ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್

Ben Stokes Pulls Out Of Pakistan Test Series Due To Family Reasons

ಲಂಡನ್, ಆಗಸ್ಟ್ 10: ಪಾಕಿಸ್ತಾನ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಸ್ಟೋಕ್ಸ್ ಆಡುತ್ತಿಲ್ಲ. ಕುಟುಂಬದ ಕಾರಣದಿಂದಾಗಿ ಸ್ಟೋಕ್ಸ್ ಇನ್ನುಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ ಎಂದು ಹೇಳಾಲಾಗುತ್ತಿದೆ.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳುಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಟೆಸ್ಟ್ ಸರಣಿಯಿಂದ ಬೆನ್ ಸ್ಟೋಕ್ಸ್ ಹಿಂದೆ ಸರಿದಿರುವುದಕ್ಕೆ ಸ್ಪಷ್ಟ ಕಾರಣವೇನೆಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ತಿಳಿಸಿಲ್ಲ. ಆದರೆ ಅನಾರೋಗ್ಯದ ಕಾರಣ ತಂದೆ ಗೆಡ್ ಸ್ಟೋಕ್ಸ್ ಆಸ್ಪತ್ರೆಯಲ್ಲಿರುವುದರಿಂದ ಸ್ಟೋಕ್ಸ್ ಸರಣಿಯಿಂದ ದೂರ ಉಳಿಯುವ ನಿರ್ಧಾರ ತಾಳಿದ್ದಾರೆ ಎನ್ನಲಾಗಿದೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಕಳೆದ ವರ್ಷ ಕ್ರಿಸ್ಮಸ್‌ಗೆ 2 ದಿನ ಇರುವಾಗ, ನ್ಯೂಜಿಲೆಂಡ್‌ನ ಮಾಜಿ ಅಂತಾರಾಷ್ಟ್ರೀಯ ರಗ್ಬಿ ಲೀಗ್ ಆಟಗಾರರಾಗಿರುವ ಗೆಡ್ ಸ್ಟೋಕ್ಸ್ ತೀವ್ರ ಅನಾರೋಗ್ಯದ ಕಾರಣ ಜೋಹಾನ್ಸ್‌ಬರ್ಗ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಸಮಯ ಇಂಗ್ಲೆಂಡ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಬೆನ್ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದರು.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳುಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಆರೋಗ್ಯ ಸಮಸ್ಯೆಯಲ್ಲಿದ್ದ ಗೆಡ್ ಅವರನ್ನು ನ್ಯೂಜಿಲೆಂಡ್‌ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆವತ್ತು ತಂದೆಯ ಆನಾರೋಗ್ಯದ ಹೊರಗಿಯೂ ಸ್ಟೋಕ್ಸ್, ಟೆಸ್ಟ್ ಸರಣಿಯಲ್ಲಿ ಸರಣಿಶ್ರೇಷ್ಠರಾಗಿ ಗುರುತಿಸಿಕೊಂಡಿದ್ದರು. ಆ ಸರಣಿಯಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3-1ರ ಜಯ ಸಾಧಿಸಿತ್ತು.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ಸ್ಟೋಕ್ಸ್ ಮುಂದಿನ ವಾರ ನ್ಯೂಜಿಲೆಂಡ್‌ಗೆ ಪ್ರಯಾಣಿಸಲಿದ್ದಾರೆ ಎಂದು ಇಸಿಬಿ ಈ ಬಾರಿ ಹೇಳಿದೆ. ಹೀಗಾಗಿ ಸ್ಟೋಕ್ಸ್ ತಂದೆಗೆ ಅನಾರೋಗ್ಯ ಉಲ್ಬಣಿಸಿರಬಹುದು ಎಂದು ನಂಬಲಾಗಿದೆ. ಇಂಗ್ಲೆಂಡ್-ಪಾಕಿಸ್ತಾನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0ಯ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ಆಗಸ್ಟ್ 13ರಂದು ಆರಂಭವಾಗಲಿದೆ.

Story first published: Monday, August 10, 2020, 9:15 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X