ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ vs ಲಂಕಾ ನಡುವಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದು ಮಳೆಯಲ್ಲ!

ICC World Cup 2019 : ಆಟಗಾರರ ಪರಿಸ್ಥಿತಿ ನೋಡಿ ಜೋರಾಗಿ ನಕ್ಕ ಪ್ರೇಕ್ಷಕರು..! | SA vs SL | Oneindia Kannada
Bees cause players to hit the ground during WC game in England

ಚೆಸ್ಟರ್‌ ಲೇ ಸ್ಟ್ರೀಟ್‌, ಜೂನ್‌ 28: ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿ ಹಲವು ಪಂದ್ಯಗಳಿಗೆ ವರುಣರಾಯನ ಅಡಚಣೆಯಾಗಿದೆ. ಆದರೆ, ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯ ಬೇರೆಯದ್ದೇ ಕಾರಣಕ್ಕೆ ಕೆಲ ಕಾಲ ಸ್ಥಗಿತಗೊಂಡಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡ 49.3 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆದರೆ, ಇದಕ್ಕೂ ಮೊದಲು ಇನಿಂಗ್ಸ್‌ನ 48ನೇ ಓವರ್‌ ವೇಳೆ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ಬಿಸಿಸಿಐನಿಂದ ಕೇಸರಿ ಬಣ್ಣದ ಟೀಮ್‌ ಇಂಡಿಯಾ ಜರ್ಸಿ ಅನಾವರಣ!ಬಿಸಿಸಿಐನಿಂದ ಕೇಸರಿ ಬಣ್ಣದ ಟೀಮ್‌ ಇಂಡಿಯಾ ಜರ್ಸಿ ಅನಾವರಣ!

ಕ್ರೀಡಾಂಗಣಕ್ಕೆ ಏಕಾಏಕಿ ಜೇನುನೊಣಗಳು ದಾಳಿಯಿಟ್ಟ ಪರಿಣಾಮ ಅಂಗಣದಲ್ಲಿ ಇದ್ದ ಆಟಗಾರರು ಮತ್ತು ಅಂಪೈರ್‌ಗಳೆಲ್ಲಾ ಮಕಾಡೆ ಮಲಗಿ ಜೇನು ನೊಣಗಳ ದಾಳಿಯಿಂದ ತಪ್ಪಿಸಿಕೊಂಡು. ನೊಣಗಳು ಕ್ರಿಡಾಂಗಣದಿಂದ ಹೊರಗೋಗುವ ವರೆಗೂ ಆಟ ಮುಂದುವರಿಸಲು ಸಾಧ್ಯವಾಗದೆ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತ್ತು. ಆಟ್ಆರರ ಮತ್ತು ಅಂಪೈರ್‌ಗಳ ಪರದಾಟ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ನಕ್ಕು ಸುಮ್ಮನಾದರು.

ಇದೇ ವೇಳೆ ಸೋಷಿಯಲ್‌ ಮೀಡಿಯಾಗಳಲ್ಲಿ ಆಟಗಾರರು ನೆಲದ ಮೇಲೆ ಮಕಾಡೆ ಮಲಗಿರುವ ಚಿತ್ರಗಳು ಹರಿದಾಡಿದ್ದು, ಸರಕಾರಿ ಕಚೇರಿಗಳಲ್ಲಿನ ಕೆಲಸಗಾರರು ಮಧ್ಯಾಹ್ನದ ಊಟದ ಬಳಿಕ ಇದೇ ರೀತಿ ಮಲಗಿರುತ್ತಾರೆ ಎಂದೆಲ್ಲಾ ಗೇಲಿ ಮಾಡಿದ್ದಾರೆ.

ವಿಶ್ವಕಪ್‌: ಕೊನೆಗೂ ಗೆದ್ದ ದಕ್ಷಿಣ ಆಫ್ರಿಕಾ, ಲಂಕಾಕ್ಕೆ 9 ವಿಕೆಟ್‌ ಸೋಲುವಿಶ್ವಕಪ್‌: ಕೊನೆಗೂ ಗೆದ್ದ ದಕ್ಷಿಣ ಆಫ್ರಿಕಾ, ಲಂಕಾಕ್ಕೆ 9 ವಿಕೆಟ್‌ ಸೋಲು

ಅಂದಹಾಗೆ 2017ರಲ್ಲಿ ವಾಂಡರರ್ಸ್‌ನಲ್ಲಿ ಈ ಎರಡು ತಂಡಗಳ ನಡುವಣ ಪಂದ್ಯಕ್ಕೆ ಇದೇ ರೀತಿ ದುಂಬಿಗಳು ದಾಳಿ ಇಟ್ಟಿದ್ದವು. ಕಾಕತಾಳೀಯ ಎಂಬಂತೆ ಮತ್ತೆ ಇವೆರಡು ತಂಡಗಳ ನಡುವಣ ಪಂದ್ಯದಲ್ಲೇ ಈ ಘಟನೆ ಸಂಭವಿಸಿದೆ.

ಇನ್ನು ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಹಂತಕ್ಕೇರುವ ಲೆಕ್ಕಾಚಾರದಲ್ಲಿರುವ ಶ್ರೀಲಂಕಾ ತಂಡ ಶುಕ್ರವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 9 ವಿಕೆಟ್‌ಗಳ ಹೀನಾಯ ಸೋಲುಂಡು ತನ್ನ ಮುಂದಿನ ಹಾದಿಯನ್ನು ದುರ್ಗಮವನ್ನಾಗಿಸಿಕೊಂಡಿದೆ. ಲಂಕಾ ತನ್ನ ಮುಂದಿನ ಮೂರೂ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಸೆಮಿಫೈನಲ್ಸ್‌ ತಲುಪುವ ಅವಕಾಶ ಹೊಮದಿದೆ. ಮತ್ತೊಂದೆಡೆ 5 ಪಂದ್ಯಗಳನ್ನು ಸೋತು ಇದೀಗ ಟೂರ್ನಿಯಲ್ಲಿ ತನ್ನ 2ನೇ ಜಯ ದಾಖಲಿಸಿರುವ ದಕ್ಷಿಣ ಆಫ್ರಿಕಾ ಪ್ರತಿಷ್ಠೆ ಕಾಯ್ದುಕೊಳ್ಳಲಷ್ಟೇ ಆಡುತ್ತಿದೆ.

Story first published: Friday, June 28, 2019, 23:10 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X