ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಗನ್ ಬದಲು ಸುನಿಲ್ ನರೈನ್ ಬ್ಯಾಟಿಂಗ್‌ಗೆ ಬಂದಿದ್ದು ಏಕೆ?: ಬೆನ್ ಸ್ಟೋಕ್ಸ್‌

Ben Stokes Questions KKRs Decision To Send Sunil Narine Ahead Of Eoin Morgan

ಅಬುದಾಬಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಕೊಲ್ಕತ್ತಾ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಇಯಾನ್ ಮಾರ್ಗನ್ ಹೊರತಾಗಿಯೂ ಸುನಿಲ್‌ ನರೈನ್‌ಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿದ್ದರ ಕುರಿತು ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ ಪ್ರಶ್ನಿಸಿದ್ದಾರೆ.

ಸಿಎಸ್‌ಕೆ ವಿರುದ್ಧ 10 ರನ್‌ಗಳ ಜಯ ದಾಖಲಿಸುವುದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೆಕೆಆರ್ ರಾಹುಲ್ ತ್ರಿಪಾಠಿ ಮತ್ತು ಶುಭ್ಮನ್ ಗಿಲ್‌ರೊಂದಿಗೆ ಇನ್ನಿಂಗ್ಸ್‌ ಪ್ರಾರಂಭಿಸಿತು.

ಭಾವುಕ ಭಾಷಣದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ತೊರೆದ ಅಮಿತ್ ಮಿಶ್ರಾ ಭಾವುಕ ಭಾಷಣದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ತೊರೆದ ಅಮಿತ್ ಮಿಶ್ರಾ

ರಾಹುಲ್ ತ್ರಿಪಾಠಿ ಒಂದೆಡೆ ಉತ್ತಮವಾಗಿ ಆಡಿದ್ರೆ, ಶುಭ್ಮನ್ ಗಿಲ್, ನಿತೀಶ್ ರಾನಾ ಬೇಗನೆ ಔಟಾದ್ರು. ಆದರೆ ನಂತರದಲ್ಲಿ ದಿನೇಶ್ ಕಾರ್ತಿಕ್ ಇಲ್ಲವೇ ಇಯಾನ್ ಮಾರ್ಗನ್ ಕಣಕ್ಕಿಳಿಯಬಹುದು ಎಂಬುದನ್ನ ನಿರೀಕ್ಷಿಸಲಾಗಿತ್ತು. ಆದರೆ ಸತತ ಪಂದ್ಯಗಳಲ್ಲಿ ವಿಫಲರಾದ ಸುನಿಲ್ ನರೈನ್ ಬಂದಿದ್ದು ಆಶ್ಚರ್ಯಕ್ಕೆ ಕಾರಣವಾಯಿತು.

Ben Stokes Questions KKRs Decision To Send Sunil Narine Ahead Of Eoin Morgan

ಮಾರ್ಗನ್ , ಕಾರ್ತಿಕ್‌ ರಂತಹ ಬ್ಯಾಟ್ಸ್‌ಮನ್‌ಗಳಿದ್ದರೂ ನರೈನ್‌ರನ್ನ ಕಳುಹಿಸಿದ್ದು ಏಕೆ ಎಂದು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಪ್ರಶ್ನಿಸಿದ್ದಾರೆ. ರಾಜಸ್ತಾನ್ ರಾಯಲ್ಸ್ ಪರ ಕಣಕ್ಕಿಳಿಯಲು ರೆಡಿಯಾಗಿರುವ ಬೆನ್‌ ಸ್ಟೋಕ್ಸ್‌ಗೆ ಟ್ವೀಟ್‌ಗೆ ಯುವರಾಜ್ ಸಿಂಗ್ ಉತ್ತರಿಸಿದ್ದು, ಸ್ಟೋಕ್ಸ್‌ ಕಾಲು ಎಳೆಯಲು ಪ್ರಯತ್ನಿಸಿದರು.

ಅವರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು,''ಕೆಲವೊಮ್ಮೆ ಬ್ಯಾಟಿಂಗ್ ಮಾಡುವ ಬೌಲರ್‌ನನ್ನು ಸರಿಯಾದ ಬ್ಯಾಟ್ಸ್‌ಮನ್‌ಗಿಂತ ಮುಂಚಿತವಾಗಿ ಸ್ಲಾಗ್ ಮಾಡಲು ಕಳುಹಿಸಬೇಕು.'' ಹೌದು ಇದು ಯುವರಾಜ್‌ಗೆ ಮೊದಲು ಸ್ಟೋಕ್ಸ್‌ನಂತಿದೆ." ಎಂದು ಯುವರಾಜ್ ಅವರು ಕಾಲೆಳೆದಿದ್ದಾರೆ.

ಸುನಿಲ್ ನರೈನ್ 9 ಎಸೆತಗಳನ್ನು ಎದುರಿಸಿ 19 ರನ್ ಕಲೆಹಾಕಿದರು. ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದರು. ಕೆಕೆಆರ್ ನೀಡಿದ 168ರನ್ ಬೆನ್ನತ್ತಲಾಗದೇ ಸಿಎಸ್‌ಕೆ ಪಂದ್ಯ ಸೋತಿತು.

Story first published: Thursday, October 8, 2020, 9:54 [IST]
Other articles published on Oct 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X