ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಲು ಬಿಸಿಸಿಐ ಬಯಸುತ್ತಿದ್ಯಾ? ಹೌದು ಎನ್ನುತ್ತಿದೆ ವರದಿ!

Virat kohli

ಟಿ20 ವಿಶ್ವಕಪ್ 2021ರಲ್ಲಿ ಭಾರತದ ಕಪ್‌ ಗೆಲ್ಲುವ ಕನಸು ಕೇವಲ ಗ್ರೂಪ್ ಸ್ಟೇಜ್‌ನಲ್ಲಿ ಅಂತ್ಯಗೊಂಡಿತು. ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗದೇ ಟೀಮ್ ಇಂಡಿಯಾ ಮನೆ ಕಡೆ ಹೆಜ್ಜೆ ಹಾಕಿತು. ನಾಯಕ ವಿರಾಟ್ ಕೊಹ್ಲಿ ಕೂಡ ಮೊದಲೇ ಹೇಳಿದಂತೆ ಟಿ20 ನಾಯಕತ್ವವನ್ನು ಬಿಟ್ಟುಕೊಟ್ಟರು.

ಕಳೆದ ಹಲವು ವರ್ಷಗಳಿಂದ ಮೂರು ಫಾರ್ಮೆಟ್‌ಗೆ ಏಕೈಕ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ಇನ್ನೆಂದು ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸುವುದಿಲ್ಲ. ಹೊಸ ಕೋಚ್ ರಾಹುಲ್ ದ್ರಾವಿಡ್ ಮತ್ತು ಹೊಸ ನಾಯಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಭಾರತದ ಯುವ ಪಡೆ ಮುನ್ನೆಡೆಯಲಿದೆ.

ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದಾಗಿ ತಿಳಿಸಿದ್ರು. ಆದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲೂ ನಾಯಕತ್ವ ಬಿಟ್ಟುಕೊಡುವುದನ್ನು ಎದುರು ನೋಡುತ್ತಿದೆ ಎಂದು ವರದಿಯಾಗಿದೆ.

ಓಡಿಐ ನಾಯಕತ್ವ ಬಿಟ್ಟುಕೊಡ್ತಾರಾ ವಿರಾಟ್?

ಓಡಿಐ ನಾಯಕತ್ವ ಬಿಟ್ಟುಕೊಡ್ತಾರಾ ವಿರಾಟ್?

ಏಕದಿನ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳ ಒಡೆಯನಾದ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳನ್ನ ಹೊರತುಪಡಿಸಿ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಟಿ20 ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಾರ ಎಂಬುದು ಪ್ರಶ್ನೆಯಾಗಿದೆ.

ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದಕ್ಕೆ ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ: SMS ಸ್ಟೇಡಿಯಂ ವಿಶೇಷತೆ ಏನು?

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಏಕೆ ಬಯಸುತ್ತಿದೆ?

ಕೊಹ್ಲಿ ಓಡಿಐ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಬಯಸುತ್ತಿದೆ ಎಂದು ವರದಿಗಳು ಹರಿದಾಡುತ್ತಿವೆ. ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಆತ ನಾಯಕತ್ವದಿಂದ ಕೆಳಗಿಳಿಯುದು ಒಳ್ಳೆಯದು ಎಂದು ಬಯಸುತ್ತಿದೆ.

ಕೊಹ್ಲಿ ವಿಂಟೇಜ್ ಬ್ಯಾಟಿಂಗ್ ಮರೆಯಾಗಿದೆ!

ಕೊಹ್ಲಿ ವಿಂಟೇಜ್ ಬ್ಯಾಟಿಂಗ್ ಮರೆಯಾಗಿದೆ!

ಹೌದು ವಿರಾಟ್ ಕೊಹ್ಲಿಯ ವಿಂಟೇಜ್ ಬ್ಯಾಟಿಂಗ್ ನೋಡಿ ತುಂಬಾ ಸಮಯವೇ ಕಳೆದುಹೋಗಿದೆ. ವಿರಾಟ್ ಬ್ಯಾಟ್‌ನಿಂದ ಸೆಂಚುರಿ ಸಿಡಿದು ಸುಮಾರು ಎರಡು ವರ್ಷವಾಗಿದೆ. ಮೂರು ಫಾರ್ಮೆಟ್‌ನಲ್ಲಿ ನಾಯಕನಾಗಿ ತಂಡವನ್ನ ಮುನ್ನೆಡೆಸಿದ ಹೊರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದ್ಯಾ ಎಂಬ ಚರ್ಚೆ ಹೆಚ್ಚಿದೆ. ಹೀಗಾಗಿ ಬಿಸಿಸಿಐ ಕೂಡ ವಿರಾಟ್ ಕೊಹ್ಲಿ ಏಕದಿನ ನಾಯಕತ್ವವನ್ನು ಬಿಟ್ಟುಕೊಡಲಿ ಎಂದು ಬಯಸುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

"ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿಯ ನಾಯಕತ್ವದ ಹೊರೆಯನ್ನು ತೆಗೆದುಹಾಕಲು ಬಿಸಿಸಿಐ ಬಯಸುತ್ತದೆ, ಇದರಿಂದಾಗಿ ಅವರು ತಮ್ಮ ಬ್ಯಾಟಿಂಗ್‌ನ ಮೇಲೆ ಗಮನ ಕೇಂದ್ರೀಕರಿಸಬಹುದು ಮತ್ತು ಅವರ ಪ್ರಬಲ ಫಾರ್ಮ್‌ಗೆ ಮರಳಬಹುದು" ಎಂದು ಎನ್‌ಡಿಟಿವಿ ವರದಿ ಮಾಡಿದೆ.

2022ರಲ್ಲಿ ಓಡಿಐ ನಾಯಕತ್ವವು ಬದಲಾಗಬಹುದು!

2022ರಲ್ಲಿ ಓಡಿಐ ನಾಯಕತ್ವವು ಬದಲಾಗಬಹುದು!

"2022 ರ ಜನವರಿ 11 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಯ ನಂತರ ಟೀಮ್ ಇಂಡಿಯಾದ ODI ನಾಯಕತ್ವದಲ್ಲಿ ಬದಲಾವಣೆಗಳು ಆಗಬಹುದು. ರೋಹಿತ್ ಶರ್ಮಾ 50 ಓವರ್‌ಗಳ ಫಾರ್ಮೆಟ್‌ನಲ್ಲೂ ಸಹ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಜೊತೆಗೆ KL ರಾಹುಲ್ ಅವರ ಉಪನಾಯಕರಾಗಿದ್ದಾರೆ'' ಎಂದು ಮೂಲಗಳು ಮತ್ತಷ್ಟು ಹೇಳಿಕೊಂಡಿವೆ.

ಐಪಿಎಲ್‌ 2022 ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗಲಿರುವ 8 ಭಾರತದ ಆಟಗಾರರು

England ವಿರುದ್ಧ ಸೇಡು ತೀರಿಸಿಕೊಂಡ New Zealand ಫೈನಲ್ ತಲುಪಿದೆ | Oneindia Kannada
ರೋಹಿತ್‌ಗೆ ಲಿಮಿಟೆಡ್ ಓವರ್ ಫಾರ್ಮೆಟ್ ನಾಯಕತ್ವ?

ರೋಹಿತ್‌ಗೆ ಲಿಮಿಟೆಡ್ ಓವರ್ ಫಾರ್ಮೆಟ್ ನಾಯಕತ್ವ?

ಹೌದು, ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ವಿರಾಟ್‌ ಕೊಹ್ಲಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ನಂತರ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲೂ ವಿರಾಟ್‌ ಕೊಹ್ಲಿ ಆಡ್ತಾರ ಎಂಬುದರ ಯಾವುದೇ ಖಚಿತತೆ ಇಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಆಡೋದಿಲ್ಲ ಎಂದು ಹೇಳಲಾಗ್ತಿದೆ. ಆದ್ರೆ ಅಂತಿಮ ಪಂದ್ಯದಲ್ಲಿ ಆಡುವ ಕುರಿತು ದೃಢವಾಗಿ ತಿಳಿದುಬಂದಿಲ್ಲ.

ಇನ್ನು ಮೊದಲ ಟೆಸ್ಟ್‌ನಲ್ಲಿ ರೋಹಿತ್ ಕೂಡ ವಿಶ್ರಾಂತಿ ಪಡೆಯುವುದರಿಂ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಗಮನಾರ್ಹವೆಂದರೆ, ರಹಾನೆ ಈ ವರ್ಷ ಸುದೀರ್ಘ ಸ್ವರೂಪದಲ್ಲಿ ರನ್‌ಗಳ ಕೊರತೆ ಎದುರಿಸುತ್ತಿದ್ದಾರೆ. ಆದ್ದರಿಂದ, ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ ಅವರು ಕಿವೀಸ್ ತಂಡವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು ಕುತೂಹಲ ಮೂಡಿಸಿದೆ.

ಇದರ ಜೊತೆಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾರನ್ನು ವೈಟ್ ಬಾಲ್ ಕ್ರಿಕೆಟ್‌ನ ಪೂರ್ಣ ಪ್ರಮಾಣದ ನಾಯಕನನ್ನಾಗಿ ಮಾಡಲು ಎದುರು ನೋಡುತ್ತಿದೆ ಎನ್ನಲಾಗಿದೆ.

Story first published: Friday, November 12, 2021, 9:51 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X