ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಮುಂದೂಡಿಕೆ ಸಾಧ್ಯತೆ : ಬಿಸಿಸಿಐ ವಿರುದ್ಧ ಆಸಿಸ್ ಮಾಧ್ಯಮಗಳ ಗಂಭೀರ ಆರೋಪ

Bcci Wont Push For T20 World Cup Postponement To Open Ipl Window

ಕೊರೊನ ವೈರಸ್‌ನ ಕಾರಣದಿಂದಾಗಿ ಮಹತ್ವದ ಕ್ರಿಕೆಟ್ ಟೂರ್ನಿಯೊಂದು ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಬೇಕಿದ್ದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿವ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

ರೋಹಿತ್ ಶರ್ಮಾ ನಾಯಕತ್ವ ಎಂಎಸ್ ಧೋನಿಗೆ ಹೋಲುತ್ತದೆ: ಸುರೇಶ್ ರೈನಾರೋಹಿತ್ ಶರ್ಮಾ ನಾಯಕತ್ವ ಎಂಎಸ್ ಧೋನಿಗೆ ಹೋಲುತ್ತದೆ: ಸುರೇಶ್ ರೈನಾ

ಈ ಮಧ್ಯೆ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಕ್ಕೆ ಬಿಸಿಸಿಐ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳು ಈ ರೀತಿಯ ಆರೋಪಗಳನ್ನು ಮಾಡಿದೆ. ಐಪಿಎಲ್‌ಅನ್ನು ಈ ವರ್ಷವೇ ಆಯೋಜನೆ ಮಾಡಬೇಕು ಎಂಬ ಕಾರಣಕ್ಕೆ ಈ ಪ್ರಯತ್ನಗಳು ಆಗುತ್ತಿದೆ ಎಂದು ಆರೋಪಿಸಲಾಗಿದೆ.

ಪ್ರಭಾವ ಬಳಸಿ ಬಿಸಿಸಿಐ ಮುಂದೂಡಿಕೆ ಯತ್ನ!

ಪ್ರಭಾವ ಬಳಸಿ ಬಿಸಿಸಿಐ ಮುಂದೂಡಿಕೆ ಯತ್ನ!

ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಐಪಿಎಲ್‌ ಮುಂದೂಡಿಕೆಯಿಂದಾಗುವ ನಷ್ಟವನ್ನು ತಪ್ಪಿಲು ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿ ವಿಶ್ವಕಪ್‌ ಬಲಿ ಕೊಡುವ ಪ್ರಯತ್ನಗಳನ್ನು ತನ್ನ ಪ್ರಭಾವ ಬಳಸಿಕೊಂಡು ಮಾಡುತ್ತಿದೆ ಎಂದು ಆಸಿಸ್ ಮಾಧ್ಯಮಗಳು ಆರೋಪಿಸುತ್ತಿದೆ.

ಬಿಸಿಸಿಐ ಸ್ಪಷ್ಟನೆ

ಬಿಸಿಸಿಐ ಸ್ಪಷ್ಟನೆ

ಈ ಬಗ್ಗೆ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಲ್ ಪ್ರತಿಕ್ರಿಯಿಸಿದ್ದು, ಬಿಸಿಸಿಐ ಯಾವ ಕಾರಣಕ್ಕಾಗಿ ವಿಶ್ವಕಪ್ ಮುಂದೂಡುವ ಪ್ರಯತ್ನ ಮಾಡುತ್ತದೆ ಎಂದು ಮರು ಪ್ರಶ್ನಿಸಿದ್ದಾರೆ. ಮುಂದಿನವಾರ ಈ ಬಗ್ಗೆ ಐಸಿಸಿ ಸಭೆ ನಡೆಸಲಿದ್ದು ಬಿಸಿಸಿಐ ವಿಶ್ವಕಪ್ ಮುಂದೂಡುವ ಬಗ್ಗೆ ಯಾವುದೇ ಶಿಫಾರಸ್ಸು ಮಾಡುವುದಿಲ್ಲ ಎಂದಿದ್ದಾರೆ.

ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ

ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ

ಆಸ್ಟ್ರೇಲಿಯಾ ಸರ್ಕಾರ ವಿಶ್ವಕಪ್ ಕ್ರಿಕೆಟ್ ನಡೆಸಲು ಹಸಿರು ನಿಶಾನೆ ತೋರಿದರೆ ಖಂಡಿತಾ ವಿಶ್ವಕಪ್ ನಡೆಯುತ್ತದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೆ ತೆಗೆದುಕೊಳ್ಳಿದೆ. ವಿಶ್ವಕಪ್ ಕುರಿತಾಗಿ ತೀರ್ಮಾನ ತೆಗೆದುಕೊಳ್ಳುವವರೆಗೂ ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಐಸಿಸಿ ನಿರ್ಧಾರ ಅಧಿಕೃತವಾಗಿಲ್ಲ

ಐಸಿಸಿ ನಿರ್ಧಾರ ಅಧಿಕೃತವಾಗಿಲ್ಲ

ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಾಗಿತ್ತು. ಆದರೆ ವಿಶ್ವಾದ್ಯಂತ ಕೊರೊನಾ ವೈರಸ್ ಹಾವಳಿ ತೀವ್ರವಾಗಿರುವ ಕಾರಣ ಮುಂದೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಸದ್ಯ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮುಂದಿನ ವಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

Story first published: Friday, May 22, 2020, 18:21 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X