ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳ ಪ್ರಶ್ನೆಗೆ ಕುತೂಹಲಕಾರಿ ಉತ್ತರ ಕೊಟ್ಟ ದಿನೇಶ್ ಕಾರ್ತಿಕ್

Being KKRs vice-captain helps me focus lot more on my skills: Dinesh Karthik

ಐಪಿಎಲ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಂತೆ ಆಟಗಾರರ ಹಾಗೂ ಅಭಿಮಾನಿಗಳ ಕಾತುರತೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಉಪನಾಯಕ ದಿನೇಶ್ ಕಾರ್ತಿಕ್ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಗಳನ್ನು ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಡಿಕೆ ಉತ್ತರವನ್ನು ನೀಡಿದ್ದಾರೆ.

ಕಳೆದ ಬಾರಿಯ ಆವೃತ್ತಿಯ ಮೊದಲಾರ್ಧದಲ್ಲಿ ನಾಯಕನಾಗಿದ್ದ ದಿನೇಶ್ ಕಾರ್ತಿಕ್ ನಂತರ ನಾಯಕತ್ವದಿಂದ ಹಿಂದಕ್ಕೆ ಸರಿದು ಇಯಾನ್ ಮಾರ್ಗನ್‌ಗೆ ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದರು. ತಾನು ಬ್ಯಾಟಿಂಗ್‌ನ ಮೇಲೆ ಮತ್ತಷ್ಟು ಗಮನವನ್ನು ಕೇಂದ್ರೀಕರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದರು.

ಐಪಿಎಲ್‌ಗೂ ಮುನ್ನವೇ ಶತಕ ಬಾರಿಸಿದ ಎಂಐಯ ಕ್ರಿಸ್‌ಲಿನ್!ಐಪಿಎಲ್‌ಗೂ ಮುನ್ನವೇ ಶತಕ ಬಾರಿಸಿದ ಎಂಐಯ ಕ್ರಿಸ್‌ಲಿನ್!

ಅಭಿಮಾನಿಯೊಬ್ಬರು ದಿನೇಶ್ ಕಾರ್ತಿಕ್ ಬಳಿ "ನಾಯಕತ್ವದ ಜವಾಬ್ಧಾರಿಯಿಲ್ಲದೆ ಹಾಗೂ ನಾಯಕನಾಗಿ ಆಡುವಾಗ ಯಾವ ರೀತಿ ಭಿನ್ನತೆಯಿರುತ್ತದೆ? ನಿಮ್ಮ ಮನಸ್ಥಿತಿ ಒಂದೇ ಇರುತ್ತದೆಯೋ ಅಥವಾ ತಂಡಗಳಿಗೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳುತ್ತೀರಾ?" ಎಂದು ಪ್ರಶ್ನಿಸಿದ್ದರು.

ಇದಕ್ಕೆ ದಿನೇಶ್ ಕಾರ್ತಿಕ್ "ಸಾಕಷ್ಟು ಭಿನ್ನತೆಯಿರುತ್ತದೆ. ಈಗ ನಾನು ಉಪನಾಯಕ, ನಾಯಕ ಇಯಾನ್ ಮಾರ್ಗನ್‌ಗೆ ನನ್ನಿಂದ ಸಾಧ್ಯವಾಗುವ ಸಹಾಯವನ್ನು ಮಾಡುತ್ತೇನೆ. ಆದರೆ ಬಹಳ ಮುಖ್ಯವಾಗಿ ಈಗ ನಾನು ನನ್ನ ಕೌಶಲ್ಯದ ಕಡೆಗೆ ಹೆಚ್ಚಿನ ಗಮನಹರಿಸಬಹುದು. ನಾನು ಅದನ್ನು ಚೆನ್ನಾಗಿ ಮಾಡಿದರೆ ಅದು ನನ್ನ ತಂಡಕ್ಕೆ ತುಂಬಾ ಅನುಕೂಲವಾಗುತ್ತದೆ" ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.

ಐಪಿಎಲ್: ಮ್ಯಾಕ್ಸ್‌ವೆಲ್ ರಚಿಸಿದ ಆಲ್ ಟೈಮ್ ತಂಡದಲ್ಲಿ ದೊಡ್ಡ ಆಟಗಾರರಿಗೇ ಸ್ಥಾನವಿಲ್ಲ!ಐಪಿಎಲ್: ಮ್ಯಾಕ್ಸ್‌ವೆಲ್ ರಚಿಸಿದ ಆಲ್ ಟೈಮ್ ತಂಡದಲ್ಲಿ ದೊಡ್ಡ ಆಟಗಾರರಿಗೇ ಸ್ಥಾನವಿಲ್ಲ!

ಇನ್ನು ಇದೇ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟ್ ಜೊತೆಗಾರ ಯಾರು ಎಂಬ ಪ್ರಶ್ನೆಗೆ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಅವರ ಹೆಸರನ್ನು ಹೇಳಿದ್ದಾರೆ. ಆತ ಕ್ರಿಕೆಟ್‌ನ ಬಗ್ಗೆಯೇ ಮಾತನಾಡುವುದಿಲ್ಲ. ಮನಬಂದ ವಿಚಾರಗಳ ಬಗ್ಗೆ ಚರ್ಚಿಸುತ್ತಾರೆ. ನಾನು ಅದನ್ನು ಆನಂದಿಸುತ್ತೇನೆ ಎಂದಿದ್ದಾರೆ ದಿನೇಶ್ ಕಾರ್ತಿಕ್.

Story first published: Wednesday, April 7, 2021, 21:07 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X