ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶಿಷ್ಠ ದಾಖಲೆ

Ben Stokes created record for 4000 runs and 150 wickets in Tests

ಸೌತಾಂಪ್ಟನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇತ್ತಂಡಗಳ ನಡುವಿನ ಮೊದಲ ಪಂದ್ಯ ಸೌತಾಂಪ್ಟನ್‌ನ ರೋಸ್‌ಬೌಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಕೊರೊನಾವೈರಸ್ ಭೀತಿ ಶುರುವಾದ ಬಳಿಕ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯ ಗುರುತಿಸಿಕೊಂಡಿದೆ. ಟೆಸ್ಟ್ ಸರಣಿಯು ಒಟ್ಟಿಗೆ ಮೂರು ಪಂದ್ಯಗಳನ್ನು ಒಳಗೊಂಡಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ರನ್ ಕಲೆ ಹಾಕಿತ್ತು. ಉತ್ತಮ ಬ್ಯಾಟಿಂಗ್ ತೋರಿದ ವೆಸ್ಟ್ ಇಂಡೀಸ್, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46753

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶಿಷ್ಠ ದಾಖಲೆಗಾಗಿ ಗಮನ ಸೆಳೆದಿದ್ದಾರೆ.

ವಿಂಡೀಸ್‌ನಿಂದ ಇಬ್ಬರು ಅರ್ಧಶತಕ

ವಿಂಡೀಸ್‌ನಿಂದ ಇಬ್ಬರು ಅರ್ಧಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ರೋರಿ ಬರ್ನ್ಸ್ 30, ಬೆನ್ ಸ್ಟೋಕ್ಸ್ 43, ಜೋಸ್ ಬಟ್ಲರ್ 35, ಡೊಮಿನಿಕ್ ಬೆಸ್ 31 ರನ್‌ನೊಂದಿಗೆ 67.3 ಓವರ್‌ಗೆ 204 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್‌ನಿಂದ ಕ್ರೇಗ್ ಬ್ರಾಥ್‌ವೇಟ್ 65, ಶೇನ್ ಡೌರಿಚ್ 61 ರನ್‌ ಗಳಿಸಿದ್ದರಿಂದ ತಂಡ 102 ಓವರ್‌ಗೆ 318 ರನ್ ಗಳಿಸಿ ಮುನ್ನಡೆ ಸಾಧಿಸಿದೆ.

ಬೆನ್ ಸ್ಟೋಕ್ಸ್ ದಾಖಲೆ

ಬೆನ್ ಸ್ಟೋಕ್ಸ್ ದಾಖಲೆ

ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್ ಗಳಿಸಿದ್ದ ನಾಯಕ ಬೆನ್‌ ಸ್ಟೋಕ್ಸ್‌ಗೆ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳೂ ಲಭಿಸಿದವು. ಈ ಮೂಲಕ ಸ್ಟೋಕ್ಸ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ + 150 ವಿಕೆಟ್‌ಗಳನ್ನು ಪಡೆದ ವಿಶ್ವದ ಆರನೇ ಆಲ್ ರೌಂಡರ್ ಆಟಗಾರನಾಗಿ ದಾಖಲೆ ನಿರ್ಮಿಸಿದ್ದಾರೆ.

ದಾಖಲೆ ಪಟ್ಟಿಯಲ್ಲಿ 6 ಮಂದಿ

ದಾಖಲೆ ಪಟ್ಟಿಯಲ್ಲಿ 6 ಮಂದಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ 4000 ರನ್ + 150 ವಿಕೆಟ್‌ ದಾಖಲೆ ಪಟ್ಟಿಯಲ್ಲಿ ಒಟ್ಟಿಗೆ 6 ಮಂದಿಯಿದ್ದಾರೆ. ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್, ಇಂಗ್ಲೆಂಡ್‌ನ ಇಯಾನ್ ಬೋಥಮ್, ಭಾರತದ ಕಪಿಲ್ ದೇವ್, ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲೀಸ್, ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್ ಈ ಸಾಧನೆ ಮಾಡಿದ್ದಾರೆ.

ನಂ.2 ಟೆಸ್ಟ್ ಆಲ್ ರೌಂಡರ್

ನಂ.2 ಟೆಸ್ಟ್ ಆಲ್ ರೌಂಡರ್

ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಆಲ್ ರೌಂಡರ್‌ಗಳ ಸಾಲಿನಲ್ಲಿ ವೆಸ್ಟ್ ಇಂಡೀಸ್‌ ನಾಯಕ ಜೇಸನ್ ಹೋಲ್ಡರ್ ಬಳಿಕ ಸ್ಟೋಕ್ಸ್‌ ದ್ವಿತೀಯ ಶ್ರೇಯಾಂಕದಲ್ಲಿದ್ದಾರೆ. (ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಇನ್ನಿಂಗ್ಸ್‌ ಆಡುವುದಕ್ಕೂ ಮುನ್ನ) ಸ್ಟೋಕ್ಸ್ 64 ಟೆಸ್ಟ್ ಪಂದ್ಯಗಳಲ್ಲಿ 4099 ರನ್, 151 ವಿಕೆಟ್‌ ಸಾಧನೆ ಮಾಡಿದ್ದಾರೆ.

Story first published: Saturday, July 11, 2020, 9:37 [IST]
Other articles published on Jul 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X