ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ 3ನೇ ಟೆಸ್ಟ್ ಗೆ ಇಂಗ್ಲೆಂಡ್ ತಂಡಕ್ಕೆ ಮರಳಿದ ಬೆನ್ ಸ್ಟೋಕ್ಸ್

ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ ಬೆನ್ ಸ್ಟೋಕ್ಸ್..!
Ben Stokes to rejoin England squad ahead of third Test

ಲಂಡನ್, ಆಗಸ್ಟ್ 15: ಬ್ರಿಸ್ಟಲ್ ನೈಟ್ ಕ್ಲಬ್ ನಲ್ಲಿನ ಹೊಡೆದಾಟಕ್ಕೆ ಸಂಬಂಧಿಸಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಅವರು ನಿರಪರಾಧಿ ಎಂದು ಬ್ರಿಸ್ಟಲ್ ಕ್ರೌನ್ ಕೋರ್ಟ್ ತೀರ್ಪಿತ್ತ ಬೆನ್ನಲ್ಲೇ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಸೇರಿಕೊಂಡಿದ್ದಾರೆ. ಮೊದಲ ಟೆಸ್ಟ ನಲ್ಲಿ ಪಾಲ್ಗೊಂಡಿದ್ದ ಸ್ಟೋಕ್ಸ್ ದ್ವಿತೀಯ ಟೆಸ್ಟ್ ನಲ್ಲಿ ಹೊರಗುಳಿದಿದ್ದರು.

ಹೊಡೆದಾಟ ಆರೋಪ: ಬೆನ್ ಸ್ಟೋಕ್ಸ್ ನಿರಪರಾಧಿಯೆಂದ ನ್ಯಾಯಾಲಯಹೊಡೆದಾಟ ಆರೋಪ: ಬೆನ್ ಸ್ಟೋಕ್ಸ್ ನಿರಪರಾಧಿಯೆಂದ ನ್ಯಾಯಾಲಯ

ನ್ಯೂಜಿಲ್ಯಾಂಡ್ ನಲ್ಲಿ ಜನಿಸಿರುವ 27ರ ಹರೆಯದ ಆಲ್ ರೌಂಡರ್ ಸ್ಟೋಕ್ಸ್, ಮೊದಲ ಟೆಸ್ಟ್ ನಲ್ಲಿ ಭಾರತದ 6 ವಿಕೆಟ್ ಕಬಳಿಸಿದ್ದರು. ಬ್ರಿಸ್ಟಲ್ ನೈಟ್ ಕ್ಲಬ್ ನಲ್ಲಿ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸಬೇಕಿದ್ದ ಕಾರಣ ಅವರು ದ್ವಿತೀಯ ಟೆಸ್ಟ ನಿಂದ ಹೊರಬೀಳುವಂತಾಗಿತ್ತು. ಆದರೆ ನ್ಯಾಯಾಲಯ ಬೆನ್ ನಿರಪರಾಧಿ ಎಂದು ತೀರ್ಪು ನೀಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ), 'ಟ್ರೆಂಡ್ ಬ್ರಿಡ್ಜ್ ನಲ್ಲಿ ಶನಿವಾರ (ಆ.18) ಆರಂಭಗೊಳ್ಳಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್ ಗಾಗಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಮರಳಿ ಸೇರಿಕೊಳ್ಳಲಿದ್ದಾರೆ' ಎಂದು ತಿಳಿಸಿದೆ.

'ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಬಹುತೇಕ ಮುಗಿದಿವೆ. ಬೆನ್ ಸ್ಟೋಕ್ಸ್ ಮತ್ತು ಅಲೆಕ್ಸ್ ಹೇಲ್ಸ್ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿ ಕ್ರಿಕೆಟ್ ಶಿಸ್ತು ಸಮಿತಿ ನಿರ್ಧಾರಗಳನ್ನು ಕೈಗೊಳ್ಳಲಿದೆ' ಎಂದು ಇಸಿಬಿ ವಿವರಿಸಿತು.

Story first published: Wednesday, August 15, 2018, 12:05 [IST]
Other articles published on Aug 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X