ಕೊಹ್ಲಿ ಬ್ಯಾಟ್‌ನಿಂದ ಬಂದಿಲ್ಲ , ಸಚಿನ್‌ಗೆ 24 ವರ್ಷದಲ್ಲಿ ಸಾಧ್ಯವಾಗಿಲ್ಲ!

Before Kohli Dilip Vengsarkar Was A Run-Machine Even Sachin Could Not Make This Record

ಸದ್ಯ ವಿರಾಟ್ ಕೊಹ್ಲಿಯನ್ನು ವಿಶ್ವಕ್ರಿಕೆಟ್‌ನ ರನ್ ಮೆಷಿನ್ ಎಂದು ಕರೆಯಲಾಗುತ್ತದೆ. ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ವಿರಾಟ್ ಕೊಹ್ಲಿ ಅರ್ಹವಾಗಿಯೇ ಈ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಅನೇಕರ ದಾಖಲೆಗಳನ್ನು ವಿರಾಟ್ ಧೂಳೀಪಟ ಮಾಡುತ್ತಿದ್ದಾರೆ.

ಮತ್ತೋರ್ವ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಲೋಕದ ದೇವರು ಎಂದು ಕರೆಯಲಾಗುತ್ತದೆ. ಕ್ರಿಕೆಟ್‌ನಲ್ಲಿ ಸಚಿನ್ ಏರಿದ ಎತ್ತರವೇ ಸಚಿನ್ ತೆಂಡೂಲ್ಕರ್‌ಗೆ ಈ ದೇವರ ಪಟ್ಟವನ್ನು ನೀಡಿದೆ. ಆದರೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಧ್ಯವೇ ಆಗದ ದಾಖಲೆಯೊಂದನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ ಮಾಡಿದ್ದಾರೆ.

ಇಂದು ಹುಟ್ಟುಹಬ್ದ ಸಂಭ್ರಮದಲ್ಲಿರುವ ದಿಲೀಪ್ ವೆಂಗ್‌ಸರ್ಕಾರ್ ಮಾಡಿರುವ ಒಂದು ದಾಖಲೆ ಮುರಿಯಲು ಭಾರತದ ಯಾವ ಕ್ರಿಕೆಟಿಗನಿಂದಲೂ ಸಾಧ್ಯವಾಗಲಿಲ್ಲ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಿಂದಲೂ ಸಾಧ್ಯವಾಗದ ಆ ದಾಖಲೆ ಯಾವುದು? ಮುಂದೆ ಓದಿ..

ಸಚಿನ್ ವಿರಾಟ್ ಕೂಹ್ಲಿ ಮುನ್ನವೇ ರನ್‌ ಮೆಷಿನ್

ಸಚಿನ್ ವಿರಾಟ್ ಕೂಹ್ಲಿ ಮುನ್ನವೇ ರನ್‌ ಮೆಷಿನ್

ಟೀಮ್ ಇಂಡಿಯಾದಲ್ಲಿ ರನ್ ಮೆಷಿನ್ ಎಂದು ವಿರಾಟ್ ಕೊಹ್ಲಿ ಈಗ ಬೀಗುತ್ತಿರಬಹುದು. ಆದರೆ ಆ ಪಟ್ಟವನ್ನು ಮೊದಲು ಗಿಟ್ಟಿಸಿಕೊಂಡ ಆಟಗಾರ ಎಂದರೆ ಅದು ದಿಲೀಪ್ ವೆಂಗ್ ಸರ್ಕಾರ್. ಟೀಮ್ ಇಂಡಿಯಾದಲ್ಲಿ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿದ್ದ ವೆಂಗ್ ಸರ್ಕಾರ್ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಿಂದ ಸಾಧ್ಯವಾಗದ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಆ ದಾಖಲೆ ಯಾವುದು?

ಆ ದಾಖಲೆ ಯಾವುದು?

ದಿಲೀಪ್ ವೆಂಗ್ ಸರ್ಕಾರ್ ಮಾಡಿರುವ ಆ ದಾಖಲೆ ಲಾರ್ಡ್ಸ್ ಮೈದಾನದಲ್ಲಿ ಬಾರಿಸಿರುವ ಶತಕಗಳು. ವಿಶ್ವ ಕ್ರಿಕೆಟ್‌ನ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್ ಅಂಗಳದಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಒಂದಲ್ಲ ಎರಡಲ್ಲ ಭರ್ಜರಿ ಮೂರು ಶತಕಗಳನ್ನು ಬಾರಿಸಿದ್ದಾರೆ.

ಮೂರು ಶತಕ ಸಿಡಿಸಿದ ಮೊದಲ ವಿದೇಶಿ ಆಟಗಾರ

ಮೂರು ಶತಕ ಸಿಡಿಸಿದ ಮೊದಲ ವಿದೇಶಿ ಆಟಗಾರ

1979, 1982 ಮತ್ತು 1986 ರ ಇಂಗ್ಲೆಂಡ್ ಪ್ರವಾಸಗಳಲ್ಲಿ ವೆಂಗ್ಸಾರ್ಕರ್ ಲಾರ್ಡ್ಸ್ನಲ್ಲಿ ಶತಕಗಳನ್ನು ಗಳಿಸಿದರು. ಆಶ್ಚರ್ಯಕರ ಸಂಗತಿಯೆಂದರೆ ಲಾರ್ಡ್ಸ್‌ನಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ ವೆಂಗ್‌ಸಾರ್ಕರ್‌ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಲಾರ್ಡ್ಸ್‌ನಲ್ಲಿ 3 ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಯನ್ನು ವೆಂಗ್‌ಸಾರ್ಕರ್ ಪಡೆದುಕೊಂಡಿದ್ದಾರೆ

ಸಚಿನ್ ಸಿಡಿಸಿಲ್ಲ ಒಂದೇ ಒಂದು ಶತಕ

ಸಚಿನ್ ಸಿಡಿಸಿಲ್ಲ ಒಂದೇ ಒಂದು ಶತಕ

ಸಚಿನ್ ತೆಂಡೂಲ್ಕರ್ ಶತಕದ ಮೇಲೆ ಶತಕವನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ಒಟ್ಟಾರೆ 100 ಶತಕವನ್ನು ದಾಖಲಿಸಿದ್ದಾರೆ. ಆದರೆ ಸಚಿನ್ ಬ್ಯಾಟ್‌ನಿಂದ ಲಾರ್ಡ್ಸ್ ಅಂಗಳದಲ್ಲಿ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಲೇ ಇಲ್ಲ.

ಈ ದಿಗ್ಗಜರಿಂದ ಸಾಧ್ಯವಾಗಲಿಲ್ಲ

ಈ ದಿಗ್ಗಜರಿಂದ ಸಾಧ್ಯವಾಗಲಿಲ್ಲ

ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವುದು ಎಲ್ಲಾ ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ. ಆದರೆ ಇದು ಕೆಲ ದಿಗ್ಗಜ ಕ್ರಿಕೆಟಿಗರಿಂದಲೂ ಸಾಧ್ಯವಾಗಿಲ್ಲ. ಡಾನ್ ಬ್ರಾಡ್‌ಮನ್ ಸುನಿಲ್ ಗವಾಸ್ಕರ್ ಬ್ಯಾಟ್‌ನಿಂದಲೂ ಮೂರು ಶತಕಗಳನ್ನು ಶತಕ ಲಾರ್ಡ್ಸ್ ಅಂಗಳದಲ್ಲಿ ಸಿಡಿಸಲು ಸಾಧ್ಯವಾಗಲಿಲ್ಲ.

ಕೊಹ್ಲಿ ಆಯ್ಕೆಗೆ ವೆಂಗ್‌ಸರ್ಕಾರ್ ಕಾರಣ

ಕೊಹ್ಲಿ ಆಯ್ಕೆಗೆ ವೆಂಗ್‌ಸರ್ಕಾರ್ ಕಾರಣ

ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿಯನ್ನು ಒತ್ತಡದ ಮಧ್ಯೆಯೂ ಆಯ್ಕೆ ಮಾಡಿದ್ದರು ದಿಲೀಪ್ ವೆಂಗ್ ಸರ್ಕಾರ್. ಈ ಮೂಲಕ ಟೀಮ್ ಇಮಡಿಯಾಗೆ ನಿವೃತ್ತಿಯ ಬಳಿಕವೂ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ದಿಲೀಪ್ ವೆಂಗ್ ಸರ್ಕಾರ್ ವಿರಾಟ್ ಕೊಹ್ಲಿ ಆಯ್ಕೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

ವೆಂಗ್ ಸರ್ಕಾರ್ ವೃತ್ತಿ ಜೀವನ

ವೆಂಗ್ ಸರ್ಕಾರ್ ವೃತ್ತಿ ಜೀವನ

ಅಂತಹ ವೃತ್ತಿಜೀವನವೇ ವೆಂಗ್‌ಸಾರ್ಕರ್ ಟೀಮ್ ಇಂಡಿಯಾ ಪರವಾಗಿ 116 ಟೆಸ್ಟ್ ಪಂದ್ಯಗಳಲ್ಲಿ 17 ಶತಕಗಳನ್ನು ದಾಖಲಿಸಿ 6868 ರನ್ ಗಳಿಸಿದ್ದಾರೆ. 129 ಏಕದಿನ ಪಂದ್ಯಗಳಲ್ಲಿ 3508 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 260 ಪಂದ್ಯಗಳನ್ನಾಡಿರುವ ವೆಂಗ್‌ಸರ್ಕಾರ್ 55 ಶತಕಗಳೊಂದಿಗೆ 17,868 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 6, 2020, 18:32 [IST]
Other articles published on Apr 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more