆಟ್‌ ಲೀಗ್‌ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ ಮನವಿ ಮಾಡಿತ್ತು. ನಮ್ಮದೇ ಆದ ಟಿ20 ಕ್ರಿಕೆಟ್‌ ಟೂರ್ನಿ ಇರುವಾಗ ಆಫ್ಘನ್‌ ಪ್ರೀಮಿಯರ್‌ ಲೀಗ್‌ಗೆ ಅನುಮತಿ ನೀಡುವುದು ಸರಿಯಲ್ಲ,'' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಸಂಸ್ಥೆಗೆ ತಿಳಿಸಿದ್ದಾರೆ.

ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಈ ವಿಚಾರವಾಗಿ ಬಿಸಿಸಿಐನ ಸಿಇಒ ರಾಹುಲ್‌ ಜೊಹ್ರಿ ಮತ್ತು ಕ್ರಿಕೆಟ್‌ ಕಾರ್ಯಚಟುವಟಿಕೆಗಳ ಪ್ರಧಾನ ನಿರ್ವಾಹಕ ಸಬಾ ಕರೀಮ್‌ ಅವರ ಬಳಿ ಮೇ 16ರಂದು ಮುಂಬೈನಲ್ಲಿ ನಡೆದ ಸಭೆಯೊಂದರಲ್ಲಿ ಮನವಿ ಮಾಡಿಕೊಂಡಿದ್ದರು.

ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!

ಇಷ್ಟೇ ಅಲ್ಲದೆ ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿಯ ಸಿಇಒ ಅಸಾದುಲ್ಲಾ ಖಾನ್‌, ಭಾರತದಲ್ಲಿ ಡೆಹರಾಡುನ್‌ ಮತ್ತು ಗ್ರೇಟರ್‌ ನೊಯ್ಡಾ ಹೊರತಾಗಿ ಮತ್ತೊಂದು ಕ್ರೀಡಾಂಗಣವನ್ನು ಅಫಘಾನಿಸ್ಥಾನಕ್ಕೆ ಮನೆಯಂಗಣವಾಗಿ ನೀಡುವಂತೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಬಿಸಿಸಿಐ ಕಿಂಚಿತ್ತೂ ತಕರಾರು ತೆಗೆಯದೆ ಲಖನೌ ಕ್ರೀಡಾಂಗಣವನ್ನು ಅಫಘಾನಿಸ್ಥಾನಕ್ಕೆ ಮೂರನೇ ತವರೂರಾಗಿ ನೀಡುವ ಆಲೋಚನೆಯಲ್ಲಿದೆ.

"ಡೆಹರಾಡುನ್‌ನಲ್ಲಿ ಯಾವುದೇ 5 ಸ್ಟಾರ್‌ ಹೋಟೆಲ್‌ಗಳು ಇಲ್ಲದೇ ಇರುವ ಕಾರಣ ಪಂದ್ಯಗಳನ್ನು ಆಯೋಜಿಸುವುದಕ್ಕೆ ತೊಂದರೆಯಾಗಲಿದೆ. ಹೀಗಾಗಿ ಲಖನೌ ಕ್ರೀಡಾಂಗಣವನ್ನು ನೀಡಿದರೆ ನೆರವಾಗಲಿದೆ,'' ಎಂದು ಖಾನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವಕಪ್: ಮಾರ್ಗನ್‌ ಅಬ್ಬರ, ಇಂಗ್ಲೆಂಡ್‌ಗೆ 150 ರನ್‌ಗಳ ಭರ್ಜರಿ ಜಯವಿಶ್ವಕಪ್: ಮಾರ್ಗನ್‌ ಅಬ್ಬರ, ಇಂಗ್ಲೆಂಡ್‌ಗೆ 150 ರನ್‌ಗಳ ಭರ್ಜರಿ ಜಯ

ಇನ್ನು ಚೊಚ್ಚಲ ಆವೃತ್ತಿಯ ಅಫಘಾನಿಸ್ತಾನ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯನ್ನು ಕಳೆದ ವರ್ಷ ಅಕ್ಟೋಬರ್‌ 5-21ರವರೆಗೆ ಶಾರ್ಜಾದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ 5 ತಂಡಗಳು ಸ್ಪರ್ಧಿಸಿ ಮೊಹಮ್ಮದ್‌ ನಬಿ ಸಾರಥ್ಯದ ಬಾಲ್ಖ್‌ ಲೆಜಂಡ್ಸ್‌ ತಂಡ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿತ್ತು.

Story first published: Tuesday, June 18, 2019, 23:32 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X