ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬಿಸಿಸಿಐ ಕಠಿಣ ಎಚ್ಚರಿಕೆ!

Rohit sharma and virat

ಭಾರತ ತಂಡದ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬಿಸಿಸಿಐ ಕಠಿಣ ಎಚ್ಚರಿಕೆ ನೀಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಆದ್ರೆ ಇದಕ್ಕೂ ಮೊದಲು ಸಿಕ್ಕಿದ್ದೇ ಅವಕಾಶ ಎಂದು ಸುತ್ತುತ್ತಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.

ಕೋವಿಡ್ ಕಾರಣಗಳಿಂದ ಕಳೆದ ವರ್ಷ ಟೆಸ್ಟ್ ಸರಣಿಯನ್ನು ಮುಂದೂಡಲಾಗಿತ್ತು. ಕಳೆದ ಬಾರಿ ಮುಗಿಯದೇ ಬಾಕಿ ಉಳಿದಿದ್ದ ಟೆಸ್ಟ್‌ ಸರಣಿಯಲ್ಲಿ ಅಂತಿಮ ಪಂದ್ಯವು ಜುಲೈ 1ರಿಂದ ಆರಂಭವಾಗಲಿದೆ.

ಕಠಿಣ ಅಭ್ಯಾಸ ನಡೆಸಿದೆ ಟೀಂ ಇಂಡಿಯಾ

ಕಠಿಣ ಅಭ್ಯಾಸ ನಡೆಸಿದೆ ಟೀಂ ಇಂಡಿಯಾ

ಕಳೆದ 3-4 ತಿಂಗಳಿಂದ ಭಾರತ ತಂಡ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಹೀಗಾಗಿ ಸರಣಿ ಆರಂಭಕ್ಕೆ 15 ದಿನಗಳ ಹಿಂದೆಯೇ ಇಂಗ್ಲೆಂಡ್‌ಗೆ ಆಗಮಿಸಿದ್ದ ಭಾರತ ತಂಡದ ಆಟಗಾರರು ತೀವ್ರ ನೆಟ್ಸ್ ತರಬೇತಿಯಲ್ಲಿ ತೊಡಗಿದ್ದರು. ಜೊತೆಗೆ ಮತ್ತಷ್ಟು ಡ್ರಿಲ್‌ಗಳ ಜೊತೆಗೆ ಇದೇ ರೀತಿಯ ತರಬೇತಿ ಪಂದ್ಯವನ್ನು ಏರ್ಪಡಿಸಲಾಗಿದೆ.

ಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಈ ಖ್ಯಾತ ನಟಿ: ವರದಿ

ಮತ್ತೆ ಎಲ್ಲರನ್ನ ಕಾಡುತ್ತಿದೆ ಕೊರೊನಾ

ಮತ್ತೆ ಎಲ್ಲರನ್ನ ಕಾಡುತ್ತಿದೆ ಕೊರೊನಾ

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಜೊತೆಗೆ ನಂತರದಲ್ಲಿ ಲಿಮಿಟೆಡ್ ಓವರ್ ಕ್ರಿಕೆಟ್ ಆಡಲು ಸಿದ್ಧಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಶ್ವಿನ್‌ಗೆ ಕೊರೊನಾ ಪಾಸಿಟಿವ್ ಆಗಿದ್ದರಿಂದ ಅವರು ಇಂಗ್ಲೆಂಡ್‌ಗೆ ಹೋಗಲಿಲ್ಲ. ಅದೇ ರೀತಿ ಪ್ರಮುಖ ಆಟಗಾರ ವಿರಾಟ್ ಕೊಹ್ಲಿಗೆ ಕೊರೊನಾ ದೃಢವಾಗಿದೆ ಮತ್ತು ನಂತರ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ ನಂತರದಲ್ಲಿ ಕೊರೊನಾ ಸಮಸ್ಯೆ ಮತ್ತೆ ಬಿಸಿಯಾಗಿದೆ.

ಕೊಹ್ಲಿ ಜೊತೆ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಈ ಕ್ರಿಕೆಟಿಗರು ಈಗ ಕ್ರಿಕೆಟ್‍ನಿಂದಲೇ ಮರೆಯಾಗಿದ್ದಾರೆ

N Jagadeesan ಹಾಗು Aparajith ನಡುವೆ ದೊಡ್ಡ ಜಗಳ | *Cricket | OneIndia Kannada
ಕೊಹ್ಲಿ ಮತ್ತು ರೋಹಿತ್ ವಿರುದ್ಧ ಬಿಸಿಸಿಐ ಗರಂ

ಕೊಹ್ಲಿ ಮತ್ತು ರೋಹಿತ್ ವಿರುದ್ಧ ಬಿಸಿಸಿಐ ಗರಂ

ಈ ಪರಿಸ್ಥಿತಿಯಲ್ಲಿ ರೋಹಿತ್ ಹಾಗೂ ಕೊಹ್ಲಿ ವಿರುದ್ಧ ಬಿಸಿಸಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂಗ್ಲೆಂಡ್ ಸರಣಿಯಲ್ಲಿ ಬಯೋ ಬಬಲ್ ನಿಯಮ ಇಲ್ಲದ ಕಾರಣ ರೋಹಿತ್ ಹಾಗೂ ಕೊಹ್ಲಿ ಇಬ್ಬರೂ ಇಂಗ್ಲೆಂಡ್ ನ ಬೀದಿಗಳಲ್ಲಿ ಓಡಾಡಿದ್ದರು. ಅವರು ಕೂಡ ಅನುಮಾನಾಸ್ಪದ ಅಭಿಮಾನಿಗಳ ಹತ್ತಿರ ನಿಂತು ಫೋಟೋಗಳನ್ನು ತೆಗೆದಿರುವುದು ಕೊರೊನಾ ಭೀತಿಯನ್ನು ಉಲ್ಬಣಗೊಳಿಸಿದೆ.

ಬಿಸಿಸಿಐ ಅಧಿಕಾರಿಗಳು ವೀಡಿಯೋ ಮೂಲಕ ಇಬ್ಬರೊಂದಿಗೆ ಮಾತುಕತೆ ನಡೆಸಿದ್ದಾರೆ. ನಿಯಮವೇ ಇಲ್ಲದಿದ್ದರೂ ಇಷ್ಟೊಂದು ತಾತ್ಸಾರ ಮಾಡುವುದನ್ನು ಒಪ್ಪಲಾಗದು. ಯಾವುದೇ ಕೊರೊನಾ ರೋಗಲಕ್ಷಣಗಳು ಅಥವಾ ನಿಮ್ಮ ಆರೋಗ್ಯದಲ್ಲಿ ಯಾವುದೇ ಸಣ್ಣ ಬದಲಾವಣೆಯನ್ನು ತಕ್ಷಣವೇ ವರದಿ ಮಾಡಲು ಸಲಹೆ ನೀಡಲಾಗಿದೆ.

ಜೊತೆಗೆ ಇಂಗ್ಲೆಂಡ್‌ನಲ್ಲಿ ಕಠಿಣ ನಿಯಮಗಳಿಲ್ಲ ಎಂದು ಸುತ್ತುವುದನ್ನ ಆದಷ್ಟು ತಪ್ಪಿಸಬೇಕು, ಅಪರಿಚತರೊಂದಿಗೆ ಅಂತರ ಕಾಪಾಡಿಕೊಳ್ಳಿ ಎಂದು ಬಿಸಿಸಿಐ ತಿಳಿಸಿದೆ.

Story first published: Wednesday, June 22, 2022, 20:38 [IST]
Other articles published on Jun 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X