ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್

Ben Stokes Claims Impressive Test Record For England

ಇಂಗ್ಲೆಂಡ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ. ಕ್ಷೇತ್ರ ರಕ್ಷಕನಾಗಿ ಇನ್ನಿಂಗ್ಸ್‌ ಒಂದರಲ್ಲಿ ಎದುರಾಳಿ ತಂಡದ ಆಟಗಾರರ ಐದು ಕ್ಯಾಚ್‌ ಹಿಡಿದು ದಾಖಲೆ ನಿರ್ಮಿಸಿದ್ದಾರೆ. 142 ವರ್ಷಗಳ ಸುಧೀರ್ಘ ಅಂತರಾಷ್ಟ್ರೀಯ ಕ್ರಿಕೆಟ್‌ ಇತಿಹಾಸ ಹೊಂದಿರುವ ಇಂಗ್ಲೆಂಡ್ ಪರವಾಗಿ ಈ ದಾಖಲೆ ಮಾಡಿದ ಮೊದಲ ಆಟಗಾರ(ವಿಕೆಟ್‌ ಕೀಪರ್ ಹೊರತುಪಡಿಸಿ)ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಅಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಈ ಅಪರೂಪದ ಸಾಧನೆಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರಾದ ಝುಬೈರ್ ಹಂಝಾ, ಫಾಪ್ ಡು ಪ್ಲೆಸಿಸ್, ರಾಸ್ಸಿ ವ್ಯಾನ್ ಡರ್ ಡಸ್ಸೆನ್, ಡ್ವೇಯ್ನ್ ಪ್ರೆಟೋರಿಯಸ್ ಮತ್ತು ಆನ್ರಿಚ್ ನಾರ್ಟ್‌ಜೆ ಅವರ ಕ್ಯಾಚ್‌ ಪಡೆದು ಔಟಾಗಲು ಕಾರಣರಾದರು.

ಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗ

ಈ ಮೂಲಕ ಒಟ್ಟಾರೆಯಾಗಿ ಈ ಸಾಧನೆಯನ್ನು ಮಾಡಿದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಬೆನ್ ಸ್ಟೋಕ್ಸ್ ಪಾಲಿಗೆ ಬಂದಿದೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮೊದಲಿಗೆ 1936ರಷ್ಟು ಹಿಂದೆಯೇ ನಡೆದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿಕ್ ರಿಚರ್ಡ್ಸನ್ ಈ ಸಾಧನೆಯನ್ನು ಮೊದಲ ಬಾರಿಗೆ ಮಾಡಿದ್ದರು.

ಇಂಗ್ಲೆಂಡ್ ತನ್ನ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ್ದು 1877ರಲ್ಲಿ. ಈವರೆಗೆ 1019ಟೆಸ್ಟ್‌ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಇಷ್ಟು ಪಂದ್ಯಗಳಲ್ಲಿ ಕ್ಷೇತ್ರ ರಕ್ಷಕನೋರ್ವ ನಾಲ್ಕು ಕ್ಯಾಚ್ ಹಿಡಿದ ನಿದರ್ಶನಗಳು 23 ಬಾರಿ ನಡೆದಿದೆ. ಇತ್ತೀಚೆಗೆ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ನಾಲ್ಕು ಕ್ಯಾಚ್ ಪಡೆದುಕೊಂಡಿದ್ದರು. ಆದರೆ ಇಂಗ್ಲೆಂಡ್ ಪರವಾಗಿ ಐದು ಕ್ಯಾಚ್‌ಅನ್ನು ಫೀಲ್ಡರ್‌ ಓರ್ವ ಪಡೆದಿದ್ದು ಇದೇ ಮೊದಲು.

Story first published: Monday, January 6, 2020, 13:18 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X