ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೆಚ್ಚಾಯ್ತು ಲೀಗ್‌ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

BCCI worried about IPL team owners interest on foreign cricket league

ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಐಪಿಎಲ್ ತಮ್ಮದೇ ಆಗ ಖ್ಯಾತಿ ಪಡೆದುಕೊಂಡಿದೆ. ಬಹುತೇಕ ಎಲ್ಲಾ ಕ್ರಿಕೆಟ್ ಮಂಡಳಿಗಳು ಕೂಡ ಕ್ರಿಕೆಟ್ ಲೀಗ್‌ಗಳ ಆಯೋಜನೆಯನ್ನು ಮಾಡುತ್ತಿದ್ದರೂ ಬಿಸಿಸಿಐ ಆಯೋಜಿಸುತ್ತಿರುವ ಐಪಿಎಲ್‌ನ ಪ್ರಖ್ಯಾತಿಗೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಐಪಿಎಲ್ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ.

ಹಾಗಿದ್ದರೂ ಬಿಸಿಸಿಐಗೆ ಈಗ ಹೊಸ ತಲೆನೋವೊಂದು ಕಾಡಲು ಆರಂಭಿಸಿದೆ. ಐಪಿಎಲ್‌ನ ಫ್ರಾಂಚೈಸಿಗಳ ಇತ್ತೀಚಿನ ಕೆಲ ಪ್ರಮುಖ ನಡೆಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬಾಸ್‌ಗಳು ತಲೆ ಕೆಡಿಸುವಂತಾಗಿದೆ. ಇದಕ್ಕೆ ಕಾರಣ ವಿಶ್ವ ಕ್ರಿಕೆಟ್‌ನಲ್ಲಿ ತಲೆಯೆತ್ತುತ್ತಿರುವ ಹೊಸ ಹೊಸ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಪಾರಮ್ಯ. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಸಹಿತ ಐಪಿಎಲ್ ಫ್ರಾಂಚೈಸಿಗಳು ವಿದೇಶಿ ಲೀಗ್‌ಗಳಲ್ಲಿಯೂ ತಂಡಗಳನ್ನು ಖರೀದಿಸಿದೆ. ಈ ಬೆಳವಣಿಗೆ ಬಿಸಿಸಿಐನ ನಿದ್ದೆಗೆಡಿಸಿದೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

ಬಿಸಿಸಿಐ ಕಳವಳಕ್ಕೆ ಕಾರಣ

ಬಿಸಿಸಿಐ ಕಳವಳಕ್ಕೆ ಕಾರಣ

ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಇತ್ತೀಚೆಗೆ ವಿದೇಶಿ ಲೀಗ್‌ಗಳ ಕಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಕೂಡ ತಂಡಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕ್ರಿಕೆಟ್ ದಕ್ಷಿಣ ಆಫ್ರಿಕಾ ಆಯೋಜಿಸುತ್ತಿರುವ ಲೀಗ್‌ನಲ್ಲಿ ಕೂಡ ಐಪಿಎಲ್‌ನ ಫ್ರಾಂಚೈಸಿಗಳೇ ಸಂಪೂರ್ಣ ಪಾರುಪತ್ಯ ಮೆರೆದಿದೆ. ಇದು ಬಿಸಿಸಿಐನ ಕಳವಳಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಬಿಸಿಸಿಐನ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಪ್ರತಿಕ್ರಿಯಿಸಿ ಬಿಸಿಸಿಐನ ಆತಂಕವನ್ನು ಹಂಚಿಕೊಂಡಿದ್ದಾರೆ.

ನಮ್ಮ ಬ್ರ್ಯಾಂಡ್ ರಕ್ಷಣೆ ಮಾಡಬೇಕಿದೆ

ನಮ್ಮ ಬ್ರ್ಯಾಂಡ್ ರಕ್ಷಣೆ ಮಾಡಬೇಕಿದೆ

ಬಿಸಿಸಿಐನ ಅಧಿಕಾರಿ ಐಪಿಎಲ್‌ನ ಬ್ರ್ಯಾಂಡ್‌ಗೆ ಧಕ್ಕೆಯುಂಟಾಗಬಹುದಾದ ಆತಂಕವನ್ನು ಬಿಸಿಸಿಐ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "ಬಿಸಿಸಿಐ ಐಪಿಎಲ್ ಎಂಬ ಬ್ರ್ಯಾಂಡ್‌ಅನ್ನು ಸೃಷ್ಟಿ ಮಾಡಿದೆ. ಇಡೀ ಕ್ರೀಡಾ ಜಗತ್ತೇ ಅದಕ್ಕೆ ಅಚ್ಚರಿಗೊಂಡಿದೆ. ನಾವು ನಮ್ಮ ಬ್ರ್ಯಾಂಡ್‌ಅನ್ನು ರಕ್ಷಣೆ ಮಾಡಬೇಕಿದೆ. ಪ್ರತೀ ವಿದೇಶಿ ಲೀಗ್‌ಗಳೊಂದಿಗೂ ನಮ್ಮ ಫ್ರಾಂಚೈಸಿಗಳು ಸಂಬಂಧವನ್ನು ಹೊಂದಿರುವುದನ್ನು ನೋಡಿದರೆ ಕಳವಳವಾಗುತ್ತದೆ" ಎಂದಿದ್ದಾರೆ ಬಿಸಿಸಿಐನ ಅಧಿಕಾರಿ. ಮುಂದುವರಿದು ಮಾತನಾಡಿದ ಅವರು "ಅವರು ಅವರಿಗೆ ಇಷ್ಟವಿದ್ದಲ್ಲಿ ಹೂಡಿಕೆ ಮಾಡಲು ಸ್ವತಂತ್ರರಾಗಿದ್ದಾರೆ. ಆದರೆ ಐಪಿಎಲ್ ಹೆಸರಿನಲ್ಲಿ ಮಾಡುವುದನ್ನು ನಾವು ಅನುಮತಿಸಲಾರೆವು ಎಂದಿದ್ದಾರೆ.

ವಿದೇಶಿ ಲೀಗ್‌ಗಳ ಮಾಲಿಕತ್ವ ಹೊಂದಿರುವ ಐಪಿಎಲ್ ಫ್ರಾಂಚೈಸಿಗಳು

ವಿದೇಶಿ ಲೀಗ್‌ಗಳ ಮಾಲಿಕತ್ವ ಹೊಂದಿರುವ ಐಪಿಎಲ್ ಫ್ರಾಂಚೈಸಿಗಳು

ಈಗಷ್ಟೇ ಆರಂಭವಾಗುತ್ತಿರುವ ಯುಎಇನ ಐಎಲ್‌ಟಿ20 ಲೀಗ್, ಕ್ರಿಕೆಟ್ ದಕ್ಷಿಣ ಆಫ್ರಿಕಾದ ಟಿ20 ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಪ್ರಖ್ಯಾತ ಲೀಗ್‌ಗಳಲ್ಲಿ ಒಂದಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇರುವ ಐದು ಫ್ರಾಂಚೈಸಿಗಳ ಪೈಕಿ ಮೂರು ಫ್ರಾಂಚೈಸಿಯ ಮಾಲೀಕತ್ವವನ್ನು ಐಪಿಎಲ್ ಮಾಲೀಕರು ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕರು ತಂಡಗಳನ್ನು ಹೊಂದಿದ್ದಾರೆ. ಇನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಹೊಸ ಟಿ20 ಲೀಗ್ ಇಂಟರ್‌ನ್ಯಾಶನಲ್ ಟಿ20 ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಾಲೀಕರು ತಂಡಗಳನ್ನು ಖರೀದಿಸಿದ್ದಾರೆ. ಅದಾದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಯೋಜನೆ ಮಾಡುತ್ತಿರುವ ಲೀಗ್‌ನಲ್ಲಿ ಎಲ್ಲಾ ಆರು ತಂಡಗಳು ಕೂಡ ಐಪಿಎಲ್ ಫ್ರಾಂಚೈಸಿಯ ಮಾಲೀಕರ ಪಾಲಾಗಿದೆ.

Pakistanದ ಈ ಮೂವರನ್ನು ಕಂಟ್ರೋಲ್ ಮಾಡಿದ್ರೆ ಟೀಮ್ ಇಂಡಿಯಾ ಗೆದ್ದ ಹಾಗೇನೇ... | *Cricket | OneIndia Kannada
ಭಾರತೀಯ ಆಟಗಾರರ ಸಹಭಾಗಿತ್ವಕ್ಕೆ ಒತ್ತಡ

ಭಾರತೀಯ ಆಟಗಾರರ ಸಹಭಾಗಿತ್ವಕ್ಕೆ ಒತ್ತಡ

ಈ ಸಂದರ್ಭದಲ್ಲಿ ವಿದೇಶಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರಿಗೂ ಅವಕಾಶಗಳನ್ನು ನಿಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕನಿಷ್ಠ ಕಾಂಟ್ರಾಕ್ಟ್ ಹೊಂದಿರದ ಭಾರತೀಯ ಆಟಗಾರರಿಗಾದರೂ ಅವಕಾಶ ನೀಡಬೇಕು ಎಂಬ ಒತ್ತಡಗಳು ಬರುತ್ತಿದೆ. ಆದರೆ ಬಿಸಿಸಿಐ ಇದಕ್ಕೆ ಅನುಮತಿ ನೀಡುವ ಸಾಧ್ಯತೆ ಇಲ್ಲ. ಐಪಿಎಲ್‌ನ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಊ ಭಾರತೀಯ ಆಟಗಾರರಿಗೆ ಅನುಮತಿಯನ್ನು ನೀಡುತ್ತಿಲ್ಲ.

Story first published: Thursday, August 11, 2022, 13:11 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X