ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ವಿವೋ ಜೊತೆ ಸೌಹಾರ್ದಯುತ ಹೆಜ್ಜೆಯಿಡಲು ಬಿಸಿಸಿಐ ಚಿಂತನೆ

Bcci, Vivo Working On Amicable Methods To Part Ways?

ಗಡಿಯಲ್ಲಿ ಭಾರತ ಸೈನಿಕರೊಂದಿಗೆ ಚೀನಾ ಸೇನೆ ನಡೆಸಿದ ಕ್ರೌರ್ಯದ ವರ್ತನೆಯ ಬಳಿಕ ಎರಡೂ ದೇಶಗಳ ಮಧ್ಯೆ ಯುದ್ಧದ ವಾತಾವರಣ ಉಂಟಾಗಿದೆ. ಈ ಘಟನೆಯ ಬಳಿಕ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾದ ಚೀನಾ ಮೂಲದ ವಿವೊ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೇಲೆ ಒತ್ತಡ ಹೆಚ್ಚುತ್ತಿದೆ.

ಬಿಸಿಸಿಐ ತನ್ನ ಸಹಾಯಕ ಪಾಲುದಾರನ್ನಾಗಿ ಸ್ವಿಗ್ಗಿ ಮತ್ತು ಡ್ರೀಮ್ 11 ಅನ್ನು ಹೊಂದಿದ್ದರೆ, ಐಪಿಎಲ್ ಪಾಲಿದಾರನನ್ನಾಗಿ ಫ್ಯಾಂಟಸಿ ಲೀಗ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಎರಡೂ ಕೂಡ ಚೀನಾದ ಅತಿ ದೊಡ್ಡ ಟೆಕ್ ಕಂಪನಿಯಾದ ಟೆನ್ಸೆಂಟ್‌ನ ಹೂಡಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪುನರ್‌ಪರಿಶೀಲನೆಗಾಗಿ ಈ ವಾರ ಐಪಿಎಲ್ ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ.

ಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತುಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತು

ಬಿಸಿಸಿಐನ ಕಾರ್ಯದರ್ಶಿಯಾಗಿರುವ ಅರುಣ್ ಧುಮಲ್ ಈ ಬಗ್ಗೆ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. ಐಪಿಎಲ್‌ನ ಮುಖ್ಯ ಪ್ರಾಯೋಜಕರಾಗಿರುವ ವಿವೋ ಜೊತೆಗೆ ಒಪ್ಪಂದ ಇರುವ ಕಾರಣ ಈ ಬಾರಿ ಮುಂದಿವರಿಯುವುದಾಗಿ ತಿಳಿಸಿದ್ದರು. ಏಕಪಕ್ಷೀಯವಾಗಿ ರದ್ದುಗೊಳಿಸಿದರೆ ನ್ಯಾಯಾಲಯದ ಮೂಲಕ ಹೋರಾಟಮಾಡಲು ಅವಕಾಶವಿದೆ ಎಮದು ಸಮಜಾಯಿಷಿ ನೀಡಿದ್ದರು.

ಹಾಗಿದ್ದರೂ ಐಪಿಎಲ್ ಆಡಳಿತ ಮಂಡಳಿಯಲ್ಲಿ ವ್ಯವಹಾರಕ್ಕಿಂತ ರಾಷ್ಟ್ರದ ಹಿತವೇ ಇಂತಾ ಸಂದರ್ಭದಲ್ಲಿ ಮುಖ್ಯವಾಗುತ್ತದ ಎಂಬ ಅಭಿಪ್ರಾಯ ಕೇಳಿ ಬಂದಿದೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುವ ಅವಕಾಶವಿದೆ, ಮುಂದಿರುವ ಆಯ್ಕೆಗಳೇನು ಎಂಬುದನ್ನು ಚರ್ಚಿಸಲು ಸಭೆಯನ್ನು ನಡೆಸಲಾಗುತ್ತಿದೆ. ಆದರೆ ಬಿಸಿಸಿಐ ಮತ್ತು ವಿವೊ ಸೌಹಾರ್ದಯುತವಾಗಿ ನಿರ್ಗಮಿಸುವ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಕ್ರಿಕೆಟ್ ಪುನರಾರಂಭದ ಪರಿಸ್ಥಿತಿಯಲ್ಲಿ ನಾವಿನ್ನೂ ಇಲ್ಲ: ರಾಹುಲ್ ದ್ರಾವಿಡ್ಕ್ರಿಕೆಟ್ ಪುನರಾರಂಭದ ಪರಿಸ್ಥಿತಿಯಲ್ಲಿ ನಾವಿನ್ನೂ ಇಲ್ಲ: ರಾಹುಲ್ ದ್ರಾವಿಡ್

ಇದು ಒಂದು ಒಪ್ಪಂದವಾಗಿದ್ದು, ಈ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯ ಮುಂದೆ ಚರ್ಚೆಗಳು ನಡೆಯುತ್ತಿವೆ. ವಿವೊ 2015 ರಿಂದ ಐಪಿಎಲ್ ಮಂಡಳಿಯಲ್ಲಿದ್ದು, 2018 ರಲ್ಲಿ ಐದು ವರ್ಷಗಳ ಅವಧಿಗೆ 2000ಕ್ಕೂ ಅಧಿಕ ಮೊತ್ತಕ್ಕೆ ಒಪ್ಪಂದವನ್ನು ನವೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವೋ ಜೊತೆಗೆ ಇಲ್ಲಿಯವರೆಗೆ ಸುಗಮ ಸಂಬಂಧವಾಗಿದೆ ಮತ್ತು ಸ್ನೇಹಪರವಾಗಿದ್ದುಕೊಂಡೇ ಈ ಸಂಬಂಧವನ್ನು ಕಡಿತಗಳಿಸಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿವೋ ಜೊತೆಗೆ ಒಪ್ಪಂದವನ್ನು ಕಡಿತಗೊಳಿಸಿದರೆ ಮುಂದಿನ ಎರಡು ಅಥವಾ ಮೂರು ವರ್ಷಗಳಿಗೆ ಸಮರ್ಥ ಪ್ರಾಯೋಜಕರನ್ನು ಬಿಸಿಸಿಐ ಹುಡುಕುತ್ತಿದೆ ಎಂದು ವರದಿಯಾಗಿದೆ.

Story first published: Tuesday, June 23, 2020, 9:54 [IST]
Other articles published on Jun 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X