ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಅಲ್ಲ ಯುವರಾಜ್ ಅಲ್ಲ: 2011ರ ವಿಶ್ವಕಪ್ ಗೆಲ್ಲಲು ಈತನೇ ಕಾರಣ ಎಂದ ರೈನಾ

Because Of Sachin Tendulkar We Won World Cup’: Suresh Raina

1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ಮತ್ತೆ ಪ್ರಶಸ್ತಿಗೆ ಮುತ್ತಿಕ್ಕಲು ಸರಿ ಸುಮಾರು ಮೂರು ದಶಕ ಬೇಕಾಯಿತು. ಹೀಗಾಗಿ 2011ರ ವಿಶ್ವಕಪ್ ಗೆಲುವು ಟೀಮ್ ಇಂಡಿಯಾ ಪಾಲಿಗೆ ಬಹಳ ಮಹತ್ವದ್ದು. ಅದಾಗಿ ಮತ್ತೆ 9 ವರ್ಷ ಕಳೆದಿದೆ.

ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಸಿಕ್ಸರ್ ಸಿಡುಸುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸು ಮಾಡಿದರು. ಅದಕ್ಕೂ ಮುನ್ನ ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾದಲ್ಲಿ ಆಲ್‌ರೌಂಡರ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಯುವರಾಜ್ ಶಬ್ಬಾಸ್ ಎನಿಸಿದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿದರು.

ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾ

ಆದರೆ ಆ ವಿಶ್ವಕಪ್‌ನ ಗೆಲುವಿಗೆ ಧೋನಿಯಾಗಲಿ ಯುವರಾಜ್ ಆಗಲಿ ಪ್ರಮುಖ ಕಾರಣರಲ್ಲ, ಅದರ ಶ್ರೇಯಸ್ಸು ಸಂಪೂರ್ಣವಾಗಿ ಇನ್ನೊಬ್ಬರಿಗೆ ಲಭಿಸಬೇಕು ಎಂದು ಸುರೇಶ್ ರೈನಾ ಹೇಳಿದ್ದಾರೆ. ಹಾಗಾದರೆ ರೈನಾ ಹೇಳಿದ ಹೆಸರು ಯಾರದ್ದು ಮುಂದೆ ಓದಿ

ದಿಗ್ಗಜನಿಗೋಸ್ಕರ ತಂಡದ ಹೋರಾಟ

ದಿಗ್ಗಜನಿಗೋಸ್ಕರ ತಂಡದ ಹೋರಾಟ

2011ರ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಲೇ ಬೇಕೆಂದು ಇಡೀ ಟೀಮ್ ಇಂಡಿಯಾ ಒಟ್ಟಾಗಿತ್ತು. ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್. ಸಚಿನ್ ತೆಂಡೂಲ್ಕರ್ ಅವರಿಗೋಸ್ಕರ ಈ ವಿಶ್ವಕಪ್ ಗೆಲುವು ಬೇಕೇ ಬೇಕು ಎಂಬುದು ಎಲ್ಲರ ಮನಸ್ಥೊತಿಯಾಗಿತ್ತು. ಇಡೀ ತಂಡದ ಕನಸು ಅದಾಗಿತ್ತು ಎಂದು ಸುರೇಶ್ ರೈನಾ ಹೇಳಿದ್ದಾರೆ.

ಸಚಿನ್ ಕೊನೆಯ ವಿಶ್ವಕಪ್

ಸಚಿನ್ ಕೊನೆಯ ವಿಶ್ವಕಪ್

1989ರಿಂದ ಟೀಮ್ ಇಂಡಿಯಾ ಪರವಾಗಿ ಆಡುತ್ತಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ವಿಶ್ವಕಪ್ ಗೆಲುವು ಸಾಧ್ಯವಾಗಿರಲಿಲ್ಲ. 2011ರ ವಿಶ್ವಕಪ್ ಅವರ ಕೊನೆಯ ವಿಶ್ವಕಪ್ ಆಗಿದ್ದ ಕಾರಣ ಅವರ ಸ್ಮರಣೀಯ ವಿದಾಯಕ್ಕಾಗಿ ಇಡೀ ತಂಡ ಉತ್ಸುಕವಾಗಿತ್ತು. ಈ ಅಂತಿಮ ವಿಶ್ವಕಪ್‌ನಲ್ಲೂ ಸಚಿನ್ ಟೀಮ್ ಇಂಡಿಯಾ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಫೈನಲ್‌ನಲ್ಲಿ ಸಚಿನ್ ಬೇಗನೆ ವಿಕೆಟ್ ಒಪ್ಪಿಸಿದರಾದರೂ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. 9 ಪಂದ್ಯಗಳಿಂದ ಸಚಿನ್ 482 ರನ್ ಗಳಿಸಿದ್ದರು ಎಂದು ಸುರೇಶ್ ರೈನಾ ಹೇಳಿದ್ದಾರೆ.

ವಿಶ್ವಕಪ್‌ ಗೆಲುವಿಗೆ ಸಚಿನ್ ಕಾರಣ

ವಿಶ್ವಕಪ್‌ ಗೆಲುವಿಗೆ ಸಚಿನ್ ಕಾರಣ

ಸಚಿನ್ ತೆಂಡೂಲ್ಕರ್ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಉತ್ಸಾಹಕ್ಕೆ ಕಾರಣರಾಗಿದ್ದರು. ಪ್ರತಿಯೊಬ್ಬ ಆಟಗಾರನಲ್ಲೂ ನಮ್ಮಿಂದ ಇದು ಸಾಧ್ಯ ಎಂದು ನಂಬಿಕೆ ಬರುವಂತೆ ಮಾಡಿದ್ದರು. ತಂಡದಲ್ಲಿ ಸಚಿನ್ ಎರಡನೇ ಕೋಚ್‌ ರೀತಿ ಇದ್ದರು ಎಂದು ಸುರೇಶ್ ರೈನಾ ಹೇಳಿದ್ದಾರೆ.

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್

ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಯುವರಾಜ್ ಸಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ್ದರು. ಟೀಮ್ ಇಂಡಿಯಾ ಈ ಟೂರ್ನಿ ಗೆಲ್ಲುವಲ್ಲಿ ಯುವರಾಜ್ ಪಾತ್ರ ಬಹಳ ದೊಡ್ಡದಿತ್ತು. ಅದೇ ಕಾರಣಕ್ಕೆ ಯುವರಾಜ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

Story first published: Monday, May 4, 2020, 13:58 [IST]
Other articles published on May 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X